ಕಾರ್ಕಳದಲ್ಲಿ ಕಾಂಗ್ರೆಸ್ಸಿನ ಬಿನ್ನಮತದಿಂದ ಕಾಂಗ್ರೆಸಿಗರಿಂದಲೇ ಲಾಂಗ್ ಮಚ್ಚಿನಿಂದ ಹೊಡೆದಾಟ"-ಬಿಜೆಪಿ ಯುವ ಮೋರ್ಚಾ ಖಂಡನೆ-Times of karkala
ಕಾರ್ಕಳ:ಯುವ ಕಾಂಗ್ರೆಸ್ಸಿನ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಕಳದಲ್ಲಿ ನಡೆಯುತ್ತಿದೆ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ,ಪಕ್ಷದ ಆಂತರಿಕ ಹುದ್ದೆಗಾಗಿ ನಡೆಯುತ್ತಿರುವ ಚುನಾವಣೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಲಾಂಗು ಮಚ್ಚುಗಳನ್ನು ಹಿಡಿದು ಹೊಡೆದಾಡುವ ಘಟನೆ ಬಜಗೋಳಿ ಭಾಗದಲ್ಲಿ ನಡೆದಿರುವುದು ಖಂಡನೀಯ ಎಂದು ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ ಹಾಗೂ ಕಾರ್ಕಳ ತಾಲೂಕು ಯುವಮೋರ್ಚಾ ಅಧ್ಯಕ್ಷ ಸುಹಾಸ್ ಶೆಟ್ಟಿ ಮುಟ್ಲುಪಾಡಿ ತಿಳಿಸಿದ್ದಾರೆ.
ಕಾರ್ಯಕರ್ತನ ಮೇಲೆ ಲಾಂಗ್ ಮಚ್ಚುಗಳಿಂದ ಮಾರಣಾಂತಿಕ ನಡೆಸಿದ ಘಟನೆ ಪೊಲೀಸ್ ಠಾಣೆಯ ಮೆಟ್ಟಿಲೇರಿದರು ಕೂಡ ಹಿರಿಯ ಕಾಂಗ್ರೆಸ್ಸಿಗರ ಕುಮ್ಮಕ್ಕಿನಿಂದ ರಾಜಿ ಆಗಿದ್ದು ಪೆಟ್ಟು ತಿಂದ ಯುವಕ ಈಗ ಅನಾಥ ನಾಗಿದ್ದಾನೆ.
ಪಕ್ಷದ ಆಂತರಿಕ ಹುದ್ದೆಗಾಗಿ ತನ್ನ ಕಾರ್ಯಕರ್ತರ ಜೊತೆ ಹೊಡೆದಾಡುವ ಕಾಂಗ್ರೆಸ್ ಕಾರ್ಯಕರ್ತರ ಮನಸ್ಥಿತಿ ಹೀನ ಮಟ್ಟಕ್ಕೆ ಇಳಿದಿದ್ದು ಲಾಂಗ್ ಮಚ್ಚುಗಳನ್ನು ಹಿಡಿದುಕೊಂಡು ತಿರುಗುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು ಯಾವ ನೈತಿಕತೆಯಲ್ಲಿ ಜನರ ಬಳಿಗೆ ಬರುತ್ತಾರೆ?
ಸಾಮಾಜಿಕ ಜಾಲತಾಣದಲ್ಲಿ ಕೂಡ ಕಾಂಗ್ರೆಸ್ಸಿನ ಹಿರಿಯ ಮುಖಂಡರು ಸೇರಿದಂತೆ ಯುವ ಕಾರ್ಯಕರ್ತರು ತಮ್ಮ ನಾಯಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಾ ನಗೆಪಾಟಲಿಗೆ ಈಡಾಗಿದ್ದಾರೆ.ತನ್ನ ಪಕ್ಷದ ಹುದ್ದೆಗಾಗಿ ಕಾರ್ಯಕರ್ತರ ನಡುವೆ ಹೊಡೆದಾಟ ಆರಂಭವಾಗಿರುವುದು ನಾಚಿಕೆಗೇಡು ಎಂದು ಅವರು ಹೇಳಿದ್ದಾರೆ.
Post a comment