ಕಾರ್ಕಳ: ದಿನಾಂಕ 24/01/2021 ರಂದು ಮಧ್ಯಾಹ್ನ 3:00 ಗಂಟೆಗೆ ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದ ಹಂಪನಕಟ್ಟೆ ಬಳಿಯ ಪಳ್ಳಿ-ಕಟ್ಟಿಂಗೇರಿ ರಾಜ್ಯ ಹೆದ್ದಾರಿಯಲ್ಲಿ ಮುರುಗೇಶ ಎಂಬವರು ತನ್ನ ಬೈಕ್ ನಲ್ಲಿ ಚಂದ್ರಹಾಸ, ಹಾಗೂ ಗೋಪಾಲ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಕಟ್ಟಿಂಗೇರಿ ಕಡೆಯಿಂದ ಪಳ್ಳಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಪಳ್ಳಿ ಕಡೆಯಿಂದ ಕಟ್ಟಿಂಗೇರಿ ಕಡೆಗೆ ಟಿಪ್ಪರ್ ನಂಬ್ರ KA-49-5892 ನೇಯದರ ಚಾಲಕ ವಿಶ್ವನಾಥ ಎಂಬಾತನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲಿಗೆ ಢಿಕ್ಕಿ ಹೊಡೆದ ಪರಿಣಾಮ ಚಂದ್ರಹಾಸ ರವರ ಎರಡೂ ಕಾಲುಗಳಿಗೆ ಹಾಗೂಎದೆಗೆ ತೀವ್ರ ಸ್ವರೂಪದ ಗಾಯಗಳಾಗಿದೆ.
ಗೋಪಾಲ ಮತ್ತು ಮುರುಗೇಶರವರ ಬಲಕಾಲು ಒಳಜಖಂಗೊಂಡಿದ್ದು ಹಾಗೂ ಬಲಕೈಗೆ ರಕ್ತ ಗಾಯವಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಜಾಹೀರಾತು
Post a comment