ಸಿರಿಬೈಲು : ಆದಿಗ್ರಾಮೋತ್ಸವ - ಗ್ರಾಮ ಸಾಹಿತ್ಯ ಸಮ್ಮೇಳನ ಸಂಪನ್ನ : ಪ್ರಶಸ್ತಿ ಪ್ರದಾನ. "ಇವತ್ತು ಸಾಹಿತ್ಯ ಉಳಿದಿದೆ ಎಂದಾದರೆ ಅದಕ್ಕೆ ಹಳ್ಳಿಯ ಜನರ ಪ್ರಾಮಾಣಿಕ ಪ್ರಯತ್ನವೇ ಕಾರಣ" : ಮುನಿರಾಜ ರೆಂಜಾಳ- Times of karkala

ಹೆಬ್ರಿ : ಇವತ್ತು ಸಾಹಿತ್ಯ ಉಳಿದಿದೆ ಎಂದಾದರೆ ಅದಕ್ಕೆ ಹಳ್ಳಿಯ ಜನರ ಪ್ರಾಮಾಣಿಕ ಪ್ರಯತ್ನವೇ ಕಾರಣ, ಈ ಹಳ್ಳಿಯಲ್ಲಿ ನಡೆದ  ಅದಿಗ್ರಾಮೋತ್ಸವ ಕಾರ್ಯಕ್ರಮ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಕರ್ನಾಟಕ ಪ್ರವಚನ ರತ್ನ  ಮುನಿರಾಜು ರೆಂಜಾಳ ಮೆಚ್ಚುಗೆ ವ್ಯಕ್ತ ಪಡಿಸಿದರು. 

 ಹೆಬ್ರಿ ಸಮೀಪದ ಸಿರಿಬೈಲಿನಲ್ಲಿ ಭಾನುವಾರ ನಡೆದ ಆದಿಗ್ರಾಮೋತ್ಸವ - ಗ್ರಾಮ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಆದಿಗ್ರಾಮೋತ್ಸವ ಯುವ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.  


ಅವರು ಸಿರಿಬೈಲಿನಲ್ಲಿ ಭಾನುವಾರ ನಡೆದ ಆದಿಗ್ರಾಮೋತ್ಸವ - ಗ್ರಾಮ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಆಶಯ ಭಾಷಣ ಮಾಡಿದರು. ನಮ್ಮೂರು ನನ್ನ ಕನಸು ಪತ್ರಕರ್ತರಿಗಾಗಿ  ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ  ಧನಂಜಯ ಮೂಡಬಿದ್ರಿ ಮಾತನಾಡಿದರು. ಆರ್. ಬಿ  ಜಗದೀಶ್,  ಬಾಲಕೃಷ್ಣ ಭೀಮನಗುಳಿ,  ಹೆಬ್ರಿಯ ನರೇಂದ್ರ ಎಸ್‌ ಬಾಳೆಹೊನ್ನೂರ್,ಗಣೇಶ್ ಕಾಮತ್, ಜಗದೀಶ ಅಂಡಾರು,ರಾಮ್‌ ಅಜೆಕಾರ್‌,  ಪದ್ಮಶ್ರೀ ನಿಡೋಡ್ಡಿ ಭಾಗವಹಿಸಿದ್ದರು. ಕವಿಗೋಷ್ಠಿ, ಸಹಿತಿ ವಿವಿಧ ಕಾರ್ಯಕ್ರಮಗಳು ನಡೆಯಿತು. ಧಾರ್ಮಿಕ ಕೇಂದ್ರಗಳ ನಿರ್ಮಾಣ ಶಿಲ್ಪಿ ಮಹಮ್ಮದ್ ಗೌಸ್ ಅವರಿಗೆ ಅದಿಗ್ರಾಮೋತ್ಸವ ಗೌರವ 2021, ದಕ್ಷಿಣ ಕನ್ನಡ ಜಿಲ್ಲಾ ಕಣ್ಣಿನ ವೈದ್ಯರ ಸಂಘಟನೆಯ ಅಧ್ಯಕ್ಷರಾದ ಡಾ. ಸುಧೀರ್ ಹೆಗ್ಡೆ ಅವರಿಗೆ ಗ್ರಾಮ ಗೌರವ ಪ್ರದಾನ ಮಾಡಲಾಯಿತು. 


ಹೆಬ್ರಿಯ ಶಾಂತಿನಿಕೇತನ ಸೌಹಾರ್ದ ಸಹಕಾರ ಸಂಘ, ಅಜೆಕಾರು ಮಹಮ್ಮಾಯಿ ಮಹಿಳಾ ಭಜನಾ ಮಂಡಳಿ, ಶ್ರೀ ರಾಮ ಮಂದಿರ, ದೊಂಡೇರಂಗಡಿ, ಮತ್ತು ಸಿರಿಬೈಲು ದುರ್ಗಾಪರಮೇಶ್ವರಿ ಭಜನಾ ಮಂಡಳಿಗೆ ಗ್ರಾಮೋತ್ಸವ ಸಂಘ ಸಿರಿ ಗೌರವ ಹಾಗೂ  ಶ್ಯಾಮ್ ಪ್ರಸಾದ್ ಹೆಗ್ಡೆ ನಲ್ಲೂರು, ಡಾ.ಕಬ್ಬಿನಾಲೆ ಸುದರ್ಶನ್ ಹೆಬ್ಬಾರ್ ಮುನಿಯಾಲು,  ಕೃಷ್ಣಪ್ಪ ಸೊಪ್ಪಿನ್ ಲಿಂಗನಾಯಕಹಳ್ಳಿ, ಉಪೇಂದ್ರ ನಾಯಕ್ ಶಿವಪುರ, ರಶ್ಮಿ ಸತೀಶ್ ಆಚಾರ್ಯ, ಅಣ್ಣಪ್ಪ ಪೂಜಾರಿದೆಂದೂರು ಕಟ್ಟೆ, ವಂದನಾ ರೈ ನಲ್ಲೂರು • 8. ಮುನಿಯಾಲು ಪ್ರಮೋದ ಶೆಟ್ಟಿಗಾರ್‌ ಮುದ್ರಾಡಿ, ರೇಷ್ಮಾ ಶೆಟ್ಟಿ ಗೊರೂರು, ಗಣೇಶ್ ಕಾಮತ್  ಮೂಡಬಿದ್ರಿ, ಎಳ್ಳಾರೆ ರೇಷ್ಮಾ ಆಚಾರ್ಯ, ದೀಪಕ್ ದುರ್ಗಾ ಹೆಬ್ರಿ,  ಜಾನ್ ಟೆಲ್ಲಿಸ್ ಅಜೆಕಾರ್, ಕೃಷ್ಣಮೂರ್ತಿ ಕಾಡುಹೊಳೆ ಅಜೆಕಾರ್,ಅಬ್ದುಲ್ ಗಪೂರ್, ಜ್ಯೋತಿ ಪದ್ಮಾನಭಾ ಭಂಡಿ ಕುಕ್ಕುಂದೂರು, ಅಚ್ಯುತ್ ಮಾರ್ನಾಡ್ ಮೂಡಬಿದ್ರಿ, ಪ್ರವೀಣ ಹೆಗ್ಡೆ ಕಡ್ತಲ, ಪ್ರಣಮ್ಯ ಅಗಲಿ ಪುತ್ತೂರು, ಶೀಲಾ ಪಡೀಲ್ ಮಂಗಳೂರು, ವಸಂತಿ ಕಾರ್ಕಳ, ಪುನೀತ್ ಮೂಡಬಿದ್ರಿ,ಕೆ.ಎಂ.ಖಲೀಲ್,ಸುರೇಂದ್ರ ಮೋಹನ್ ಮುದ್ರಾಡಿ,ಶಬರೀಶ್ ಆಚಾರ್ಯ ಮುನಿಯಾಲು, ಅನಿಲ್ ಜ್ಯೋತಿನಗರ ಅವರಿಗೆ ಆದಿಗ್ರಾಮೋತ್ಸವ ಯುವಸಿರಿ ಗೌರವ ಪ್ರದಾನ ಮಾಡಲಾಯಿತು.  

ಸಾಹಿತ್ಯ ಸಮ್ಮೇಳನದ ಸಂಘಟಕರಾದ ಸಾಹಿತಿ  ಶೇಖರ ಅಜೆಕಾರು ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಹಿತ್ಯ ಸಮ್ಮೇನದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.  

ಆದಿ ಗ್ರಾಮೋತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಸಂತೋಷ್ ಕುಮಾರ್ ಶೆಟ್ಟಿ, ಅರುಣ್ ಭಟ್ ಎಣ್ಣೆಹೊಳೆ, ಭಜನಾ ಮಂಡಳಿಯ ಅಧ್ಯಕ್ಷ ಶೇಖರ ಕಡ್ತಲ, ವಿಧಾನ  ಪರಿಷತ್ ಮಾಜಿ ಸದಸ್ಯ  ಕ್ಯಾ. ಗಣೇಶ್ ಕಾರ್ಣಿಕ್, ಮುನಿಯಾಲು ಗೊಪಿನಾಥ್ ಭಟ್, ಪ್ರೇಮಾ ವಿ ಸೂರಿಗ, ಮಂಜುನಾಥ್, ಅರ್. ಬಿ.ಜಗದೀಶ್, ಸಂಪತ್ ಕುಮಾರ್ ಜೈನ್, ರಮೇಶ ಸುವರ್ಣ ಮತ್ತು ರಾಘವ ದೇವಾಡಿಗ ಇದ್ದರು. 


ಜಾಹೀರಾತು 
Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget