ಕಾರ್ಕಳ ಬ್ಲಾಕ್ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಯೋಗೀಶ್ ನಯನ್ ಇನ್ನ ಗೆಲುವು
ಕಾರ್ಕಳ:ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ನಡೆಯಲಿರುವ ಆಂತರಿಕ ಚುನಾವಣೆ ಯಲ್ಲಿ ಯೋಗೀಶ್ ನಯನ್ ಇನ್ನ ವಿಜಯಿಯಾಗಿದ್ದಾರೆ.
ಯೋಗೀಶ್ ನಯನ್ ಇನ್ನ,ಸುಹಾಸ್ ಕಾವ,ಪ್ರದೀಪ್ ಬೇಲಾಡಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಪ್ರದೀಪ್ ಬೇಲಾಡಿ 25 ಸುಹಾಸ್ ಕಾವ 320 ಯೋಗೀಶ್ ನಯನ್ ಇನ್ನ 344 ಮತಗಳನ್ನು ಪಡೆದಿದ್ದಾರೆ.
ಯೋಗೀಶ್ 24 ಮತಗಳ ಅಂತರದಿಂದ ವಿಜಯಿಯಾಗಿದ್ದಾರೆ.
ಕಾರ್ಕಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಡಿಸೆಂಬರ್ 31 ರಂದು ನಾಮಪತ್ರ ಸಲ್ಲಿಕೆ ಮಾಡಲು ಕೊನೆಯ ದಿನವಾಗಿತ್ತು.ಜನವರಿ 12ರಂದು ಚುನಾವಣೆ ನಡೆದಿದ್ದು ಕೋವಿಡ್ ಕಾರಣಕ್ಕಾಗಿ ಈ ಬಾರಿ ಆನ್ಲೈನ್ನಲ್ಲಿ ಮತದಾನ ನಡೆದಿತ್ತು.ಕಾರ್ಕಳದಲ್ಲಿರುವ ಇರುವ ಒಟ್ಟು 923 ಮತದಾನವನ್ನು ಮಾಡುವ ಅವಕಾಶವಿದ್ದರೂ 803 ಮಂದಿ ಮತದಾನ ಮಾಡಿದ್ದರು.ಅದರಲ್ಲಿ 55 ಮತಗಳು ನಿರಾಕರಣೆಯಾಗಿದೆ.
Post a comment