ಕಾರ್ಕಳ: ಸಂಬಳ ಕೇಳಿದ್ದಕ್ಕೆ ಮನೆಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿ ಕೈಯ್ಯಲ್ಲಿದ್ದ ದುಡ್ಡನ್ನೂ ಕಿತ್ತುಕೊಂಡ ಮಾಲೀಕ!-ಟೈಮ್ಸ್ ಆಫ್ ಕಾರ್ಕಳ ವರದಿ

ಕಾರ್ಕಳ: ಸಂಬಳ ಕೇಳಿದ್ದಕ್ಕೆ ಮನೆಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿ ಕೈಯ್ಯಲ್ಲಿದ್ದ ದುಡ್ಡನ್ನೂ ಕಿತ್ತುಕೊಂಡ ಮಾಲೀಕ!

ಎರಡು ತಿಂಗಳಿನಿಂದ ಕೆಲಸ ಮಾಡುತ್ತಿದ್ದರೂ ಸರಿಯಾಗಿ ಸಂಬಳ ವಸತಿ ನೀಡದೆ ಇದ್ದುದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಒಡಿಸ್ಸಾದ ಮೂಲದ ಇಬ್ಬರನ್ನು ಮನೆಯಲ್ಲಿ ಕೂಡಿಹಾಕಿ ಹಲ್ಲೆ ನಡೆಸಿ ಕೈಯಲ್ಲಿದ್ದ  ಹಣವನ್ನೂ ಕಿತ್ತುಕೊಂಡ ಘಟನೆ ನಡೆದಿದೆ.ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ:

ಒಡಿಸ್ಸಾ ಮೂಲದ ಬಬುಲ್‌(20) ಎಂಬುವವರು  ಕಾರ್ಕಳ ಸಾಣೂರಿನ ಮುರತಂಗಡಿಯ ಮಥಾಯಸ್‌ಫಾರಂ ನಲ್ಲಿ ಸುಮಾರು 2 ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡಿದ್ದು ಇವರ ಸ್ನೇಹಿತ ಧನಪತಿ ಎಂಬವರು ಉಡುಪಿ ತಾಲೂಕಿನ ಕಣಜಾರು ಎಂಬಲ್ಲಿ ಶನೀಶ್‌ ಎಂಬುವವರ  ತೋಟದಲ್ಲಿ ಸುಮಾರು 2 ತಿಂಗಳಿನಿಂದ ಕೂಲಿ ಕೆಲಸ ಮಾಡಿಕೊಂಡಿದ್ದಾರೆ.

ಧನಪತಿಯ ಆತನ ಮಾಲಕ ಶನೀಶ್‌ರವರು ಸರಿಯಾಗಿ ಸಂಬಳ ಹಾಗೂ ವಸತಿ ನೀಡುತ್ತಿಲ್ಲವೆಂದು ಬಬುಲ್ ರವರಿಗೆ ತಿಳಿಸಿದಾಗ 31/01/2021 ರಂದು ಬಬುಲ್ ಸ್ನೇಹಿತ  ಧನಪತಿಯನ್ನು ವಿಚಾರಿಸಲು ಹೋಗಿದ್ದಾಗ  ಅಲ್ಲಿ ಮಾಲಕ  ಶನೀಶ್‌  ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ.

ಬಳಿಕ ಧನಪತಿ ಬಬುಲ್ ಜೊತೆಗೆ ಕೆಲಸಕ್ಕೆ ಸೇರಿದ್ದು ಬಳಿಕ ಶನೀಶ್ ದಿನಾಂಕ 02/02/2021 ರಂದು ಸಂಜೆ ತನ್ನ ಸ್ನೇಹಿತನ ಮೂಲಕ ಕರೆಮಾಡಿಸಿ ಒಳ್ಳೆಯ ಸಂಬಳ ಕೊಡುವುದಾಗಿ ಪುಸಲಾಯಿಸಿ,ಯಾವುದೇ ತೊಂದರೆ ನೀಡುವುದಿಲ್ಲವೆಂದು ಹೇಳಿ ಇಬ್ಬರನ್ನೂ ಅಜೆಕಾರು ಪೊಲೀಸ್ ಠಾಣೆಗೆ ಬರುವಂತೆ ತಿಳಿಸಿದ್ದಾನೆ.

ಇಬ್ಬರೂ ಪೊಲೀಸ್ ಠಾಣೆಗೆ ತೆರಳಿದಾಗ ಶನೀಶ್‌, ಸಾಬು ಹಾಗೂ ಸಂದೀಪ್‌ರವರು ಸೇರಿ  ಇವರಿಬ್ಬರನ್ನೂ  ಸಂಜೆ 6:00 ಗಂಟೆ ಸುಮಾರಿಗೆ ಅಜೆಕಾರಿನ ಬಸ್ತಿರೋಡ್‌ ಪಕ್ಕದಲ್ಲಿದ್ದ ತನ್ನ ಮನೆಯ ಪಕ್ಕ ಕೆಲಸದವರು ವಾಸಮಾಡುವ ರೂಮಿಗೆ  ಕರೆದುಕೊಂಡು ಹೋಗಿ ಇವರಿಬ್ಬರನ್ನೂ ಕೂಡಿಹಾಕಿದ್ದಾನೆ.


ಅಲ್ಲದೆ ಕೈಯಿಂದ ತಲೆಗೆ, ಬೆನ್ನಿಗೆ, ಹೊಟ್ಟೆಗೆ ಹೊಡೆದು,ಕಾಲಿನಿಂದ ಸೊಂಟಕ್ಕೆ ಎದೆಗೆ ತುಳಿದು ಇಬ್ಬರ  ಕೈಯ್ಯಲ್ಲಿದ್ದ ಮೊಬೈಲ್‌ಸೆಟ್‌ಗಳನ್ನು ಹಾಗೂ  ರೂಪಾಯಿ. 1,600/- ನ್ನು ತೆಗೆದುಕೊಂಡು ಅವಾಚ್ಯ ಶಬ್ದಗಳಿಂದ ಬೈದು ನಿಮ್ಮನ್ನು ಕೊಂದು ಹಾಕುವುದಾಗಿ ಜೀವಬೆದರಿಕೆ ಹಾಕಿ ರೂಮಿನಲ್ಲಿ ಕೂಡಿ ಹಾಕಿ ಹೋಗಿದ್ದಾನೆ.

ನಂತರ ಇಬ್ಬರೂ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಹೋಗಿ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಇಬ್ಬರಿಗೂ ವಿದ್ಯಾಭ್ಯಾಸದ ಕೊರತೆಯಿದ್ದು ಭಾಷೆಯೂ ಬರದೇ ಇರುತ್ತಿದ್ದರಿಂದ ಅಲ್ಲದೆ ಜನರ ಪರಿಚಯವೂ ಇಲ್ಲದೆ ಇದ್ದುದರಿಂದ ಪೋಸ್ ಠಾಣೆಗೆ ಪ್ರಕರಣ ದಾಖಲಿಸುವುದು ತಡವಾಗಿದೆ.


ಅಜೆಕಾರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.


ಪೊಲೀಸ್ ವರದಿ 

ಅಜೆಕಾರು: ಫಿರ್ಯಾದಿದಾರರಾದ ಬಬುಲ್‌(20) ತಂದೆ:ರಾಜೇಂದ್ರ ವಾಸ: ಬಾರಿಗೋಕುಡ, ಗುಂಡಾಲ ಗ್ರಾಮ, ಕುಂದ್ರ ತಾಲೂಕು, ಕೊರಾಪುಟ್‌ಜಿಲ್ಲೆ, ಒಡಿಸ್ಸಾ ರಾಜ್ಯ ಇವರು ಕಾರ್ಕಳ ಸಾಣೂರಿನ ಮುರತಂಗಡಿಯ ಮಥಾಯಸ್‌ಫಾರಂ ನಲ್ಲಿ ಸುಮಾರು 2 ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ಅವರ  ಸ್ನೇಹಿತ ಧನಪತಿ ಎಂಬವರು ಉಡುಪಿ ತಾಲೂಕಿನ ಕಣಜಾರು ಎಂಬಲ್ಲಿ ಚೆರಿಯನ್ @ ಶನೀಶ್‌ರವರ ತೋಟದಲ್ಲಿ ಸುಮಾರು 2 ತಿಂಗಳಿನಿಂದ ಕೂಲಿ ಕೆಲಸ ಮಾಡಿಕೊಂಡಿದ್ದು, ಆತನ ಮಾಲಕ ಶನೀಶ್‌ರವರು ಸರಿಯಾಗಿ ಸಂಬಳ ಹಾಗೂ ವಸತಿ ನೀಡುತ್ತಿಲ್ಲವಾಗಿ ತಿಳಿಸಿದಂತೆ, ಬಬುಲ್‌ ರವರು ದಿನಾಂಕ 31/01/2021 ರಂದು ಕಣಜಾರು ಸ್ನೇಹಿತ ಧನಪತಿ ರವರನ್ನು ವಿಚಾರಿಸಲು ಹೋದಾಗ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ನಂತರ ‌ಧನಪತಿಯು ಬಬುಲ್‌ ರವರು ಕೆಲಸ ಮಾಡಿಕೊಂಡಿದ್ದಲ್ಲಿಗೆ ಬಂದು ಕೆಲಸಕ್ಕೆ ಸೇರಿದ್ದು,  ದಿನಾಂಕ 02/02/2021 ರಂದು ಸಂಜೆ ಶನೀಶ್‌ರವರು ಆತನ ಸ್ನೇಹಿತ ಸಚ್ಚಿದಾನಂದ ಪ್ರಭು @ ಸಚ್ಚು ಎಂಬವರಲ್ಲಿ ಫೋನು ಮಾಡಿಸಿ ನಮ್ಮನ್ನು ಅಜೆಕಾರು ಪೊಲೀಸ್‌ ಠಾಣೆಗೆ ಬರುವಂತೆ ತಿಳಿಸಿದ್ದು, ಅದರಂತೆ ಠಾಣೆಗೆ ಬಂದ ನಮ್ಮಲ್ಲಿ ಶನೀಶ್‌ರವರು ಮಾತನಾಡಿ ಒಳ್ಳೆಯ ಸಂಬಳ ಕೊಡುವುದಾಗಿಯೂ, ಯಾವುದೇ ತೊಂದರೆ ಕೊಡುವುದಿಲ್ಲ ಎಂಬುದಾಗಿ ಪುಸಲಾಯಿಸಿ ನಮ್ಮನ್ನು ಶನಿಶ್‌ರವರು ಅವರ ಕಾರಿನಲ್ಲಿ ಸಂಜೆ 6:00 ಗಂಟೆ ಸುಮಾರಿಗೆ ಅಜೆಕಾರಿನ ಬಸ್ತಿರೋಡ್‌ ಪಕ್ಕದಲ್ಲಿದ್ದ ತನ್ನ ಮನೆಯ ಪಕ್ಕ ಕೆಲಸದವರು ವಾಸಮಾಡುವ ರೂಮಿಗೆ ನಮ್ಮಿಬ್ಬರನ್ನು ಶನೀಶ್‌, ಸಾಬು ಹಾಗೂ ಸಂದೀಪ್‌ರವರು ಸೇರಿ ಕರೆದುಕೊಂಡು ಹೋಗಿ ರೂಮಿನಲ್ಲಿ ಕೂಡಿ ಹಾಕಿ, ಕೈಯಿಂದ ತಲೆಗೆ, ಬೆನ್ನಿಗೆ, ಹೊಟ್ಟೆಗೆ ಹೊಡೆದುದ್ದಲ್ಲದೇ ಕಾಲಿನಿಂದ ಸೊಂಟಕ್ಕೆ ಎದೆಗೆ ತುಳಿದು ನಮ್ಮಿಬ್ಬರ ಕೈಯ್ಯಲ್ಲಿದ್ದ ಮೊಬೈಲ್‌ಸೆಟ್‌ಗಳನ್ನು ಹಾಗೂ ನಮ್ಮ ಬಳಿಯಿದ್ದ ರೂಪಾಯಿ. 1,600/- ನ್ನು ತೆಗೆದುಕೊಂಡು ಅವಾಚ್ಯ ಶಬ್ದಗಳಿಂದ ಬೈದು ನಿಮ್ಮನ್ನು ಕೊಂದು ಹಾಕುವುದಾಗಿ ಜೀವಬೆದರಿಕೆ ಹಾಕಿ ರೂಮಿನಲ್ಲಿ ಕೂಡಿ ಹಾಕಿ ಹೋಗಿರುತ್ತಾರೆ. ನಂತರ ನಾವು ಅಲ್ಲಿಂದ ತಪ್ಪಿಸಿಕೊಂಡು ಹೋಗಿ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ನನಗೆ ವಿದ್ಯಾಭ್ಯಾಸ ಹಾಗೂ ಭಾಷೆಯ ತೊಂದರೆಯಿಂದ ಹಾಗೂ ಜನರ ಪರಿಚಯ ಇಲ್ಲದ ಕಾರಣ ಠಾಣೆಗೆ ದೂರು ನೀಡಲು ತಡವಾಗಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 04/2021 ಕಲಂ: 323, 342, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
ಜಾಹೀರಾತು 
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget