ದೇಶ ಸೇವೆಯೇ ಈಶ ಸೇವೆ, ನಾವು ನಮ್ಮ ದೇಶವನ್ನು ಪ್ರೀತಿಸ ಬೇಕು ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತಲೂ ಮಿಗಿಲಾದುದು. ಬದುಕಿನ ಹಾದಿಯಲ್ಲಿ ಇವೆರಡನ್ನು ಮರೆಯಬಾರದು. ಇವೆರಡರ ಸೇವೆಯನ್ನು ಮಾಡುತ್ತಾ ಬದುಕಿನಲ್ಲಿ ಮುಂದೆ ಸಾಗುತ್ತಾ ಹೋದರೆ ಜೀವನ ಸಾರ್ಥಕವಾಗುವುದರಲ್ಲಿ ಸಂಶಯವಿಲ್ಲ. ನಾನು ನನ್ನದು ಎಂಬ ಭಾವನೆಯನ್ನು ಬಿಟ್ಟು ನಾವು ನಮ್ಮವರು ಎಂಬ ಭಾವನೆಯಿಂದ ಮುನ್ನಡೆದಾಗ ದೇಶ ಬೆಳಗಲು ಸಾದ್ಯ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಶ್ರೀಮತಿ ಸಾವಿತ್ರಿ ಮನೋಹರ್ ಹೇಳಿದರು.
ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯಲ್ಲಿ ೭೨ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಧ್ವಜಾರೋಹಣ ಗೈದು ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಜೆಕಾರು ಪದ್ಮಗೋಪಾಲ ಎಜುಕೇಶನ್ ಟ್ರಸ್ಟ್ನ ಟ್ರಸ್ಟಿ ಕರುಣಾಕರ ಶೆಟ್ಟಿ, ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ದಿನೇಶ್ ಎಂ. ಕೊಡವೂರು, ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಪ್ರಿನ್ಸಿಪಾಲ್ ಉಷಾ ರಾವ್ ಯು, ಉಭಯ ಸಂಸ್ಥೆಯ ವೈಸ್ ಪ್ರಿನ್ಸಿಪಾಲ್ಗಳಾದ ಶ್ರೀಸಾಹಿತ್ಯ ಹಾಗೂ ಶ್ರೀಮತಿ ವಾಣ ಜಯಶೀಲ್, ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಮತಿ ಜ್ಯೋತಿ ಪದ್ಮನಾಭ ಬಂಡಿ ಉಪಸ್ಥಿತರಿದ್ದರು. ಉಪನ್ಯಾಸಕ ರವಿ ಜಿ ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿ ವಂದಿಸಿದರು.
ಜಾಹೀರಾತು
Post a comment