ಜಿಲ್ಲಾ ಪಂಚಾಯಿತಿ ಉಡುಪಿ, ತಾಲೂಕು ಪಂಚಾಯಿತಿ ಕಾರ್ಕಳ, ಗ್ರಾಮ ಪಂಚಾಯಿತಿ ಮುಂಡರು, ಪಶುಸಂಗೋಪನೆ ಇಲಾಖೆ ಕಾರ್ಕಳ, ಅಹಿಂಸಾ ಪೇಟ್ ಕೇರ್ ಕ್ಲಬ್ ಬಜಗೋಳಿ ಹಾಗೂ ರೋಟರಿ ಆನ್ಸ್ ಕ್ಲಬ್ ಕಾರ್ಕಳ, ಜೈನಧರ್ಮ ಶಾಲೆ ಟ್ರಸ್ಟ್ ಬಜಗೋಳಿ ಇವರ ಜಂಟಿ ಆಶ್ರಯದಲ್ಲಿ ಶ್ವಾನಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ, ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಕಾರ್ಯಕ್ರಮ ಮತ್ತು ಷಟಲ್ ಬ್ಯಾಡ್ಮಿಟನ್ ಪಂದ್ಯಕ್ಕೆ ಚಾಲನೆ ನೀಡಲಾಯಿತು.
ದಿನಾಂಕ 03-01- 2021 ಭಾನುವಾರ ದಂದು ಬಜಗೋಳಿ ಸಮೀಪದ ಅಹಿಂಸಾ ಪೇಟ್ ಕೇರ್ ಸಂಸ್ಥೆಯಲ್ಲಿ ಒಟ್ಟು 80 ನಾಯಿ ಗಳಿಗೆ ಶಸ್ತ್ರಚಿಕಿತ್ಸೆ, 120 ಶ್ವಾನಗಳಿಗೆ ಉಚಿತ ಲಸಿಕೆಯನ್ನು ನೀಡಲಾಯಿತು. ಡಾ. ವಸುದೇವ ಪೈ ನಿಟ್ಟೆ ತಂಡದವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಹಾವೀರ ಜೈನ್ ಅವರು ದೇಸಿ ನಾಯಿಗಳ ಬಗ್ಗೆ ಕಾಳಜಿ, ಪ್ರೀತಿಯನ್ನು ತೋರಿಸಿ ಅದಕ್ಕೂ ಬದುಕಲು ಬಿಡಿ ಎಂದು ಸಂದೇಶವನ್ನು ನೀಡಿದರು. ಸನ್ಮಾನಿತರಾದ ಡಾ. ವಾಸುದೇವ ಪೈ ರವರು ನಿರಂಜನ್ ಹೆಗಡೆ ಅವರ ನಿಸ್ವಾರ್ಥ ಸೇವೆ ಎಲ್ಲರಲ್ಲೂ ಮೂಡಿಬರಬೇಕು ಪ್ರಾಣಿಗಳ ಮೇಲೆ ಇರುವ ಪ್ರೀತಿ ಅಪಾರವಾದದ್ದು ಎಂದು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ರೋಟರಿ ಆನ್ಸ್ ಕ್ಲಬ್ಬಿನ ಅಧ್ಯಕ್ಷೆ ರೋ. ರಮಿತಾ ಶೈಲೇಂದ್ರ ರವರು ಬೀದಿನಾಯಿಗಳನ್ನು, ಬೀದಿನಾಯಿ ಅನ್ನುವ ಬದಲು ದೇಸಿ ನಾಯಿಗಳು ಎಂದು ಹೇಳಿ ನಮ್ಮ ಭಾರತೀಯ ನಾಯಿಗಳಿಗೆ ಗೌರವನ್ನು ನೀಡೋಣ ಎಂದು ಹೇಳಿದರು. ಶ್ವಾನ ಪ್ರೇಮಿ ಉಷಾ ಸುವರ್ಣ ಮಂಗಳೂರು, ಪವರ್ ಪಾಯಿಂಟ್ ಮಹಾವೀರ್ ಜೈನ್ ಮತ್ತು ಲಲಿತಮ್ಮ ಹೆಗಡೆ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆ ನಲ್ಲೂರು ಶಾಲೆಯ ಮುಖ್ಯಶಿಕ್ಷಕ ನಾಗೇಶ್ ಅವರು ಮಾಡಿದರು.
Post a comment