ಕಾರ್ಕಳ:ಪಂಚಾಯತ್ ಚುನಾವಣೆಯಲ್ಲಿ ಗೆದ್ದ ವ್ಯಕ್ತಿಯೋರ್ವರು ಯಾರ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ದೂರಿದ್ದಾರೆ.
ಮಿಯಾರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲದೊಂದಿ ಮೀಸಲಾತಿಯಲ್ಲಿ ಗೆದ್ದ ವ್ಯಕ್ತಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.ಅಲ್ಲದೆ ಈ ನಾಪತ್ತೆ ಹೈಡ್ರಾಮಾದಲ್ಲಿ ಸ್ಥಳೀಯ ಮುಖಂಡರೊಬರ ಕೈವಾಡ ಇದೆ ಎಂದೂ ಮೀಯರು ಗ್ರಾಮಸಮಿತಿಯ ಅದ್ಯಕ್ಷ ತಾರನಾಥ್ ಕೊಟ್ಯಾನ್ ದೂರಿದ್ದಾರೆ.
ಮನೆಯವರ ಬಳಿ ವಿಚಾರಿಸಿದಾಗ ಅವರು ಭಯಪಟ್ಟಂತೆ ಕಾಣುತ್ತಿದ್ದು ಸರಿಯಾದ ಉತ್ತರ ನೀಡಲು ಹೆದರುತ್ತಿದ್ದಾರೆ.ಇಂದೂ ಬಾರದಿದ್ದರೆ ಪೋಲೀಸ್ ಠಾಣೆಗೂ ದೂರು ನೀಡಲು ಸಿದ್ದತೆ ನಡೆಸಲಾಗಿದೆ ಎಂದು ಹೇಳಿದ್ದಾರೆ.
"ಮಿಯಾರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನಮ್ಮ ಪಕ್ಷದ ಬೆಂಬಲದೊಂದಿಗೆ ಮೀಸಲಾತಿಯಲ್ಲಿ ಸ್ಪರ್ದಿಸಿ ಗೆದ್ದ ವ್ಯಕ್ತಿಯೊಬ್ಬರು ಎರಡು ದಿನಗಳಿಂದ ನಾಪತ್ತೆಯಾಗಿದ್ದಾರೆ ಮನೆಯವರನ್ನು ಸಂಪರ್ಕಸಿದರೆ ಅವರು ಭಯಪಟ್ಟಂತೆ ಕಾಣುತ್ತಿದ್ದು ಸರಿಯಾದ ಉತ್ತರ ನೀಡಲು ಹೆದರುತ್ತಿದ್ದಾರೆ.ಇದರ ಹಿಂದೆ ಸ್ಥಳೀಯ ಪ್ರಭಾವಿ ನಾಯಕರ ಕೈವಾಡವಿರುವ ಶಂಕೆ ಇದೆ. ಇಂದೂ ಬಾರದಿದ್ದರೆ ಗ್ರಾಮ ದೇವರಿಗೂ ಪೋಲೀಸ್ ಠಾಣೆಗೂ ದೂರು ನೀಡಲು ಸಿದ್ದತೆ ನಡೆಸಲಾಗಿದೆ.ನಮಗೆ ಬಹುಮತವಿಲ್ಲದಿದ್ದರೂ ನಮ್ಮ ಸದಸ್ಯರನ್ನು ಬಲವಂತವಾಗಿ ಕರೆದುಕೊಂಡು ಹೋಗಲಾಗಿದೆ ಎಂಬ ಬಲವಾದ ಸಂಶಯವಿದೆ ಮತ್ತು ಯಾವ ಉದೇಶಕ್ಕಾಗಿ ಈ ಪ್ರಕರಣ ನಡೆದಿದೋ ಅದು ನೆರವೇರಲು ಬಿಡುದಿಲ್ಲ" -ತಾರನಾಥ್ ಕೊಟ್ಯಾನ್,ಮೀಯರು ಗ್ರಾಮಸಮಿತಿಯ ಅದ್ಯಕ್ಷ
ಜಾಹೀರಾತು
Post a comment