ಪಡುಕುಡೂರು :ಹೆಬ್ರಿ ತಾಲ್ಲೂಕಿನ ಪಡುಕುಡೂರು ಹಾಲು ಉತ್ಪಾದಕರ ಸಹಕಾರಿ ಸಂಘದ ೧೩ ನಿರ್ದೇಶಕ ಮಂಡಳಿಗೆ ನಡೆಯಬೇಕಾಗಿದ್ದ ಚುನಾವಣೆಯಲ್ಲಿ ಪ್ರತೀ ಕ್ಷೇತ್ರಕ್ಕೂ ತಲಾ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿರುವ ಹಿನ್ನಲೆಯಲ್ಲಿ ಮಂಗಳವಾರ ಹಾಲಿ ಅಧ್ಯಕ್ಷರಾದ ಸಹಕಾರಿ ದುರೀಣ ಪಡುಕುಡೂರು ಜಗದೀಶ ಹೆಗ್ಡೆ ನೇತ್ರತ್ವದ ತಂಡ ಅವಿರೋಧವಾಗಿ ಆಯ್ಕೆಯಾಗಿದೆ.
ಹೃದಯ ಕುಮಾರ್ ಶೆಟ್ಟಿ, ಅಶೋಕ್ ಎಂ.ಶೆಟ್ಟಿ, ರವೀಂದ್ರ ಶೆಟ್ಟಿ, ಶ್ರೀಧರ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಸುಕೇಶ್ ಶೆಟ್ಟಿ, ದಿವಾಕರ ಶೆಟ್ಟಿ, ಸುಮತಿ ಪೂಜಾರಿ, ಸುಕನ್ಯಾ, ಸುರೇಶ ಪೂಜಾರಿ, ಪಡುಕುಡೂರು ಜಗದೀಶ ಹೆಗ್ಡೆ, ಸಂತೋಷ ನಾಯ್ಕ್ ಆಯ್ಕೆಯಾಗಿದ್ದಾರೆ. ಪರಿಶಿಷ್ಟ ಜಾತಿಯ ಮೀಸಲು ಸ್ಥಾನಕ್ಕೆ ಯಾರೂ ಸ್ಪರ್ಧಿಸಿಲ್ಲ. ಸಹಕಾರ ಇಲಾಖೆಯ ಜ್ಯೋತಿ ಡಿ ಚುನಾವಣಾ ಅಧಿಕಾರಿಯಾಗಿದ್ದರು. ಡೇರಿಯ ಕಾರ್ಯದರ್ಶಿ ಶಾರದಾಚಂದ್ರ ಶೆಟ್ಟಿ ಸಹಕರಿಸಿದರು.
ಜಾಹೀರಾತು
Post a comment