"ಮೋದಿಯ ಅಚ್ಚೇ ದಿನದಲ್ಲಿ ಎಪ್ರಿಲ್ನಲ್ಲಿ ಪೆಟ್ರೋಲ್ ಬೆಲೆ 100ರೂ ಆಗುತ್ತದೆ"
"ಮೋದಿಗೆ ದಿಕ್ಕಾರ ಬೇಡ..... ಜೈ ಎನ್ನುವ.."-ಸುಧೀರ್ ಕುಮಾರ್ ಮರೋಳ್ಳಿ .
ಬೆಲೆ ಏರಿಕೆ - ಹೆಬ್ರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ.
ಹೆಬ್ರಿ : ದೇಶವು ಸಂಕಷ್ಟದ ಸ್ಥಿತಿಯಲ್ಲಿದೆ ಎಂದರೆ ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲ ಎಂಬುದು ಜನತೆಗೆ ಅರ್ಥವಾಗುತ್ತಿದೆ. ಮೋದಿ ದೇಶಕ್ಕೆ ಸಮರ್ಥ ನಾಯಕ ಅಲ್ಲ ಎಂಬುದು ಈಗ ಸಾಭೀತಾಗುತ್ತಿದೆ. ಬಿಜೆಪಿಯವರಿಗೂ ಮೋದಿ ಮತ್ತು ಬಿಜೆಪಿ ಸರ್ಕಾರ ಬೇಡವಾಗಿದೆ, ಅಚ್ಚೇದಿನ ತರುತ್ತೇವೆ, ರೈತರ ಸೇವೆ ಮಾಡುತ್ತೇವೆ ಎಂದು ಅಧಿಕಾರ ಹಿಡಿದವರು ಈಗ ಜನರ ರೈತರ ವಿರೋಧಿ ಆಡಳಿತ ನೀಡುತ್ತಾರೆ. ಮುಂದಿನ ಎಪ್ರಿಲ್ ನಲ್ಲಿ ಪೆಟ್ರೋಲ್ ಬೆಲೆ ೧೦೦ ರೂಪಾಯಿಗೆ ತಲುಪಲಿದೆ, ಆದರೆ ಯಾರೂ ಮೋದಿಯನ್ನು ಪ್ರಶ್ನೆ ಮಾಡುವಂತಿಲ್ಲ, ಮೋದಿಯನ್ನು ಪ್ರಶ್ನಿಸಿದರೆ ಅವರಿಗೆ ಅಪಾಯವಿದೆ ಎಂದು ಕೆಪಿಸಿಸಿ ವಕ್ತಾರರಾದ ವಕೀಲ ಕೊಪ್ಪದ ಸುಧೀರ್ ಕುಮಾರ್ ಮರೋಳ್ಳಿ ಹೇಳಿದರು.
ಅವರು ಹೆಬ್ರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಾಲ್ಲೂಕು ಕಛೇರಿಯ ಬಳಿ ಮಂಗಳವಾರ ಪೆಟ್ರೋಲ್ ಡಿಸೇಲ್ ಗ್ಯಾಸ್ ಬೆಲೆ ಏರಿಕೆಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ನಮ್ಮ ಎಂಪಿ ಶೋಭಾ ಕರಂದ್ಲಾಜೆ ಜನರ ಕೆಲಸ ಮಾಡುತ್ತಿಲ್ಲ. ಅವರಿಗೆ ಜನರ ಕಷ್ಟ ಗೊತ್ತಿಲ್ಲ, ಮನಮೋಹನ್ ಸಿಂಗ್ ಇರುವಾಗ ಗ್ಯಾಸ್ ಬೆಲೆ ೪೦ ರೂಪಾಯಿ ಏರಿದಾಗ ರಸ್ತೆ ಮೇಲೆ ಅಡುಗೆ ಮಾಡಿ ಪ್ರತಿಭಟನೆ ಮಾಡಿದರು. ಶೃಂಗೇರಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಬಿಜೆಪಿ ಪಕ್ಷದವರೇ ಅತ್ಯಾಚಾರ ಮಾಡಿದರು. ಆದರೆ ಯಾರೂ ಮಾತನಾಡದಿರುವುದು ದುರಂತ ಎಂದ ಸುಧೀರ್ ಕುಮಾರ್ ಮುಂದೆ ರೈತರ ಭವಿಷ್ಯದ ದಿನ ಬಹಳ ಕರಾಳವಾಗಿದೆ. ಕಸ್ತೂರಿರಂಗನ್ ವರದಿಯಿಂದಾಗಿ ರೈತರಿಗೆ ಭಾರಿ ತೊಂದರೆ ಇದೆ ಎಂದು ಹೇಳಿದರು.
ಈಗ ದೇಶದಲ್ಲಿ ಯಾರಿಗೂ ಬಿಜೆಪಿ ಬೇಡವಾಗಿದೆ, ಬಡಜನತೆಗೆ ಬೇಕಾಗುವ ಯಾವೂದೇ ಯೋಜನೆಯನ್ನು ಬಿಜೆಪಿಯು ಮಾಡಿಲ್ಲ. ೬೦ ವರ್ಷಗಳಲ್ಲಿ ಕಾಂಗ್ರೆಸ್ ಮಾಡಿದ ಕಂಪೆನಿಗಳ ಸಹಿತ ಎಲ್ಲವನ್ನೂ ಬಿಜೆಪಿ ಖಾಸಗಿಯವರಿಗೆ ಮಾರಾಟ ಮಾಡುತ್ತಿದೆ, ಆರ್ಟಿಒ ಇಲಾಖೆಯನ್ನು ಕೂಡ ಅಂಬಾನಿಗೆ ಮಾರಾಟ ಮಾಡಲಾಗುತ್ತಿದೆ. ಇದು ಜನಸಾಮಾನ್ಯರ ಮೇಲೆ ಸವಾರಿ ಮಾಡುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಮಾತನಾಡಿ ಬೆಲೆ ಏರಿಕೆಯ ಮೂಲಕ ಬಿಜೆಪಿ ಜನರ ಜೀವನದಲ್ಲಿ ಚೆಲ್ಲಾಟ ಆಡುತ್ತಿದೆ. ಕಾಂಗ್ರೆಸ್ ಜನರ ಪಕ್ಷ, ಕಾಂಗ್ರೆಸ್ ಜನರ ಬದುಕಿನ ಅಂಗ. ಈಗ ಎಲ್ಲವೂ ಎಲ್ಲರಿಗೂ ಅರ್ಥವಾಗಿದೆ. ಸುಳ್ಳು ಹೆಚ್ಚು ದಿನ ನಡೆಯುವುದಿಲ್ಲ ಎಂದರು.
ಯುವ ಕಾಂಗ್ರೆಸ್ ಗೆ ನೂತನ ವಾಗಿ ಆಯ್ಕೆಯಾದ ದೀಪಕ್ ಕೋಟ್ಯಾನ್, ಯೋಗೀಶ್ ಇನ್ನಾ, ರಕ್ಷಿತ್ ರಾಜ್ ಅಹಿತ ಹಲವರನ್ನು ಗೌರವಿಸಲಾಯಿತು.
ಬೆಲೆ ಏರಿಕೆಯನ್ನು ತಡೆಯುವಂತೆ ಹೆಬ್ರಿ ತಹಶೀಲ್ಧಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ ದಾಸ್ ಅವರ ರೈತರ ಭದ್ರತೆ ದೇಶದ ಭದ್ರತೆ ಪುಸ್ತಕವನ್ನು ಅನಾವರಣಗೊಳಿಸಿ ರೈತರ ಪರ ಆಂದೋಲನಕ್ಕೆ ಚಾಲನೆ ನೀಡಲಾಯಿತು.
ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಬಿಪಿನ್ ಚಂದ್ರಪಾಲ್ ನಕ್ರೆ, ಕಾರ್ಕಳ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ರಾಜ್ಯ ಯುವ ಕಾಂಗ್ರೆಸ್ನ ರವಿಶಂಕರ್ ಶೇರಿಗಾರ್, ಗ್ರಾಮ ಪಂಚಾಯಿತಿ ಸದಸ್ಯರು,ಪಕ್ಷದ ವಿವಿಧ ಘಟಕಗಳ ಪ್ರಮುಖರಾದ ಪ್ರಕಾಶ ಪೂಜಾರಿ ಕೆರ್ವಾಸೆ, ರಾಘವ ದೇವಾಡಿಗ, ಶೀನ ಪೂಜಾರಿ, ರಾಜೇಶ ಭಂಡಾರಿ, ಸುಧಾಕರ ಕೋಟ್ಯಾನ್, ಪ್ರಭಾಕರ ಬಂಗೇರ, ಕೃಷ್ಣಮೂರ್ತಿ ಕಾರ್ಕಳ, ಶಶಿಕಲಾ ಡಿ.ಪೂಜಾರಿ ಮುಂತಾದವರು ಭಾಗವಹಿಸಿದ್ದರು. ಹೆಬ್ರಿ ಗ್ರಾಮ ಪಂಚಾಯಿತಿ ಸದಸ್ಯ ಎಚ್. ಜನಾರ್ಧನ್ ಸ್ವಾಗತಿಸಿ ನಿರೂಪಿಸಿದರು.
ಮೋದಿಗೆ ದಿಕ್ಕಾರ ಬೇಡ..... ಜೈ ಎನ್ನುವ..
ನಮ್ಮ ಪ್ರಧಾನಿ ನರೇಂದ್ರ ಮೋದಿಗೆ ಜೈ ಅನ್ನಬೇಕು. ಅವರು ದಿಕ್ಕಾರವನ್ನು ಸಹಿಸುವುದಿಲ್ಲ. ಕೆಲವೇ ದಿನದಲ್ಲಿ ಪೆಟ್ರೋಲ್ ಬೆಲೆ ೧೦೦ ದಾಟುತ್ತದೆ. ಆಗ ನಾವು ವಿರೋಧಿಸುವುದು ಬೇಡ. ಪೆಟ್ರೋಲ್ ಪಂಪ್ಗಳಿಗೆ ತೆರೆಳಿ ಗ್ರಾಹಕರಿಗೆ ಸಿಹಿಹಂಚಿ ಮೋದಿಗೆ ಜೈ ಅನ್ನುವ, ಇನ್ನೂ ಬೆಲೆ ಏರಿಸಿ ಎಂದು ಜೈ ಹಾಕುವ ಎಂದು ಸುಧೀರ್ ಕುಮಾರ್ ವ್ಯಂಗವಾಡಿದರು.
ಜಾಹೀರಾತು
Post a comment