ಕಾರ್ಕಳ:ಸ್ಕೂಟರ್ ಗೆ ಬೈಕ್ ಡಿಕ್ಕಿ:ಸ್ಕೂಟರ್ ಸವಾರ ಸಾವು-Times of karkala

ಕಾರ್ಕಳ:ಸ್ಕೂಟರ್‌ಗೆ ಬೈಕ್‌‌ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟ ಘಟನೆ ಜ.19ರ ಮಂಗಳವಾರದಂದು ನೀಚಾಲಿನ ಸಾಂತೂರು ಎಂಬಲ್ಲಿ ನಡೆದಿದೆ.ಮೃತರನ್ನು ಶ್ರೀಕಾಂತ ಎಂದು ಗುರುತಿಸಲಾಗಿದೆ.

ಜ.19ರ ಮಂಗಳವಾರದಂದು ಸ್ಕೂಟರ್‌‌ನಲ್ಲಿ ಶ್ರೀಕಾಂತ ಹಾಗೂ ಸಹಸವಾರ ರವೀಂದ್ರ ಪೂಜಾರಿ ಅವರು ಬೆಳ್ಮಣ್‌‌ನಿಂದ ಸಾಂತೂರಿಗೆ ಹೋಗಲು ರಾಜ್ಯ ಹೆದ್ದಾರಿಯಲ್ಲಿ ಹೋಗುತ್ತಿದ್ದ ಸಂದರ್ಭ ರಾತ್ರಿ 7.45ರ ಸುಮಾರಿಗೆ ನೀಚಾಲುವಿನ ಸಾಂತೂರು ಕಡೆಗೆ ಹೋಗಲು ದೂರದಿಂದಲೇ ಬಲ ಬದಿಯ ಇಂಡಿಕೇಟರ್ ಹಾಕಿ ರಸ್ತೆಯ ಬಲ ಬದಿಯ ಅಂಚನ್ನು ತಲುಪುವಾಗ ಪಡುಬಿದ್ರೆ ಕಡೆಯಿಂದ ಬೈಕ್‌‌ವೊಂದು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸ್ಕೂಟರ್‌ನ ಎಡಬದಿಗೆ ಡಿಕ್ಕಿ ಹೊಡೆದಿದೆ.


ಬೈಕ್‌ ಸ್ಕೂಟರ್‌‌‌‌‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್‌ ಸಮೇತ ಶ್ರೀಕಾಂತ ಹಾಗೂ ರವೀಂದ್ರ ಪೂಜಾರಿ ಅವರು ರಸ್ತೆಗೆ ಬಿದ್ದಿದ್ದು, ಶ್ರೀಕಾಂತ ಅವರಿಗೆ ತಲೆಗೆ ಹಾಗೂ ರವಿಂದ್ರ ಪೂಜಾರಿ ಅವರ ಎಡ ಕಾಲು ಮೂಳೆ ಮುರಿದಿದೆ. ಅಲ್ಲದೇ, ಬೈಕ್‌‌‌‌‌ ಸವಾರನಿಗೂ ಕೂಡಾ ಗಾಯವಾಗಿದೆ. ಕೂಡಲೇ ಗಾಯಾಳುಗಳನ್ನು ಉಡುಪಿ ಆಸ್ಪತ್ರೆಗೆ ಕರೆದೊಯ್ದಿದ್ದು, ಈ ವೇಳೆ ಶ್ರೀಕಾಂತ ಅವರು ಚಿಕತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು 












Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget