February 2021

 ಕಾರ್ಕಳ:ಮರ್ಣೆ ಗ್ರಾಮದ ಕಾಡುಹೊಳೆ ತೋಟದಮಜಲು ದಿ. ಸದಾನಂದ ಪೈಯವರ ಪುತ್ರ ಪ್ರದೀಪ ಪೈ(36) ಅಲ್ಪಕಾಲದ ಅಸೌಖ್ಯದಿಂದ ಭಾನುವಾರ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಶನಿವಾರ ಹಠಾತ್ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮಧ್ಯಾಹ್ನ ನಿಧನರಾದರು.

ಮೃತರು ತಾಯಿ,ಪತ್ನಿ,ಇಬ್ಬರು ಮಕ್ಕಳು ಸಹಿತ ಕುಟುಂಬ ವರ್ಗವನ್ನು ಅಗಲಿದ್ದಾರೆ.


 

 ಜಾಹೀರಾತು  

 

 

 

 

 

17ನೇ ವರ್ಷದ  ಮಿಯಾರು "ಲವ - ಕುಶ" ಜೋಡುಕರೆ ಕಂಬಳ ಕೂಟದ ಫಲಿತಾoಶ

ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :

ಕನೆಹಲಗೆ: 5 ಜೊತೆ 

ಅಡ್ಡಹಲಗೆ: 8 ಜೊತೆ 

ಹಗ್ಗ ಹಿರಿಯ: 15 ಜೊತೆ 

ನೇಗಿಲು ಹಿರಿಯ: 33 ಜೊತೆ 

ಹಗ್ಗ ಕಿರಿಯ: 20 ಜೊತೆ 

ನೇಗಿಲು ಕಿರಿಯ: 126 ಜೊತೆ 

ಒಟ್ಟು ಕೋಣಗಳ ಸಂಖ್ಯೆ: 207 ಜೊತೆ

ಕನೆಹಲಗೆ: 

ಬೇಲಾಡಿ ಬಾವ ಅಶೋಕ್ ಶೆಟ್ಟಿ

ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್

( 6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ )

ಅಡ್ಡ ಹಲಗೆ:

ಪ್ರಥಮ: ವೇಣೂರು ಮುಡುಕೋಡಿ ಗಣೇಶ್ ನಾರಾಯಣ ಪಂಡಿತ್ "ಬಿ"

ಹಲಗೆ ಮುಟ್ಟಿದವರು: ಮಂದಾರ್ತಿ ಶಿರೂರು ಗೋಪಾಲ ನಾಯ್ಕ್

ದ್ವಿತೀಯ: ಮೋರ್ಲ ಗಿರೀಶ್ ಆಳ್ವ

ಹಲಗೆ ಮುಟ್ಟಿದವರು: ಮುಳಿಕಾರು ಕೆವುಡೇಲು ಅಣ್ಣಿ ದೇವಾಡಿಗ

ಹಗ್ಗ ಹಿರಿಯ: 

ಪ್ರಥಮ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ "ಎ"

ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ

ದ್ವಿತೀಯ: ನಂದಳಿಕೆ ನವ್ಯತ - ನಮೃತ ಶೀಕಾಂತ್ ಭಟ್ "ಬಿ"

ಓಡಿಸಿದವರು: ಗುರು ಚರಣ್ ಪಟ್ಟೆ

ಹಗ್ಗ ಕಿರಿಯ:

ಪ್ರಥಮ: ಮಿಯಾರು ಬೋರ್ಕಟ್ಟೆ ಅನುಗ್ರಹ ಪ್ರಥಮ್ ಪ್ರಭಾಕರ ಶೆಟ್ಟಿ

ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ

ದ್ವಿತೀಯ: ಹೀರೇಬೆಟ್ಟು ಶಂಕರ ದೇವಾಡಿಗ

ಓಡಿಸಿದವರು: ಹೀರೇಬೆಟ್ಟು ಆಕಾಶ್

ನೇಗಿಲು ಹಿರಿಯ: 

ಪ್ರಥಮ: ಬೋಳದ ಗುತ್ತು ಜಗದೀಶ್ ಶೆಟ್ಟಿ "ಎ"

ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಮ್. ಶೆಟ್ಟಿ

ದ್ವಿತೀಯ: ಪಟ್ಟೆ ಬಿಜ್ಜೊಟ್ಟು ಪ್ರಶಾಂತ್ ಶೆಟ್ಟಿ "ಎ"

ಓಡಿಸಿದವರು: ಪೆರಿಂಜೆ ಪ್ರಮೋದ್ ಕೋಟ್ಯಾನ್

ನೇಗಿಲು ಕಿರಿಯ:

ಪ್ರಥಮ: ಸಿದ್ದಕಟ್ಟೆ ಪೋಡುಂಬ ಹೊಸಮನೆ ಸರೋಜಿನಿ ಸಂಜೀವ ಶೆಟ್ಟಿ "A"

ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಮ್. ಶೆಟ್ಟಿ

ದ್ವಿತೀಯ: ಹೊಸ್ಮಾರು ಸೂರ್ಯಶ್ರೀ ರಘನಾಥ ಸದಾಶಿವ ಶೆಟ್ಟಿ

ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ


 

 ಜಾಹೀರಾತು  

 

 

 

 

 

ಕರ್ನಾಟಕದ ಭಾರತೀಯ ಜನತಾ ಪಕ್ಷ(ಬಿಜೆಪಿ) ಘಟಕ ಹೊಸ ವಕ್ತಾರರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದು ಮಂಗಳೂರು ವಿಭಾಗದ ಮುಖ್ಯ ವಕ್ತಾರರಾಗಿ ಕ್ಯಾ. ಗಣೇಶ್ ಕಾರ್ಣಿಕ್ ಅವರು ನೇಮಕಗೊಂಡಿದ್ದಾರೆ.
 

 ಜಾಹೀರಾತು 


 

 

 

 

 

 

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇವರ ಪ್ರಾಯೋಜಕತ್ವದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ದೊಂಡೇರಂಗಡಿ, ಕುಕ್ಕುಜೆ ಇಲ್ಲಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಹಸ್ತಾಂತರಿಸಲಾಯಿತು.ರೊ. ಮೇಜರ್ ಡೋನರ್ ಮೋಹನ್ ಶೆಣೈಯವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ಮಾರ್ಗದರ್ಶಕರಾದ ರೊ.ಪಿಡಿಜಿ ಡಾ.ಭರತೇಶ್ ಆದಿ ರಾಜ್  ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭಾಶಂಸನೆ ಗೈದರು.ಕ್ಲಬ್ಬಿನ ಅಧ್ಯಕ್ಷರಾದ ರೊ ಪ್ರಶಾಂತ್ ಬೆಳಿರಾಯ ಅಧ್ಯಕ್ಷತೆ ವಹಿಸಿದ್ದರು.ಕ್ಯಾ೦ಪ್ಕೋ   ನಿರ್ದೇಶಕರಾದ ಶ್ರೀ ದಯಾನಂದ ಹೆಗ್ಡೆಯವರು ರೋಟರಿ ಕ್ಲಬ್ಬಿನ ಕಾರ್ಯವೈಖರಿ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾದ ಡಾ.ಚಂದ್ರಿಕಾ ಕಿಣಿಯವರು ಆಗಮಿಸಿದ ಎಲ್ಲಾ ಗಣ್ಯರನ್ನು ಸ್ವಾಗತಿಸಿ ಕಾರ್ಯಕ್ರಮ ಕೊನೆಯಲ್ಲಿ ವಂದನಾರ್ಪಣೆ ಸಲ್ಲಿಸಿದರು.

ಈ ಹಸ್ತಾಂತರ ಕಾರ್ಯಕ್ರಮದಲ್ಲಿ ರೊ. ಸುರೇಂದ್ರ ನಾಯಕ್, ರೊ.ಗಣೇಶ ಬರ್ಲಾಯ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮಾಲತಿ ಕುಲಾಲ್, ಉಪಾಧ್ಯಕ್ಷರಾದ ಸತೀಶ್ ಪೂಜಾರಿ, ಶ್ರೀ ಅರುಣ್ ಕುಮಾರ್ ಹೆಗ್ಡೆ, ಶ್ರೀ ಅರವಿಂದ ಹೆಗ್ಡೆ , ಪ್ರಾಥಮಿಕ ಆರೋಗ್ಯ ಕೇಂದ್ರದ ಎಲ್ಲ ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

 ಜಾಹೀರಾತು 


 

 

 

 

 

 


MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget