ರೆಂಜಾಳ:ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ-Times of karkala

ನಾಲ್ಕು ತಿಂಗಳಿನಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಹಿಳೆಯೋರ್ವರು ಮನನೊಂದು  ನೇಣು  ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರೆಂಜಾಳದಲ್ಲಿ ನಡೆದಿದೆ.

ರೆಂಜಾಳ  ಗ್ರಾಮದ ರಾಮಗಿರಿ ನಿವಾಸದ ಶ್ರೀಮತಿ ಗೌರಿ (51)ಆತ್ಮಹತ್ಯೆ ಮಾಡಿಕೊಂಡವರು.  ದಿನಾಂಕ: 27/01/2021 ರಂದು ರಾತ್ರಿ ಈ ಘಟನೆ ನಡೆದಿದೆ.ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್ ವರದಿ:

ಕಾರ್ಕಳ: ಶ್ರೀಮತಿ ಗೌರಿ  ಪ್ರಾಯ 51  ವರ್ಷ ಇವರು ಕಾರ್ಕಳ ತಾಲೂಕು ರೆಂಜಾಳ  ಗ್ರಾಮದ ರಾಮಗಿರಿ ನಿವಾಸದಲ್ಲಿ ಕುಟುಂಬದೊಂದಿಗೆ ವಾಸ ಮಾಡಿಕೊಂಡಿದ್ದು, ಸುಮಾರು ನಾಲ್ಕು ತಿಂಗಳಿನಿಂದ ಹೊಟ್ಟೆಯ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಇದೇ ಕಾರಣದಿಂದ ಮನನೊಂದು  ದಿನಾಂಕ: 27/01/2021 ರಂದು ರಾತ್ರಿ 10:00  ಗಂಟೆಯಿಂದ ದಿನಾಂಕ 28/01/2021 ಬೆಳಿಗ್ಗೆ 06:30  ಗಂಟೆಯ ನಡುವಿನ ಅವಧಿಯಲ್ಲಿ ಕುತ್ತಿಗೆಗೆ ನೇಣು  ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 02/2020  ಕಲಂ: 174  ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜಾಹೀರಾತು 


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget