ಕಾಣಿಕೆ ಡಬ್ಬಿಗೆ ಖೋಟಾನೋಟು ಕಾಂಡೋಮ್ ಹಾಕಿ ವಿಕೃತಿ ಮೆರೆದ ವಿಲಕ್ಷಣ ಘಟನೆ ನಡೆದಿದೆ.ಕರಾವಳಿಯ ದೈವಸ್ಥಾನದ ಕಾಣಿಕೆ ಡಬ್ಬಿಗೆ ಖೋಟಾನೋಟು ಕಾಂಡೋಮ್ ಅಲ್ಲದೆ ಅವಹೇಳನಕಾರಿ ಧರ್ಮನಿಂದನೆಯ ಬರಹಗಳನ್ನು ಬರೆದು ಹಾಕಿರುವ ಬಗ್ಗೆ ವರದಿಯಾಗಿದೆ.
ಪಾಂಡೇಶ್ವರ ಬಾಬುಗುಡ್ಡೆ ಬಬ್ಬುಕ್ಷೇತ್ರ, ಕೊಟ್ಟಾರಚೌಕಿಯ ಕಲ್ಲುರ್ಟಿ ದೈವಕ್ಷೇತ್ರ ಸೇರಿದಂತೆ ಕೆಲ ದೈವಸ್ಥಾನಗಳ ಕಾಣಿಕೆ ಹುಂಡಿಯಲ್ಲಿ ಇವುಗಳು ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.ಈ ದುಷ್ಕೃತ್ಯಕ್ಕೆ ಜಿಲ್ಲೆಯಾಧ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು ಪೊಲೀಸರು ಈ ಕೂಡಲೇ ಇಂತಹ ಕಿಡಿಗೇಡಿಗಳನ್ನು ಬಂಧಿಸಬೇಕು,ಕೋಮುಸೌಹಾರ್ದ ಕೆದಕುವ ಇಂತಹ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಜಾಹೀರಾತು
Post a comment