ಕರುಣಾಳು ಬಾ ಬೆಳಕು ಕಾರ್ಯಕ್ರಮದ ಅಡಿಯಲ್ಲಿ ನಕ್ರೆ ಯ ಎರಡು ಮನೆಗೆ ಸೋಲಾರ್ ಬೆಳಕನ್ನು ಹಸ್ತಾಂತರಿಸಲಾಯಿತು. ಬೆಳಕೆ ಇಲ್ಲದ ಮನೆಗೆ ಬೆಳಕು ನೀಡುವ ಕಾರ್ಯಕ್ರಮ ಇದಾಗಿದ್ದು ಕಾರ್ಕಳದ ಪರಿಸರದಲ್ಲಿ ಒಟ್ಟು 19 ಮನೆಗೆ ಈ ಸಂಸ್ಥೆ ಬೆಳಕನ್ನು ಹಲುವು ದಾನಿಗಳ ಮೂಲಕ ಹಸ್ತಾಂತರಿಸಿದೆ.
ಈ ಕಾರ್ಯಕ್ರಮದ ಈ ಸಲದ ದಾನಿಗಳು ರೋ.ಅರುಣ ಶನೆಯ್ ದಂಪತಿ ಗಳು ಇವರು ರೋಟರಿ ಆನ್ಸ್ ಕ್ಲಬ್ಬಿನ ಸಂಚಾಲಕರು ಆಗಿರುತ್ತಾರೆ ಹಾಗೂ ಇನ್ನೋರ್ವ ದಾನಿ ರೋ.ವಸಂತ M. ಇವರು ಮನೆಯನ್ನು ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದ್ದರು.
ಕಾರ್ಯಕ್ರಮದಲ್ಲಿ ನಕ್ರೆಯ ಪರಿಸರದ ಪಂಚಾಯತಿ ಸದಸ್ಯರು ರೋಟರಿ ಆನ್ಸ್ ಕ್ಲಬಿನ ಅಧ್ಯಕ್ಷೆ ರೋ.ರಮಿತಾ ಶೈಲೇಂದ್ರ ರಾವ್, ಯುವವಾಹಿನಿ ಘಟಕದ ಅಧ್ಯಕ್ಷ ಗಣೇಶ್ ಸಾಲಿಯಾನ್ ಹಾಗೂ ಅಶೋಕ್ ಸುವರ್ಣ ಹಾಜರಿದ್ದರು. ಇನ್ನು ಏಳು ಮನೆಗೆ ಬೆಳಕು ನೀಡುವ ಯೋಜನೆ ಇದ್ದು ದಾನಿಗಳು ಮುಂದಾಗಿ ಇರುತಾರೆ ಆಗಿರುತ್ತಾರೆ ಇಂತಹ ಸಮಾಜಮುಖಿ ಕಾರ್ಯವು ಹಲವು ಸಂಘ ಸಂಸ್ಥೆಗಳಿಂದ ಮಾಡುವಂತಾಗಲಿ. ಎಲ್ಲರ ಸೇವೆ ಅಗತ್ಯ ಇರುವವರಿಗೆ ಮುಟ್ಟುವಂತ ಆಗಲಿ ಎಂದು ತಿಳಿಸಿದ್ದಾರೆ.
ಜಾಹೀರಾತು
Post a comment