ಕಾರ್ಕಳ:ಚೇತನಾ ವಿಶೇಷ ಶಾಲೆಯ ಮಕ್ಕಳಿಗೆ 10000ರೂ. ದೇಣಿಗೆ ಹಾಗೂ ಉಡುಪನ್ನು ನೀಡಿ ವಿಶಿಷ್ಟ ರೀತಿಯಲ್ಲಿ ಗಣರಾಜ್ಯೋತ್ಸವ ಆಚರಿಸಿದ ಪೂರ್ಣಿಮಾ ಸಿಲ್ಕ್ಸ್-Times of karkala

ಗಣರಾಜ್ಯೋತ್ಸವದ ಸಲುವಾಗಿ ಕಾರ್ಕಳದ ಭಾರತೀ ಸೇವಾ ಸಮಿತಿಯ ಚೇತನಾ ವಿಶೇಷ ಶಾಲೆಯ ಮಕ್ಕಳಿಗೆ ಉಡುಪನ್ನು ನೀಡಲಾಯಿತು.ರೂ10000  ಧನಸಹಾಯವನ್ನು ಸಮಿತಿಯ ಅಧ್ಯಕ್ಷ ಎಂ.ಗಣಪತಿ ಪೈ ಯವರಿಗೆ ಪೂರ್ಣಿಮಾ ಸಿಲ್ಕ್ಸ್ ನ ಪಾಲುದಾರರಾದ ರವಿಪ್ರಕಾಶ್ ಪ್ರಭು ಕಿರಣ ರವಿಪ್ರಕಾಶ್ ಪ್ರಭು ರವರು ಹಸ್ತಾಂತರಿಸಿದರು.

ಈ ಸಂಧರ್ಭ ಶಾಲಾ ಸಂಚಾಲಕ ರಘುನಾಥ್ ಶೆಟ್ಟಿ,ಸಮಿತಿಯ ಕಾರ್ಯದರ್ಶಿ ನಾರಾಯಣ ಮಣಿಯಾಣಿ, ಪೂರ್ಣಿಮಾ ಸಿಲ್ಕ್ಸ್ ನ ಪ್ರಜ್ವಲ್ ಪ್ರಭು ಉಪಸ್ಥಿತರಿದ್ದರು.

ಶಾಲಾ ಮಕ್ಕಳಿಗೆ ಸಿಹಿತಿಂಡಿ ಹಾಗೂ ಲಘುಪಹಾರ ವಿತರಿಸಿದರು.

ಶಾಲಾ ಸಂಚಾಲಕ ರಘುನಾಥ್ ಶೆಟ್ಟಿ ಸ್ವಾಗತಿಸಿದರು.ಪೂರ್ಣಿಮಾ ಸಿಲ್ಕ್ಸ್ ನ ಸಿಬಂದಿ ತ್ರಿವರ್ಣ ಧ್ವಜದ ಸಮವಸ್ತ್ರದಲ್ಲಿದ್ದು ಅಂಗಡಿಗೆ ಆಗಮಿಸಿದ ಎಲ್ಲರಿಗೂ ಸಿಹಿತಿಂಡಿ ನೀಡಿದರು. 

ಪುರಸಭಾಧಿಕಾರಿ ರೇಖಾ  ಜೆ ಶೆಟ್ಟಿ  ಪೂರ್ಣಿಮಾ ಸಂಸ್ಥೆಗೆ ಆಗಮಿಸಿ ಸುಮಾರು 80 ಜನರಿಗೆ  ಉದ್ಯೋಗ ಒದಗಿಸಿ ಸಾಮಾಜಿಕ ಶೈಕ್ಷಣಿಕ ಸೇವೆಯನ್ನು ಮಾಡುತ್ತಿರುವ ರವಿಪ್ರಕಾಶ್ ದಂಪತಿಯನ್ನು ಅಭಿನಂದಿಸಿದರು.

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget