ಕೊಕೇನ್ ಪ್ರಕರಣದಲ್ಲಿ ಬಂಧನದಲ್ಲಿರುವ ಪಶ್ಚಿಮ ಬಂಗಾಳದ ಬಿಜೆಪಿ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಪಮೇಲಾ ಗೋಸ್ವಾಮಿಯನ್ನ ಎನ್ಡಿಪಿಎಸ್ ನ್ಯಾಯಾಲಯ 5 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ. ಶುಕ್ರವಾರ ರಾತ್ರಿ ಪಮೇಲಾ ಗೋಸ್ವಾಮಿ ಬಂಧನಕ್ಕೊಳಗಾಗಿದ್ದು, ಕಾರಿನಲ್ಲಿ 100 ಗ್ರಾಂ ಕೊಕೇನ್ ಪತ್ತೆಯಾಗಿತ್ತು.
ನ್ಯಾಯಾಲಯದಲ್ಲಿ ಪಮೇಲಾ ಗೋಸ್ವಾಮಿ ತಮ್ಮನ್ನು ಉದ್ದೇಶಪೂರ್ವಕವಾಗಿ ಈ ಜಾಲದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಸಿಐಡಿ ತನಿಖೆಯ ಅಗತ್ಯವಿದೆ, ರಾಕೇಶ್ ಸಿಶಂಗ್ ಎಂಬಾತ ಕೊಕೇನ್ ನನ್ನ ಬಳಿಯಲ್ಲಿರಿಸಿರುವ ಖಚಿತ ಮಾಹಿತಿ ನನಗೆ ಲಭ್ಯವಾಗಿದೆ. ಈ ಸಂಬಂಧ ಐದು ದಿನಗಳ ಹಿಂದೆ ನಾನು ಆಡಿಯೋ ರೆಕಾರ್ಡ್ ಸಹ ಮಾಡಿದ್ದೇನೆ ಎಂದು ಪಮೇಲಾ ವಿಚಾರಣೆ ವೇಳೆ ಹೇಳಿದ್ದಾರೆ.
ನನ್ನ ವಿರುದ್ಧದ ಈ ಮೋಸದ ಜಾಲ ಬಹುದಿನಗಳಿಂದ ರಚಿಸಲಾಗಿದೆ. ನ್ಯೂ ಅಲಿಪುರ ಪೊಲೀಸ್ ಠಾಣೆ ಸಹ ಈ ಮೋಸದಾಟದ ಒಂದು ಭಾಗವಾಗಿರುವ ಸಾಧ್ಯತೆಗಳಿವೆ. ಪ್ರಕರಣದ ತನಿಖೆ ಡಿಟೆಕ್ಟಿವ್ ಡಿಪಾರ್ಟ್ ಮೆಂಟ್ (ಡಿಡಿ) ಅಥವಾ ಸಿಐಡಿ ನಡೆಸಬೇಕಿದೆ. ಸತ್ಯಕ್ಕೆ ಗೆಲವು ಸಿಗಲಿದೆ ಎಂದು ಹೇಳಿದ್ದು, ನ್ಯಾಯಾಲಯದಿಂದ ಹೊರ ಬಂದ ಬಳಿಕವೂ ಸಿಐಡಿ ತನಿಖೆಗೆ ಒತ್ತಾಯಿಸಿದ್ದಾರೆ.
Post a comment