ಕಾರ್ಕಳ:ಭೀಕರ ಹಲ್ಲೆ ನಡೆಸಿ ಅಳಿಯನೇ ಮಾವನನ್ನು ಕೊಲೆ ಮಡಿದ ಘಟನೆ ಕಾರ್ಕಳ ತಾಲೂಕು ಕಾರ್ಕಳ ಕಸಬ ಗ್ರಾಮದ ಹಂಚಿಕಟ್ಟೆ ನಡೆದಿದೆ.ಬಂಗ್ಲೆಗುಡ್ಡೆ ನಿವಾಸಿ ಶೇಖ್ಅಬೂಬಕ್ಕರ್(57) ಕೊಲೆಯಾದವರು.
ಘಟನೆಯ ವಿವರ:
ದಿನಾಂಕ 31/12/2020 ರಂದು ರಾತ್ರಿ 08:00 ಗಂಟೆಗೆ ಕಾರ್ಕಳ ತಾಲೂಕು ಕಾರ್ಕಳ ಕಸಬ ಗ್ರಾಮದ ಹಂಚಿಕಟ್ಟೆ ನಿವಾಸಿ ಶೇಖ್ಅಬೂಬಕ್ಕರ್ ಮನೆಯಲ್ಲಿ ತನ್ನ ಮಗಳ ಗಂಡ ತೌಸಿಪ್ ನಡುವೆ ಮಾತಿನ ಚಕಮಕಿ ನಡೆದು ತೌಸಿಫ್ಕೈಯಿಂದ ಶೇಖ್ಅಬೂಬಕ್ಕರ್ಇವರ ಎಡ ಕೆನ್ನೆಗೆ ಹೊಡೆದು ಬಲವಾಗಿ ದೂಡಿ ಹಾಕಿ ಕಾಲಿನಿಂದ ಮರ್ಮಾಂಗಕ್ಕೆ ಬಲವಾಗಿ ತುಳಿದಿದ್ದರಿಂದ ನೆಲಕ್ಕೆ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದರು.
ಶೇಖ್ಅಬೂಬಕ್ಕರ್ ರವರನ್ನು ಚಿಕಿತ್ಸೆಗಾಗಿ ಕಾರ್ಕಳ ಸಿಟಿ ನರ್ಸಿಂಗ್ ಹೋಮ್ ಗೆ ದಾಖಲಿಸಲಾಯಿತಾದರೂ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ವರ್ಗಾಯಿಸಲಾಯಿತು.ಆದರೆ ಅದಾಗಲೇ ದಾರಿ ಮಧ್ಯೆ ಅಬೂಬಕರ್ ಮೃತಪಟ್ಟಿದ್ದಾಗೆ ಕೆ ಎಂ ಸಿ ವೈದ್ಯರು ದೃಢಪಡಿಸಿದ್ದಾರೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾಹೀರಾತು
Post a comment