ಕಾರ್ಕಳ:ಆನ್ಲೈನ್ ಶಾಪಿಂಗ್ ನಿಂದ ಮೋಸಹೋಗಿದ್ದ ವಿದ್ಯಾರ್ಥಿಗೆ ಸಿಕ್ಕಿತು ನ್ಯಾಯ!-Times of karkala

ಉಡುಪಿ : ಕಾರ್ಕಳದ ಗಂಗೆನೀರು ಹೊಸ್ಮಾರಿನ ಅಂತಿಮ ವರ್ಷದ ಬಿ.ಇ. ಮೆಕ್ಯಾನಿಕಲ್  ಇಂಜಿನಿಯರಿ೦ಗ್ ವಿದ್ಯಾರ್ಥಿಯಾದ ಶ್ರೇಯಸ್ ಬಾಪಟ್ ತನ್ನ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಹೆತ್ತವರಿಂದ ಹಣವನ್ನು ಪಡೆದು ‘ಅಮೇಜೋನ್, ಅಪೇರಿಯೊ ಆನ್‌ಲೈನ್ ವ್ಯಾಪಾರ ಕಂಪೆನಿಗೆ ಮು0ಗಡವಾಗಿ ‘ಲ್ಯಾಪ್‌ಟಾಪ್’ ಬಾಬ್ತು ರೂಪಾಯಿ ರೂ. 36,990/-ನ್ನು ಮತ್ತು ಹಾರ್ಡ್ವೇರ್‌ನ ಬಾಬ್ತು ರೂ.3,979./- ಒಟ್ಟಾಗಿ ರೂ.40,969 ಹಣವನ್ನು ಆನ್‌ಲೈನ್‌ನಲ್ಲಿ ಪಾವತಿಸಿ ಆರ್ಡರ್  ಮಾಡಿದ್ದರು.

 


ಕಂಪೆನಿಯು ಅದರಂತೆ ಪಾರ್ಸೆಲ್‌ನ ಮುಖೇನ ವಸ್ತುವನ್ನು ಕಳುಹಿಸಲಾಗಿ - ಕಳುಹಿಸಿದ ಪಾರ್ಸೆಲ್ ಬಾಕ್ಸ್  ವಿದ್ಯಾರ್ಥಿಯು ತೆರೆದುನೋಡಿದಾಗ ಅಚ್ಚರಿ ಕಾದಿತ್ತು.ಆರ್ಡರ್ ಮಾಡಲಾದ ವಸ್ತುಗಳ ಪೈಕಿ ಕೇವಲ ಲ್ಯಾಪ್‌ಟಾಪ್ ಮಾತ್ರ ಕಂಡುಬ೦ದಿತ್ತು.ಹಾರ್ಡ್ವೇರ್ ಪಾರ್ಸೆಲ್ ಮಾಡಲಾದಪೆಟ್ಟಿಗೆಯೊಳಗೆ ಇರಲಿಲ್ಲ.

ಇದರಿಂದ ಆಘಾತಕ್ಕೊಳಗಾದ ವಿದ್ಯಾರ್ಥಿಯು ಕಂಪೆನಿಯ ಕಸ್ಟಮರ್ ಕೇರ್‌ಗೆ, ಕಂಪೆನಿಗೆ ಲಿಖಿತ ಪತ್ರದ ಮೂಲಕ ದೂರನ್ನುನೀಡಿದರೂ ಸಹ ಪ್ರತಿಕ್ರಿಯಿಸದೇ ಇದ್ದಾಗ ಕಾನೂನು ನೋಟಿಸು ನೀಡಲಾಯಿತು.

 

ಅಲ್ಲಿಯೂ  ನಿರ್ಲಕ್ಷ್ಯತನ ಬೇಜವಾಬ್ದಾರಿತನ ವರ್ತನೆ ತೋರಿದ ಕಂಪೆನಿಯ ವಿರುದ್ದ ರೋಸಿಹೋದ ವಿದ್ಯಾರ್ಥಿಯು ನ್ಯಾಯಕ್ಕಾಗಿ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ಪಿರ್ಯಾದನ್ನು ನೀಡಿದರು. ನ್ಯಾಯಾಲಯಕ್ಕೂ ಕಂಪೆನಿಯು ಯಾವುದೇ ಲಿಖಿತ ಹೇಳಿಕೆ ನೀಡಲು ವಿಫಲವಾಯಿತು. ದೂರುದಾರರು ನೀಡಿದ ದೂರು, ದಾಖಲೆಗಳನ್ನು ಪರಿಶೀಲಿಸಿ, ವಕೀಲರ ವಾದವನ್ನು ಆಲಿಸಿದ ನ್ಯಾಯಾಲಯವು ಕಂಪೆನಿಯ ಅನುಚಿತ ವ್ಯಾಪಾರ, ಸೇವಾ ನ್ಯೂನತೆ, ರುಜುವಾತು ಆಗಿದೆ ಎಂದು ನಿರ್ಧರಿಸಿ ವಿದ್ಯಾರ್ಥಿಗೆ ಹಾರ್ಡ್ವೇರ್‌ನ ಮೊತ್ತವಾದ ರೂ.3,979/- ಶೇಖಡಾ 10ರಂತೆ  ಆರ್ಡ್ರ್ ಮಾಡಿದ ದಿನಾಂಕದಿ೦ದ ಪಾವತಿಸುವಲ್ಲಿಯವರೆಗೆ ಹಾಗೂ ವಿದ್ಯಾರ್ಥಿಗೆ ಆದ ಅನಾನುಕೂಲ, ಮಾನಸಿಕ ಯಾತನೆಗಾಗಿ ಪರಿಹಾರ ಮೊತ್ತವಾದ ರೂ.8,000/ವನ್ನು, ದಾವಾ ಖರ್ಚು ಹಾಗೂ ನೋಟಿಸ್‌ನ ಬಾಬ್ತು ರೂ.7000/- ಒಟ್ಟು ರೂ..18,979/-ವನ್ನು ಜಂಟಿಯಾಗಿ ಆದೇಶವನ್ನು ಸ್ವೀಕರಿಸಿದ ಒಂದು ತಿಂಗಳೊಳಗೆ ದೂರುದಾರ ವಿದ್ಯಾರ್ಥಿಗೆ ನೀಡುವಂತೇ ಕ0ಪೆನಿಗಳಿಗೆ ಶ್ರೀಮತಿ ಶೋಭಾ ಸಿ.ವಿ. ಅಧ್ಯಕ್ಷರು ಮತ್ತು ಶ್ರೀಮತಿ ಶಾರದಮ್ಮ ಎಚ್.ಜಿ., ಶ್ರೀಮತಿ ಸುಜಾತಾ ಬಿ. ಕೊರಳ್ಳಿಯವರನ್ನೊಳಗೊಂಡ ಜಿಲ್ಲಾ ಗ್ರಾಹಕ ನ್ಯಾಯಪೀಠವು ಆದೇಶ ನೀಡಿದೆ.

ಗ್ರಾಹಕ ವಿದ್ಯಾರ್ಥಿಯ ಪರವಾಗಿ ನ್ಯಾಯವಾದಿಗಳಾದ ಶ್ರೀ ವಿವೇಕಾನಂದ ಮಲ್ಯ, ಕಾರ್ಕಳ, ಕೋಟ ಅಶ್ವಿನಿ ಹೆಗ್ಡೆ ವಾದಿಸಿದ್ದರು.

ಜಾಹೀರಾತು 
ಗ್ರಾಹಕ ವಿದ್ಯಾರ್ಥಿಯ ಪರವಾಗಿ ನ್ಯಾಯವಾದಿಗಳಾದ ಶ್ರೀ ವಿವೇಕಾನಂದ ಮಲ್ಯ, ಕಾರ್ಕಳ, ಕೋಟ ಅಶ್ವಿನಿ ಹೆಗ್ಡೆ ವಾದಿಸಿದ್ದರು.Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget