ಕಾರ್ಕಳ:ಸ್ವಾಮಿ ವಿವೇಕಾನಂದರ ಚಿಂತನೆಗಳು ಇಂದಿನ ಯುವ ಸಮುದಾಯಕ್ಕೆ ಪ್ರಸ್ತುತ ಸಮಾಜದ ಯುವಕರಿಗೆ ಸ್ಪೂರ್ತಿದಾಯಕ ಮತ್ತು ಅಗತ್ಯ- ವಿನಯ್ ಬಿದ್ರೆ-Times of karkala

ಕಾರ್ಕಳ:19ನೇ ಶತಮಾನದಲ್ಲಿ ಜೀವಿಸಿದ್ದ ಸ್ವಾಮಿವಿವೇಕಾನಂದರ ಚಿಂತನೆಗಳು ಪ್ರಸ್ತುತ ಕಾಲದಲ್ಲೂ ಹೆಚ್ಚು ಚರ್ಚಿತ ಹಾಗೂ ಇಂದಿನ ಯುವ ಸಮುದಾಯಕ್ಕೆ ಹೆಚ್ಚು ಅಗತ್ಯ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ವಿನಯ್ ಬಿದ್ರೆ ಹೇಳಿದರು. ಕಾರ್ಕಳದ ಮಂಜುನಾಥ ಪೈ ಸಭಾಂಗಣದಲ್ಲಿ ಬಿಜೆಪಿ ಯುವ ಮೋರ್ಚ ಕಾರ್ಕಳದ 2000ದಲ್ಲಿ ನಡೆದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡುತ್ತಾ ಜಗತ್ತಿಗೆ ಭಾರತದ ಶಕ್ತಿ ಯನ್ನು ತೋರಿಸಿ ಸನಾತನಧರ್ಮದ ಶ್ರೇಷ್ಠತೆಯನ್ನು ತಿಳಿಸಿದ ಸ್ವಾಮಿವಿವೇಕಾನಂದರು ಎಲ್ಲಾ ಕಾಲದ ಯುವಕರಿಗೂ ಸ್ಪೂರ್ತಿದಾಯಕ ಎಂದು ಹೇಳಿದರು.

ಕಾರ್ಕಳ ಶಾಸಕ ಸುನಿಲ್ ಕುಮಾರ್ ಮಾತನಾಡಿ ಸ್ವಾಮಿ ವಿವೇಕಾನಂದರು ತಮ್ಮ ಜೀವನದಲ್ಲಿ ಎದುರಿಸಿದ ಸವಾಲುಗಳು ಮತ್ತು ಅದನ್ನು ಮೆಟ್ಟಿನಿಂತ ಅವರ ಸಾಧನೆ ಯುವಮೋರ್ಚಾದ ಕಾರ್ಯಕರ್ತರು ತಿಳಿಯಬೇಕು ಪ್ರಸ್ತುತ ರಾಜಕೀಯ ರಂಗದಲ್ಲಿ ಬರುವಂತಹ ಸವಾಲುಗಳನ್ನ ಮೆಟ್ಟಿನಿಲ್ಲುವ ಪ್ರಯತ್ನವನ್ನು ಯುವ ರಾಜಕಾರಣಿಗಳು ಮಾಡಬೇಕು ಎಂದರು.

ಕಾರ್ಕಳ ಯುವ ಮೋರ್ಚಾ ಅಧ್ಯಕ್ಷ ಮುಟ್ಲುಪಾಡಿ ಸುಹಾಸ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಶ್ವೇತ ಪೂಜಾರಿ ಕಾರ್ಕಳ ಮಂಡಲ ಅಧ್ಯಕ್ಷ ಮಹಾವೀರ ಹೆಗಡೆ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ ಶೆಟ್ಟಿ ಪ್ರಧಾನ ಕಾರ್ಯದರ್ಶಿ ಶರತ್ ಉಪ್ಪುಂದ, ಕಾರ್ಕಳ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಯೋಗೀಶ್ ಸಾಲಿಯಾನ್ ಮತ್ತು ಭರತ್ ಕುಮಾರ್ ಜೈನ್, ಜಿಲ್ಲಾ ಪದಾಧಿಕಾರಿಗಳಾದ ಸುಮಿತ್ ಮಡಿವಾಳ ಅವಿನಾಶ್ ಶೆಟ್ಟಿ ಉಪಸ್ಥಿತರಿದ್ದರು. ರಾಕೇಶ್ ಶೆಟ್ಟಿ ವೈಯಕ್ತಿಕ ಗೀತೆ ಹಾಡಿ  ಕೌಶಿಕ್ ಅಮೀನ್ ಮುನಿಯಾಲ್ ಕಾರ್ಯಕ್ರಮ  ನಿರೂಪಿಸಿದರು.


ಜಾಹೀರಾತು 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget