ಶಿವಪುರ :"ಪಕ್ಷದ ಕಾರ್ಯಕರ್ತರೇ ನಮ್ಮ ಆಸ್ತಿ"-ಶಾಸಕ ಸುನೀಲ್‌ ಕುಮಾರ್-Times of karkala

ಶಿವಪುರ:ಮತದಾರರು, ಕಾರ್ಯಕರ್ತರು ಮತ್ತು ನೂತನ ಪಂಚಾಯಿತಿ ಸದಸ್ಯರಿಗೆ ಅಭಿನಂದನೆ.

ಹೆಬ್ರಿ:ಕಾರ್ಕಳ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯ ಜನನಾಯಕರು ಹಗಳಿರುಳು ದುಡಿದು ಕ್ಷೇತ್ರದಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲವು ಸಾಧಿಸಿಕೊಟ್ಟಿದ್ದಾರೆ. ಯಾವೂದೇ ಫಲಾಫೇಕ್ಷೆ ಇಲ್ಲದೆ ಪಕ್ಷಕ್ಕಾಗಿ ದುಡಿದವರಿಗೆ, ಅಭಿವೃದ್ಧಿಯನ್ನು ಬೆಂಬಲಿಸಿ ಬಿಜೆಪಿಗೆ ಮತನೀಡಿದ ಸರ್ವರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಕಾರ್ಕಳ ಶಾಸಕ ಸುನೀಲ್‌ ಕುಮಾರ್‌ ಹೇಳಿದರು.

ಅವರು ಶಿವಪುರದಲ್ಲಿ ಶನಿವಾರ ಕೆರೆಬೆಟ್ಟು ಶಿವಪುರ ಬಿಜೆಪಿ ಗ್ರಾಮ ಸಮಿತಿ ವತಿಯಿಂದ ಮತದಾರರು, ಕಾರ್ಯಕರ್ತರು ಮತ್ತು ನೂತನ ಪಂಚಾಯಿತಿ ಸದಸ್ಯರಿಗೆ ನಡೆದ ಅಭಿನಂದನಾ ಸಂಭ್ರಮದಲ್ಲಿ ಮಾತನಾಡಿದರು.

ಕಾರ್ಕಳ ಕ್ಷೇತ್ರ ಕಳೆದ ೧೦ ವರ್ಷದ ಹಿಂದೆ ಹೇಗಿತ್ತು ಯೋಚಿಸಿ, ನಾವು ಯಾವತ್ತೂ ಅಭಿವೃದ್ಧಿಯಲ್ಲಿ ತಾರತಮ್ಯ ಮಾಡಿಲ್ಲ. ಯಾವ ಪಂಚಾಯಿತಿಯಲ್ಲಿ ಬಿಜೆಪಿಗೆ ಅಧಿಕಾರ ಸಿಕ್ಕಿಲ್ಲವೋ ಅಲ್ಲಿ ಬಿಜೆಪಿಗೆ ಅಧಿಕಾರ ಸಿಕ್ಕಿದೆ. ಹಳ್ಳಿಹಳ್ಳಿಗೂ ಕಾಂಕ್ರೀಟ್‌ ರಸ್ತೆಯನ್ನು ಮಾಡಿದ್ದೇವೆ. ಇನ್ನಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಿದೆ. ಇದೆಲ್ಲ ಬಿಜೆಪಿಯ ಜನಪ್ರತಿನಿಧಿಗಳಿಂದ ಮಾತ್ರ ಸಾಧ್ಯ ಎಂದು ಶಾಸಕ ಸುನೀಲ್‌ ಕುಮಾರ್‌ ಹೇಳಿದರು.  

ಶಿವಪುರದ ಬಿಜೆಪಿಯ ನಾಯಕ ಹುಣ್ಸೆಯಡಿ ಸುರೇಶ ಶೆಟ್ಟಿ ಮಾತನಾಡಿ ಶಿವಪುರ ಕೆರೆಬೆಟ್ಟು ಗ್ರಾಮದ ಸಮಗ್ರ ಅಭಿವೃದ್ಧಿಯ ಪಣತೊಟ್ಟು ನಿರೀಕ್ಷೆಗೂ ಮೀರಿದ ೨೫ ಕೋಟಿಗೂ ಮಿಕ್ಕಿದ ಅಭಿವೃದ್ಧಿ ಕೆಲಸಗಳು ಆಗಿವೆ. ಇನ್ನಷ್ಟು ಕೆಲಸಗಳು ಆಗಬೇಕಿದೆ. ಜನತೆಗೆ ನಮ್ಮ ಮೇಲೆ ಭರವಸೆಯಿಟ್ಟು ಅಧಿಕಾರ ನೀಡಿದ್ದಾರೆ. ಸಾಕಷ್ಟು ಅಪಪ್ರಚಾರದ ನಡುವೆಯೂ ನಮಗೆ ಮತದಾರರ ಆಶೀರ್ವಾದ ಸಿಕ್ಕಿದೆ. ಜನಸೇವೆಗೆ ಮತ್ತಷ್ಟು ಪ್ರೇರಣೆ ಸಿಕ್ಕಿದೆ. ಜನಸೇವೆಯನ್ನು ಬೆಂಬಲಿಸಿ ಮತ ನೀಡಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ನೂತನ ಪಂಚಾಯಿತಿ ಸದಸ್ಯರನ್ನು ಗೌರವಿಸಲಾಯಿತು. ಶಿವಪುರ ಗ್ರಾಮದ ಖಜಾನೆ ಮತ್ತು ಕೆಳಖಜಾನೆಯ ವಿವಿಧ ಅಭಿವೃದ್ಧಿ ಯೋಜನೆಗಳನ್ನು ನೀಡಿ ಬಹುಕಾಲದ ಬೇಡಿಕೆ ಈಡೇರಿಸಿದ ಶಾಸಕ ಸುನೀಲ್‌ ಕುಮಾರ್‌ ಮತ್ತು ಜನನಾಯಕ ಸುರೇಶ ಶೆಟ್ಟಿ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು.

ಹೆಬ್ರಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಮೇಶ್‌ ಕುಮಾರ್‌ ಶಿವಪುರ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ,  ಹಿರಿಯ ಬಿಜೆಪಿ ನಾಯಕ ಎಂ.ಕೆ. ವಿಜಯ ಕುಮಾರ್‌, ಕಾರ್ಕಳ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಮಹಾವೀರ ಹೆಗ್ಡೆ, ಹೆಬ್ರಿ ಬಿಜೆಪಿ ಉಸ್ತುವಾರಿ ಎಚ್.ಗುರುದಾಸ ಶೆಣೈ, ಜಿಲ್ಲಾ ಪಂಚಾಯಿತಿ ಸದಸ್ಯೆ ಜ್ಯೋತಿ ಹರೀಶ ಪೂಜಾರಿ, ಪಕ್ಷದ ವಿವಿಧ ಘಟಕಗಳ ಮುಖಂಡರು ಇದ್ದರು.

ಜಾಹೀರಾತು 


Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget