ಮಿಯ್ಯಾರು:ಫೆ.27ರಂದು 17ನೇ ವರ್ಷದ ಲವ-ಕುಶ ಜೋಡುಕರೆ ಕಂಬಳ-Times of karkala

ಮಿಯ್ಯಾರು:ಕರಾವಳಿ ಕರ್ನಾಟಕದ ಜಾನಪದ ಕ್ರೀಡೆ, ಮಿಯ್ಯಾರಿನ ಪ್ರತಿಷ್ಠಿತ 17ನೇ ವರ್ಷದ ಲವ-ಕುಶ ಜೋಡುಕರೆ ಕಂಬಳೋತ್ಸವವು ನವೋದಯ ಗ್ರಾಮ ವಿಕಾಸ ಚಾರಿಟೇಬಲ್‌ ಟ್ರಸ್ಟ್‌ ಸಹಯೋಗದಲ್ಲಿ ಫೆ.27ರಂದು ಬೆಳಗ್ಗೆ 8 ಗಂಟೆಯಿಂದ ಪ್ರಾರಂಭವಾಗಲಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷ, ಶಾಸಕ ವಿ. ಸುನಿಲ್‌ ಕುಮಾರ್‌ ಹೇಳಿದ್ದಾರೆ.

ಪ್ರತಿ ವರ್ಷದಂತೆ ಜನವರಿ ತಿಂಗಳಿನಲ್ಲಿ ನಡೆಯಬೇಕಾಗಿದ್ದ ಕಂಬಳಕೂಟ ಕೋವಿಡ್‌ ಕಾರಣದಿಂದ ಮುಂದೂಡಲ್ಪಟ್ಟು ಫೆಬ್ರವರಿ ತಿಂಗಳ ಅಂತಿಮ ವಾರಕ್ಕೆ ನಿಗದಿಯಾಗಿದೆ. ರೈತಾಪಿ ಜನರ ಮತ್ತು ಕಂಬಳಾಭಿಮಾನಿಗಳ ಅಭಿಪ್ರಾಯದಂತೆ ಸರಕಾರದ ನಿಯಾಮವಳಿಗಳನ್ನು ಪಾಲಿಸಿ ಎಂದಿನಂತೆ ಕಂಬಳ ಕ್ರೀಡೆಯನ್ನು ಸಂಭ್ರಮದಿಂದ ಆಚರಿಸಲು ಸರ್ವ ರೀತಿಯ ತಯಾರಿ ನಡೆಸಲಾಗಿದ್ದು, ಕಂಬಳ ಆಯೋಜಕರು ಮತ್ತು ಕೋಣಗಳ ಯಜಮಾನರುಗಳು ಪೂರ್ಣ ಸಹಕಾರ ನೀಡುವಂತೆ ಕೋರಲಾಗಿದೆ. ಈ ವರ್ಷದ ಕೂಟದಲ್ಲಿ ನಾನಾ ವಿಭಾಗಗಳಲ್ಲಿ 200ಕ್ಕೂ ಹೆಚ್ಚು ಜತೆ ಕೋಣಗಳು ಭಾಗವಹಿಸುವ ನಿರೀಕ್ಷೆ ಇದ್ದು ಪ್ರಾರಂಭದಿಂದ 24 ಗಂಟೆಗಳ ಒಳಗೆ ಕಂಬಳ ಕ್ರೀಡೆಯನ್ನು ಅಂತಿಮ ಹಂತಕ್ಕೆ ತರುವ ಯೋಜನೆ ಹಾಕಿಕೊಳ್ಳಲಾಗಿದೆ.


ಉದ್ಘಾಟನಾ ಕಾರ್ಯಕ್ರಮದಲ್ಲಿ ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಹರಿದಾಸ್‌ ಭಟ್‌, ಮಿಯ್ಯಾರು ಚರ್ಚ್ ನ ಧರ್ಮಗುರು ವಂ. ರೆ.ಫಾ ಪಾವುಲ್‌ ರೇಗೋ, ಜಾಮೀಯ ಮಸೀದಿ ಧರ್ಮಗುರು ಇ. ಅಬ್ದುಲ್‌ ರಶೀದ್‌, ಭಾಸ್ಕರ್‌ ಎಸ್‌. ಕೋಟ್ಯಾನ್‌, ಕಾರ್ಯಾಧ್ಯಕ್ಷ ಜೀವನ್‌ದಾಸ್‌ ಅಡ್ಯಂತಾಯ ಭಾಗವಹಿಸಲಿದ್ದಾರೆ.


ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಉಸ್ತುವಾರಿ ಸಚಿವ ಬಸವರಾಜ್‌ ಬೊಮ್ಮಾಯಿ, ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೀಶ್ವರ್‌, ಸಂಸದೆ ಶೋಭಾ ಕರಂದ್ಲಾಜೆ, ಕೋಟ ಶ್ರೀನಿವಾಸ ಪೂಜಾರಿ, ಡಾ. ಎಂ. ವೀರಪ್ಪ ಮೊೖಲಿ, ಉಮಾನಾಥ ಕೋಟ್ಯಾನ್‌, ಅಭಯಚಂದ್ರ ಜೈನ್‌, ಎಸ್‌.ಸಿ.ಡಿ.ಸಿ.ಸಿ ಬ್ಯಾಂಕ್‌ನ ಅಧ್ಯಕ್ಷ ಎಂ.ಎನ್‌ ರಾಜೇಂದ್ರ ಕುಮಾರ್‌ ಮೊದಲಾದ ಪ್ರಮುಖರು ಮತ್ತು ಜನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.


ಸಾಧಕರಿಗೆ ಸನ್ಮಾನ:

ಕಂಬಳ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕರ್ನಾಟಕ ಕ್ರೀಡಾ ರತ್ನ ಪುರಸ್ಕೃತ ಸುರತ್ಕಲ್‌ ಗೋಪಾಲಕೃಷ್ಣ ಪ್ರಭು, ಒಟಗಾರರಾದ ಮಿಜಾರು ಶ್ರೀನಿವಾಸ ಗೌಡ, ಹಕ್ಕೇರಿ ಸುರೇಶ್‌ ಶೆಟ್ಟಿ ಮತ್ತು ಪಣಪೀಲು ಪ್ರವೀಣ್‌ ಕೋಟ್ಯಾನ್‌ರನ್ನು ಈ ಸಂದರ್ಭ ಸನ್ಮಾನಿಸಲಾಗುವುದು. ಪ್ರಧಾನ ತೀರ್ಪುಗಾರ ಗುಣಪಾಲ ಕಡಂಬರ ಮಾರ್ಗದರ್ಶನದಲ್ಲಿಕಂಬಳದ ಯಶಸ್ಸಿನ ಕಾರ್ಯ ನಿರ್ವಹಣೆಗೆ ಬೇರೆ ಬೇರೆ ತಂಡಗಳನ್ನು ರಚಿಸಲಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


 

 ಜಾಹೀರಾತು  

 

 

 

 

 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget