ಕಾರ್ಕಳ :ಶ್ರೀ ಆದಿಶಕ್ತಿ ಮಹಾಲಕ್ಷ್ಮಿ ದೇವಸ್ಥಾನ ಲಕ್ಷ್ಮೀಪುರ ಹಿರ್ಗಾನದ ಆಡಳಿತಮೊಕ್ತೇಸರರಾಗಿ ಅಶೋಕ್ ನಾಯಕ್ ಹಿರ್ಗಾನ ಇವರು ಆಯ್ಕೆಯಾಗಿದ್ದಾರೆ.
ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ಜನಪ್ರೀತಿ ಮತ್ತು ಜನಪ್ರಿಯತೆ ಹೊಂದಿರುವ ಅಶೋಕ ನಾಯಕ್ ಅವರು ಉದ್ಯಮ ರಂಗದಲ್ಲೂ ಪ್ರಾಮಾಣಿಕತೆ ಮತ್ತು ಉತ್ತಮ ಸೇವೆಯಿಂದ ಯಶಸ್ವಿಯಾಗಿದ್ದಾರೆ.
ಕಳೆದ ಹದಿನೈದು ವರ್ಷಗಳಿಂದ ಕಾರ್ಕಳ ತಾಲೂಕು ರಾಜಾಪುರ ಸಾರಸ್ವತ ಸಂಘದ ಅಧ್ಯಕ್ಷರಾಗಿ ನಿರಂತರ ಕಾರ್ಯಚಟುವಟಿಕೆಗಳಿಂದ ಸಮಾಜದ ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಡಿಸೆಂಬರ್ ೨೩ರಂದು ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಮೊಕ್ತೇಸರರಾಗಿದ್ದ ರಘುರಾಮ ಪ್ರಭು ಇವರ ಅಧ್ಯಕ್ಷತೆ ಯಲ್ಲಿ ನೂತನ ಆಡಳಿತ ಮೊಕ್ತೇಸರರ ಆಯ್ಕೆ ನಡೆಯಿತು.
೨ನೇ ಮೊಕ್ತೇಸರರಾಗಿ ಪಾಂಡುರ೦ಗ ನಾಯಕ್ ಕಡ್ತಲ ಇವರು ಆಯ್ಕೆಯಾದರು.ಡಿಸೆಂಬರ್ ೧೪ ರಂದು ಶ್ರೀ ದೇವಳದಲ್ಲಿ ನಡೆದ ಮಹಾಸಭೆಯಲ್ಲಿ ಗೋಕುಲದಾಸ ನಾಯಕ್ ಇವರ ಅಧ್ಯಕ್ಷತೆಯಲ್ಲಿ ನೂತನ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲಾಗಿತ್ತು.
ನೂತನ ಆಡಳಿತ ಮಂಡಳಿಯ ಸದಸ್ಯರಾಗಿ ಅಂಡಾರು ರಘುರಾಮ್ ಪ್ರಭು, ಅಶೋಕ್ ನಾಯಕ್ ಹಿರ್ಗಾನ, ಚೇತನ್ ನಾಯಕ್ ನಿಟ್ಟೆ, ಸಂತೋಷ್ ವಾಗ್ಳೆ ನೀರೆ, ಪಾಂಡುರoಗ ನಾಯಕ್ ಕಡ್ತಲ, ಸುಚೀಂದ್ರ ನಾಯಕ್ ಎರ್ಲಪಾಡಿ, ಸದಾನಂದ ನಾಯಕ್ ಕಣಂಜಾರು, ಪ್ರಶಾಂತ ಪ್ರಭು
ಬಜಗೋಳಿ, ಸಂತೋಷ್ ನಾಯಕ್ ಮುನಿಯಾಲು, ಅಶ್ವಥನಾರಾಯಣ ಪ್ರಭು ಶಿರ್ಲಾಲು, ರಾಮದಾಸ ಸಾಖಳ್ಕರ್ ಮಿಯ್ಯಾರು,ಸಚ್ಚಿದಾನಂದ ಬಾಂದೋಡ್ಕರ್ ತೆಳ್ಳಾರು, ಪೂರ್ಣೇಶ್ ಬೇಗಾರು,ರಾಮನಾಥ ನಾಯಕ್ ಜೋಡುರಸ್ತೆಇವರುಗಳು ಆಯ್ಕೆಯಾಗಿದ್ದರು.
Post a comment