ಹೆಬ್ರಿ:ಸಾಲುಮರದ ತಿಮ್ಮಕ್ಕ ವೃಕ್ಷೋಧ್ಯಾನವನದ ಸಸ್ಯೋಧ್ಯಾನ ನಿರ್ವಹಣಾ ಸಮಿತಿ ರಚನಾ ಸಭೆ. ಹೆಬ್ರಿಯ ಟ್ರೀ ಪಾರ್ಕ್‌ ರಾಷ್ಟ್ರಕ್ಕೆ ಮಾದರಿಯಾಗಲಿ : ಡಿಎಫ್‌ಒ ಆಶೀಶ್‌ ರೆಡ್ಡಿ.-Times of karkala

 ಹೆಬ್ರಿ : ಅರಣ್ಯ ಇಲಾಖೆಯು ಹೆಬ್ರಿಯಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷೋಧ್ಯಾನವನವನ್ನು ನಿರ್ಮಿಸಿ ಜನೋಪಯೋಗಕ್ಕೆ ಸಮರ್ಪಿಸಿದೆ. ಪ್ರಕೃತಿರಮಣೀಯ ಸಸ್ಯೋಧ್ಯಾನವನದಲ್ಲಿ ಸಮಸ್ತ ಜನರ ಸಹಭಾಗಿತ್ವ ಮತ್ತು ಪಾಲು ಇದೆ. ಪಾರ್ಕ್‌ ಅನ್ನು ಎಲ್ಲರೂ ಕೈಜೋಡಿಸಿ ಅತ್ಯುತ್ತಮವಾಗಿ ನಿರ್ವಹಿಸಿ ರಾಷ್ಟ್ರದ ಪ್ರತಿಷ್ಠಿತ ಉದ್ಯಾನವನವಾಗಿ ರೂಪಿಸಲು ಎಲ್ಲರೂ ಸಹಕರಿಸುವಂತೆ ಹೆಬ್ರಿ ಸಾಲುಮರದ ತಿಮ್ಮಕ್ಕ ವೃಕ್ಷೋಧ್ಯಾನವನದ ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ಕುಂದಾಪುರ ಉಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್‌ ರೆಡ್ಡಿ ಮನವಿ ಮಾಡಿದರು.

ಅವರು ಸೋಮವಾರ ಅರಣ್ಯ ಇಲಾಖೆಯ ಹೆಬ್ರಿಯ ಸಾಲುಮರದ ತಿಮ್ಮಕ್ಕ ವೃಕ್ಷೋಧ್ಯಾನವನದ ಸೋಮವಾರ ನಡೆದ ಸಸ್ಯೋಧ್ಯಾನ ನಿರ್ವಹಣಾ ಸಮಿತಿಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ಕಾರವು ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಟ್ರೀ ಪಾರ್ಕ್‌ ರಚನೆಗೆ ಯೋಜನೆ ರೂಪಿಸಿದೆ. ಕುಂದಾಪುರ ಉಪ ವಿಭಾಗದಲ್ಲಿ ಈಗ ಹೆಬ್ರಿ ಉಡುಪಿಯ ಬಡಗಬೆಟ್ಟು ಮತ್ತು ಮೂಡಬಿದರೆಯ ಕಡಲಕೆರೆ ಪಾರ್ಕ್‌ ಜನರ ಉಪಯೋಗಕ್ಕೆ ಸಿದ್ಧವಾಗಿದೆ. ಕಡಲಕೆರೆ ಮತ್ತು ಉಡುಪಿ ಟ್ರೀ ಪಾರ್ಕ್‌ ಅತ್ಯುತ್ತಮ ಪಾರ್ಕ್‌ ಖ್ಯಾತಿಗಳಿಸಿದ್ದು ಹೆಬ್ರಿಯ ಪಾರ್ಕ್ ನ್ನು ಇನ್ನಷ್ಟು ಆಕರ್ಷಣೆಯ ಮೂಲಕ ವಿನ್ಯಾಯಗೊಳಿಸಿ ಜನರ ಮನಸೂರೆಗೊಳ್ಳುವಂತೆ ಮಾಡಿ ಮಾದರಿ ಸಸ್ಯೋಧ್ಯಾನವಾಗಿ ರೂಪುಗೊಳಿಸುತ್ತೇವೆ. ಅರಣ್ಯ ಇಲಾಖೆಯ ಜೊತೆಗೆ ಸಂಬಂಧಿಸಿ ಎಲ್ಲಾ ಇಲಾಖೆಯವರು, ಜನಪ್ರತಿನಿಧಿಗಳು, ಗ್ರಾಮ ಅರಣ್ಯ ಸಮಿತಿ ಮತ್ತು ಸ್ಥಳೀಯರು ಕೈಜೋಡಿಸುವಂತೆ ಡಿಎಫ್‌ಒ ಆಶೀಶ್‌ ರೆಡ್ಡಿ ಮನವಿ ಮಾಡಿದರು.

ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುವ ಹೆಬ್ರಿ ವಲಯ ಅರಣ್ಯಾಧಿಕಾರಿ ಮಾರ್ಕಾಂಡೆಯ ಅವರು ಪಾರ್ಕಿನ ರೂಪುರೇಷೆ, ವಿವರ ಪ್ರಕಟಿಸಿದರು.

ಮೂಡಬಿದಿರೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್‌, ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್‌ ಜಿ.ಎಸ್.‌ ಉಡುಪಿ ಪ್ರವಾಸೋಧ್ಯಮ ಇಲಾಖೆಯ ರಮೇಶ್‌, ಹೆಬ್ರಿ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಎಚ್.‌ ಜಯಕರ ಪೂಜಾರಿ, ಸದಸ್ಯ ಅಮರನಾಥ ಶೆಟ್ಟಿ, ಉಡುಪಿ ವಲಯ ಅರಣ್ಯಾಧಿಕಾರಿ ಕ್ಲೀಪರ್ಡ್‌ ಡಿಸೋಜ ಪಾರ್ಕ್‌,ಸಮಾಜಸೇವಕ ಪ್ರವೀಣ್‌ ಸೂಡ,ಪತ್ರಕರ್ತ ಸುಕುಮಾರ್‌ ಮುನಿಯಾಲ್‌ ಹೆಬ್ರಿ ಪಾರ್ಕ್‌ ಇನ್ನಷ್ಟು ಆಕರ್ಷಕವಾಗಲು ಮತ್ತು ನಾಡಿನಾದ್ಯಂತ ಪ್ರಚಾರ ನೀಡಲು ವಿವಿಧ ಸಲಹೆ ನೀಡಿದರು.

ಹೆಬ್ರಿ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಎಚ್.ಜಯಕರ ಪೂಜಾರಿ ಮಾತನಾಡಿ ಶಾಸಕ ಸುನೀಲ್‌ ಕುಮಾರ್‌ ಅರಣ್ಯ ಸಚಿವ ಆನಂದ್‌ ಸಿಂಗ್‌ ಅವರಿಗೆ ಮನವಿ ಮಾಡಿ ಹೆಬ್ರಿ ಪಾರ್ಕಿನ ಇನ್ನಷ್ಟು ಅಭಿವೃದ್ಧಿಗೆ ಅನುದಾನ ನೀಡುವಂತೆ ಮನವಿ ಮಾಡಲಾಗುವುದು ಎಂದರು.

ಗ್ರಾಮ ಅರಣ್ಯ ಸಮಿತಿಯ ಸದಸ್ಯ ಕಾರ್ಯದರ್ಶಿ ಪ್ರಮೋದ್‌, ಅರಣ್ಯ ಇಲಾಖೆಯ ಹೆಬ್ರಿ ವಲಯದ ಅಧಿಕಾರಿಗಳು ಮತ್ತಿತರರು ಭಾಗವಹಿಸಿದ್ದರು.ಹೆಬ್ರಿ ಆರ್‌ಎಫ್‌ಒ ಮಾರ್ಕಾಂಡೇಯ ಸ್ವಾಗತಿಸಿ ವಂದಿಸಿದರು.


ಫೆಬ್ರವರಿಯಲ್ಲಿ ಹೆಬ್ರಿ ಫಾರ್ಕ್‌ ಅಧೀಕೃತ ಉದ್ಘಾಟನೆ : ಡಿಎಫ್‌ಒ ಆಶೀಶ್‌ ರೆಡ್ಡಿ.

ಹೆಬ್ರಿಯ ಟ್ರೀಪಾರ್ಕ್‌ ಈಗ ಜನರ ಉಪಯೋಗಕ್ಕೆ ಕಳೆದ ಹಲವು ಸಮಯದಿಂದ ಮುಕ್ತವಾಗಿದ್ದರೂ ಅಧೀಕೃತ ಉದ್ಘಾಟನೆಯಾಗಿಲ್ಲ. ಫೆಬ್ರವರಿ ತಿಂಗಳಿನಲ್ಲಿ ಅರಣ್ಯ ಸಚಿವ ಆನಂದ್‌ ಸಿಂಗ್‌ ಅವರು ಅಧೀಕೃತವಾಗಿ ಉದ್ಘಾಟಿಸುವರು ಎಂದು  ಡಿಎಫ್‌ಒ ಆಶೀಶ್‌ ರೆಡ್ಡಿ ತಿಳಿಸಿದರು.


ಜಾಹೀರಾತು Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget