ಶಾಂತಿನಿಕೇತನ ಯುವ ವೃಂದ ಕುಡಿಬೈಲ್ ಕುಚ್ಚೂರು ಹೆಬ್ರಿ ಸಮೀಪದ ಕುಡಿಬೈಲ್ ಎಂಬ ಗ್ರಾಮೀಣ ಸಂಸ್ಥೆಗೆ ವಿಜಯಪುರ ತಾಲೂಕಿನ ಅಹೇರಿ ಗ್ರಾಮದ ಶ್ರೀ ಬಸವೇಶ್ವರ ಕರ್ಮವೀರ ಕಲಾ ಸಾಹಿತ್ಯ ವೇದಿಕೆಯ 16ನೇ ವಾರ್ಷಿಕೊತ್ಸವದ ಅಂಗವಾಗಿ ನಡೆದ ರಾಜ್ಯ ಮಟ್ಟದ ವಚನ ವಿಜೋಯೊತ್ಸವ ಹಾಗೂ ಬಸವರತ್ನ ಮತು ಬಸವ ಜ್ಯೋತಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶಾಂತಿನಿಕೇತನ ಯುವ ವೃಂದ ಕುಡಿಬೈಲ್ ಕುಚ್ಚೂರು ಸಂಸ್ಥೆಗೆ ಬಸವರತ್ನ ರಾಷ್ಟ್ರ ಪ್ರಶಸ್ತಿಯನ್ನು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಪ್ರಧಾನ ಮಾಡಿದರು.
ಬಸವ ಶ್ರೀ ರಾಷ್ಟ್ರ ಪ್ರಶಸ್ತಿಯನ್ನು ಸಂಘದ ಪರವಾಗಿ ಅಧ್ಯಕ್ಷ ರಾಜೇಶ್ ಸ್ವೀಕರಿಸಿದರು. ಈ ಸಂಧರ್ಭದಲ್ಲಿ ಶಾಂತಿ ನಿಕೇತನ ಸೌಹರ್ದ ಸಹಕಾರಿ ನಿಯಮಿತದ ಮುಖ್ಯ ಕಾರ್ಯನಿರ್ವಣಾಧಿಕಾರಿ ನರೇಂದ್ರ ಎಸ್, ಉಪಾಧ್ಯಕ್ಷ ರವೀಶ್ ಶೆಟ್ಟಿ.ಪ್ರಧಾನ ಕಾರ್ಯದರ್ಶಿ ಜಯಕರ್, ಸಂಘಟನಾ ಕಾರ್ಯದರ್ಶಿ ದಿಕ್ಷೀತ್, ಆಡಳಿತ ಮಂಡಳಿಯ ಸದಸ್ಯರು ನಾಗರಾಜ್, ವಿಷ್ಣುಧರನ್ ಉಪಸ್ಥಿತರಿದ್ದರು.
ಸಮಾಜದ ವಿವಿಧ ಅಯಾಮಗಳಲ್ಲಿ ವಿಶೇಷವಾಗಿ ಸಾಧನೆಯನ್ನು ಗುರುತಿಸಿ 16 ವರ್ಷಗಳಿಂದ ಬಸವರತ್ನ ಪ್ರಶಸ್ತಿ ಪ್ರಶಸ್ತಿಯನ್ನು ನೀಡುತ್ತಿದೆ. ಸಮಾಜಸೇವೆ, ಕನ್ನಡ, ನಾಡು, ನುಡಿ, ನೆಲ, ಜಲ, ಭಾಷೆ, ಸಂಸ್ಕೃತಿ, ಪರಂಪರೆ ಮತ್ತು ಪತ್ರೀಕೊದ್ಯಮ ವಿಭಗದಲ್ಲಿ ಅನುಪಮಾ ಸೇವೆ ಮಾಡಿದ ಗಣ್ಯರಿಗೆ ಮತ್ತು ಸಂಸ್ಥೆಳಿಗೆ ಅಧ್ಯಕ್ಷ ಬಂಡೆಪ್ಪ ತೇಲಿ ಇವರ ಸಮ್ಮುಖದಲ್ಲಿ ನಡೆಯುತ್ತಿದೆ.
ಜಾಹೀರಾತು
Post a comment