ಅಜೆಕಾರು: 1,30,000ರೂ. ಮೌಲ್ಯದ ಚಿನ್ನಾಭರಣ ಕಳವು-Times of karkala

 

ಅಜೆಕಾರು:ಮನೆಗೆ ನುಗ್ಗಿ 1,30,000 ರೂ.ಮೌಲ್ಯದ ಚಿನ್ನಾಭರಣ ಕಳವುಗೈದ ಘಟನೆ ಮರ್ಣೆ ಗ್ರಾಮದ ಗುಡ್ಡೆಯಂಗಡಿ ಬಳಿ ನಡೆದಿದೆ.

ಮರ್ಣೆ ಗ್ರಾಮದ ಗುಡ್ಡೆಯಂಗಡಿ ನಿವಾಸಿ  ಸುಧಾಕರ ಮಡಿವಾಳ ಎಂಬುವವರು  ದಿನಾಂಕ 01/02/2021 ರಂದು ಮದ್ಯಾಹ್ನ 11:00 ಗಂಟೆಗೆ ಹೆಂಡತಿ ಮನೆಯಾದ ಕಾರ್ಕಳಕ್ಕೆ ಸಂಸಾರ ಸಮೇತವಾಗಿ ಮನೆಗೆ ಬೀಗ ಹಾಕಿ ಹೋಗಿದ್ದು,  ದಿನಾಂಕ 04/02/2021 ರಂದು ಸಂಜೆ 4:15 ಗಂಟೆಗೆ ವಾಪಸ್ಸು ಮನೆಗೆ ಬಂದು ನೋಡಿದಾಗ ಮನೆಯ ಎದುರಿನ ಬಾಗಿಲನ್ನು ಯಾರೋ ಕಳ್ಳರು ಬೀಗ ಮುರಿದು ಮನೆಯ ಒಳ ಪ್ರವೇಶಿಸಿ ಮಲಗುವ ಕೋಣೆಯ ಮಲಗುವ ಮಂಚದ ಕೆಳಗೆ ಪ್ಲಾಸ್ಟಿಕ್‌ ಟಬ್‌ನಲ್ಲಿ ಬಟ್ಟೆಯ ಮಧ್ಯದಲ್ಲಿ ಇರಿಸಿದ್ದ 3.5 ಪವನ್‌ ಚಿನ್ನದ ನೆಕ್ಲೇಸ್‌ ಹಾಗೂ 1 ಪವನ್‌ ಚಿನ್ನದ ಕರಿಮಣಿ ಸರ ವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. 

ಕಳವಾದ 3.5 ಪವನ್‌ ಚಿನ್ನದ ನೆಕ್ಲೇಸ್‌ ಮೌಲ್ಯ 1 ಲಕ್ಷ ರೂಪಾಯಿ ಹಾಗೂ 1 ಪವನ್‌ ಚಿನ್ನದ ಕರಿಮಣಿ ಸರ ಮೌಲ್ಯ ರೂಪಾಯಿ 30,000/- ಆಗಿದ್ದು, ಕಳವಾದ ಒಟ್ಟು  ಮೌಲ್ಯ ರೂಪಾಯಿ 1,30,000 /-  ಆಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು.
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget