ಶಾಂತಿನಿಕೇತನದ ಸಮಗ್ರ ಸಾಧನೆಗೆ ಒಲಿದ ಭಾರತ ಗೌರವ ರಾಷ್ಟ್ರ ಪ್ರಶಸ್ತಿ-Times of karkala

ನಿರಂತರವಾಗಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿರುವ ಶಾಂತಿನಿಕೇತನ ಯುವ ವೃಂದಕ್ಕೆಜನ್ಮಭೂಮಿ ಫೌಂಡೇಶನ್ ರಿ. ಬೆಂಗಳೂರು  ಇವರು ಆಯೋಚಿಸುವ ರಾಷ್ಟ್ರೀಯ ಕಲಾ ಉತ್ಸವದಲ್ಲಿ ರಾಷ್ಟ್ರ ಮಟ್ಟದ ಸಾಧಕರಿಗೆ ನೀಡುವ ಭಾರತ ಗೌರವ ಪ್ರಶಸ್ತಿಗೆ ಶಾಂತಿನಿಕೇತನ ಯುವ ವೃಂದ ಆಯ್ಕೆಯಾಗಿದೆ.ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಗೋವಾದ ಮಾಸ್ಕೋ ದಲ್ಲಿ ಫೆಬ್ರವರಿ 14ರಂದು ನಡೆಯಲಿದೆ. 


ಸರ್ಕಾರಿ ಶಾಲೆಗಳಲ್ಲಿ ಯಶಸ್ವಿಯಾಗಿ  25  ಜ್ಞಾನಸ್ಪೂರ್ತಿ  ರಸಪ್ರಶ್ನೆ ಕಾರ್ಯಕ್ರಮ, ಬಸ್ಸು ತಂಗುದಾಣ ನವೀಕರಣ , ಕರೋನ ಸಂಕಷ್ಟದಲ್ಲಿ ಸಹಕಾರಿ ಬ್ಯಾಂಕ್ ಸ್ಥಾಪನೆ, ರಕ್ತದಾನ ಶಿಬಿರ ,  ಆರೋಗ್ಯ ತಪಾಸಣ ಶಿಬಿರ ಇಂತಹ ಸಮಾಜಮುಖಿ ಕೆಲಸಗಳು ಪ್ರಮುಖ ಪಾತ್ರ ವಹಿಸಿದೆ.

ಕಳೆದ ತಿಂಗಳು ಬಸವ ರತ್ನ ರಾಷ್ಟ್ರ ಪ್ರಶಸ್ತಿ, ಉಡುಪಿ ಕೃಷ್ಣ ಮಠದ ಐನೂರನೇ ಪರ್ಯಾಯ ಉತ್ಸವದ ಸಂದರ್ಭದಲ್ಲಿ ಶ್ರೀಕೃಷ್ಣನುಗ್ರಹ ಪ್ರಶಸ್ತಿ , ಕಡ್ತಲದಲ್ಲಿ ನಡೆದ ಗ್ರಾಮ ಸಾಹಿತ್ಯ ಸಮ್ಮೇಳನದಲ್ಲಿ    ಗ್ರಾಮೋತ್ಸವ ಸಂಘ ಸಿರಿ ಗೌರವ  ಹಾಗೂ ಹೆಬ್ರಿ ತಾಲೂಕಿನ ಗಣರಾಜ್ಯೋತ್ಸವ ಸಂದರ್ಭದಲ್ಲಿ  ಸಂಘಕ್ಕೆ ಗೌರವ ಸಿಕ್ಕಿರುವುದನ್ನು ಗಮನಿಸಬಹುದು.


ಜಾಹೀರಾತು Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget