"ರಾಮನ ಭಕ್ತರೇ ರಾಮನ ಆಲಯ ಕಟ್ಟುತ್ತಾರೆ,ನಿಮ್ಮ ಹಣದ ಅವಶ್ಯಕತೆ ಇಲ್ಲ" ರಾಮಮಂದಿರ ನಿರ್ಮಾಣಕ್ಕೆ 1ಪೈಸೆ ಕೊಡಬೇಡಿ ಎಂದ ಪಿಎಫ್ಐ ಮುಖಂಡನಿಗೆ ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ನಯನ್ ಇನ್ನ ತಿರುಗೇಟು-Times of karkala

ಕಾರ್ಕಳ:ರಾಮಮಂದಿರ ನಿರ್ಮಾಣಕ್ಕೆ 1 ಪೈಸ್ ಕೊಡಬೇಡಿ. ಅದು ರಾಮಮಂದಿರ ಅಲ್ಲ ಆರ್‍ಎಸ್‍ಎಸ್ ಮಂದಿರ ಎಂದು ಪಿಎಫ್‍ಐನ ಜನರಲ್ ಸೆಕ್ರೆಟರಿ ಅನಿಸ್ ಅಹಮ್ಮದ್ ಹೇಳಿಕೆ ನೀಡಿದ್ದು ಇದಕ್ಕೆ ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ  ಯೋಗೀಶ್ ನಯನ್ ಇನ್ನ ತಿರುಗೇಟು ನೀಡಿದ್ದಾರೆ.

ರಾಮನ ಭಕ್ತರೇ ರಾಮನ ಆಲಯ ಕಟ್ಟುತ್ತಾರೆ,ನೀವೆಲ್ಲರೂ ತಲೆ ಕೆಡಿಸ್ಕೊಬೇಕಾದ ಅವಶ್ಯಕತೆ ಇಲ್ಲ. ನಿಮ್ಮ ಹಣ ನಮಗೆ ಬೇಕಾಗಿಲ್ಲ.ಮಂದಿರ ಕಟ್ಟಲು ನಮಗೆ ಗೊತ್ತಿದೆ.ಲೆಕ್ಕವಿಲ್ಲದಷ್ಟು ದೇವಸ್ಥಾನಗಳನ್ನು ಇಡೀ ಪ್ರಪಂಚದಲ್ಲಿ ನಮ್ಮ ಹಿಂದೂ ಧರ್ಮದವರು ಕಟ್ಟಿದ್ದಾರೆ. ಆವಾಗೆಲ್ಲಾ ನಮ್ಮ ದೇವಸ್ಥಾನಗಳನ್ನು ಕಟ್ಟಲು ನೀವೇ ಹಣ ಕೊಟ್ಟಿದ್ರಾ?ಏನು ಕೊಡದೆ ಇದ್ರೂ ಪರವಾಗಿಲ್ಲ ಮಂದಿರ ನಿರ್ಮಾಣವಾದ ಮೇಲೆ ಉಚಿತವಾಗಿ ಪ್ರಸಾದ ಕೊಡುತ್ತಾರೆ ತಿಂದು ಕೊಂಡು ಹೋಗಿ ಎಂದು ಟಾಂಗ್ ನೀಡಿದ್ದಾರೆ.

ಪಿಎಫ್‍ಐ ಒಂದು ದೇಶದ್ರೋಹಿ ಸಂಘಟನೆ ಎಂದು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹೇಳುತ್ತಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ನಿಮ್ಮದೇ ಸರಕಾರ ಇದೆ.ತಾಕತ್ತಿದ್ರೆ ಬ್ಯಾನ್ ಮಾಡಿ.ಈ ಪಿಎಫ್ಐ,ಎಸ್ಡಿಪಿಐ,ಎಂಐಎಂ ಎಷ್ಟೇ ರಾಮಮಂದಿರದ ಬಗ್ಗೆ ಕೇವಲವಾಗಿ ಮಾತಾಡೀದ್ರೂ ಬಿಜೆಪಿಯವರು ಬ್ಯಾನ್ ಮಾಡಲ್ಲ.ಯಾಕೆಂದರೆ ಈ ಎಲ್ಲಾ ಸಂಘಟನೆಗಳು ಪರೋಕ್ಷವಾಗಿ ಬಿಜೆಪಿಗೆ ಸಹಾಯ ಮಾಡಿಕೊಂಡೇ ಬಂದಿದೆ ಎಂದೂ ಅವರು ಹೇಳಿದ್ದಾರೆ.

 ಜಾಹೀರಾತು  

 

 

 

 

 

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget