ಸಂಚಾರಿ ನಿಯಮವನ್ನು ಪಾಲಿಸುವುದು ಮತ್ತು ಗೌರವಿಸುವುದು ಸಾರ್ವಜನಿಕರ ಅದ್ಯ ಕರ್ತವ್ಯ, ದಿನಂಪ್ರತಿ ಮಾಧ್ಯಮವನ್ನು ಗಮನಿಸಿದಾಗ ಅಪಘಾತ ಪ್ರಕರಣಗಳೇ ಹೆಚ್ಚು ಕಾಣ ಸಿಗುವಂತದ್ದು, ಪ್ರತಿಯೋಬ್ಬರ ಜೀವವು ಅತ್ಯಂತ ಅಮೂಲ್ಯವಾದುದು, ಅನಾವಶ್ಯಕ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಇನ್ನೋಬ್ಬರ ಜೀವಕ್ಕೆ ಮಾರಕವಾಗಬೇಡಿ ಎಂದು ಪೋಲಿಸ್ ಸಬ್ ಇನ್ಸ್ಪೆಕ್ಟರ್ ಸುಮಾ ಬಿ ಎಚ್ಚರಿಸಿದರು.
ಇವರು ಸರ್ಕಾರಿ ಪದವಿ ಪೂರ್ವ ಕಾಲೇಜ್ ಹೆಬ್ರಿಯಲ್ಲಿ ನಡೆದ ಲಯನ್ಸ್ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ 2021 ರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅಗಮಿಸಿದ ಇವರು ವಿದ್ಯಾರ್ಥಿಗಳು ಪರವಾನಿಗೆ ಹೊಂದದೇ ವಾಹನ ಚಾಲನೇ ಮಾಡುವುದು ಅಫರಾದ, ಇಲ್ಲಿ ಸಿಕ್ಕಿಂತಹ ಉಪಯುಕ್ತ ಮಾಹಿತಿಯನ್ನು ಹೆತ್ತವರಿಗೆ ತಿಳಿಸುವುದರ ಮೂಲಕ, ಹೆತ್ತವರನ್ನು ಜಾಗೃತಗೊಳಿಸಿ ಎಂದರು.
ಕಾರ್ಯಕ್ರಮವು ಲಯನ್ಸ್ ಕ್ಲಬ್ ಹೆಬ್ರಿ ಸಿಟಿ, ಶಾಂತಿನಿಕೇತನ ಯುವವೃಂದ, ಕುಡಿಬೈಲು, ಕುಚ್ಚೂರು, ಹೆಬ್ರಿ ಪೋಲಿಸ್ ಠಾಣೆ ಮತ್ತು ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ ಲಯನ್ಸ್ ಜಿಲ್ಲೆ-317ಸಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷೆ ಡಾ. ಭಾರ್ಗವಿ ಐತಾಳ್ ಮಾತನಾಡುತ್ತಾ ಬೈಕ್ ಚಾಲನೆ ಮಾಡುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದರ ಮೂಲಕ ನಿಯಮ ಪಾಲಿಸಿ, ಪ್ರಸ್ತುತ ದಿನಗಳಲ್ಲಿ ಪೋಲಿಸರು ದಾಖಾಲೆಗಳನ್ನು ಪರಿಶೀಲಿಸುವ ಸಂಧರ್ಭದಲ್ಲಿ ಅವರ ನಿಂದನೆ ನಡೆಯುತ್ತರುವುದು ವಿಪರ್ಯಾಸ ಎಂದರು.
ಕಾರ್ಯಕ್ರಮದಲ್ಲಿ ಶಾಂತಿನಿಕೇತನ ಯುವವೃಂದ ಫ್ರಧಾನ ಕಾರ್ಯದರ್ಶಿ ಜಯಕರ್, ಹೆಬ್ರಾಯ್ನ ಅಧ್ಯಕ್ಷ ದಿನಕರ ಪ್ರಭು, ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ ಲಯನ್ಸ್ ಜಿಲ್ಲೆ-317ಸಿ ಸಂಯೋಜಕರಾದ ರಾಮ್ ದಾಸ್ ಮತ್ತು ನಂದ ಕಿಶೋರ್, ಸರ್ಕಾರಿ ಪದವಿ ಪೂರ್ವ ಕಾಲೇಜ್ ಹೆಬ್ರಿಯ ಪ್ರಾಂಶುಪಾಲ ಉಮೇಶ್ ಉಪಸ್ಥಿತರಿದ್ದರು.
ಸಂಚಾರಿ ನಿಯಮಗಳ ನಾಮ ಫಲಕಗಳನ್ನು ಶಾಶ್ವತವಾಗಿ ಹೆಬ್ರಿ ಸುತ್ತಮುತ್ತಲಿನ ಮುಖ್ಯ ರಸ್ತೆಯಚಿಂನಲ್ಲಿ ಆಳವಡಿಸಲಾಯಿತು.
ಜಾಹೀರಾತು
Post a comment