ಉಡುಪಿ ಕೊಡಂಕೂರಿನ ವಿಶ್ವಬ್ರಾಹ್ಮಣ ಸಂಸ್ಕೃತ ವಿದ್ಯಾಪೀಠದಲ್ಲಿ ಸ್ಥಾಪಕರ ದಿನಾಚರಣೆಯು ದಿನಾಂಕ 7-02-2021ನೇ ಭಾನುವಾರ ಜರಗಿತು. ವಿದ್ಯಾಪೀಠದ ಆವರಣದಲ್ಲಿ ಜರಗಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲೆವೂರು ಪ್ರಭಾಕರ ಆಚಾರ್ಯ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಪಿ ಆಚಾರ್ಯರು ವಹಿಸಿದ್ದರು.
ಶ್ರೀ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಕಟಪಾಡಿ, ಶ್ರೀ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಅರೆಮಾದನಹಳ್ಳಿ ಹಾಗೂ ಶ್ರೀ ಶ್ರೀ ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ ವಡ್ಡನ ಹಾಳ್ ಇವರುಗಳ ದಿವ್ಯ ಉಪಸ್ಥಿತಿಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಅಲೆವೂರು ಯೋಗೀಶ ಆಚಾರ್ಯರು ಸ್ವಾಗತಿಸಿದರು. ಶ್ರೀಶ ಅಲೆವೂರು ಸ್ವಾಮೀಜಿಯವರನ್ನು ಗೌರವಿಸಿದರು.
ವಿದ್ಯಾಪೀಠದ ರಿಜಿಸ್ಟ್ರಾರ್ ಶ್ರೀ ಬಿ.ಎ. ಆಚಾರ್ಯ ಮಣಿಪಾಲ ಇವರು ಪ್ರಾಸ್ತಾವಿಕ ಮಾತುಗಳಲ್ಲಿ ವಿದ್ಯಾಪೀಠ ಬೆಳೆದು ಬಂದ ದಾರಿಯನ್ನು ವಿವರಿಸಿದರು. ವಿಶ್ವಬ್ರಾಹ್ಮಣ ಸಂಸ್ಕೃತ ವಿದ್ಯಾಪೀಠದ ಪ್ರಾಕ್ತನ ವಿದ್ಯಾರ್ಥಿ ವೃಂದದ ಅಧ್ಯಕ್ಷ ಶ್ರೀ. ಪ್ರಸಾದ ಪುರೋಹಿತ್ ಸಂಕಲಕರಿಯ ಇವರು ಸ್ಥಾಪಕ ದಿ. ಅಲೆವೂರು ಪ್ರಭಾಕರ ಆಚಾರ್ಯರ ಸಂಸ್ಮರಣೆಯನ್ನು ನಡೆಸಿಕೊಟ್ಟರು. "ಪ್ರಭಾಕರ ಆಚಾರ್ಯರ ಸಿಂಹ ಸದೃಶ ವ್ಯಕ್ತಿತ್ವದಿಂದ ವಿದ್ಯಾರ್ಥಿ ಸಮುದಾಯ ಪ್ರಭಾವಿತವಾಗಿದೆ" ಎಂದು ಅವರು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಶ್ರೀ ಬಾಬು ಪತ್ತಾರ್ ಅಧ್ಯಕ್ಷರು ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ, ಇವರು ಸಮುದಾಯವನ್ನು ಎಚ್ಚರಿಸುವ ಕೆಲಸ ಆಗಾಗ ನಡೆಯಬೇಕೆಂದರು. ಈ ರೀತಿಯ ವಿದ್ಯಾಪೀಠಗಳು ರಾಜ್ಯದ ಹಲವಾರು ಕಡೆ ಪ್ರಾರಂಭವಾಗಬೇಕೆಂದು ಹೇಳಿದರು. ವಿದ್ಯಾಪೀಠದ ಹೆಚ್ಚಿನ ಪ್ರಯೋಜನವನ್ನು ಉತ್ತರ ಕರ್ನಾಟಕದ ವಿಶ್ವಬ್ರಾಹ್ಮಣರು ಪಡೆದಿದ್ದಾರೆ. ವಿದ್ಯಾಪೀಠವನ್ನು ಬಲಪಡಿಸುವುದು ಸಮುದಾಯದ ಕರ್ತವ್ಯವೆಂದು ಅವರು ಹೇಳಿದರು.
ಬಾಬು ಪತ್ತಾರ್ ರನ್ನು ವಿದ್ಯಾಪೀಠದ ಪರವಾಗಿ ಸನ್ಮಾನಿಸಲಾಯಿತು. ಶ್ರೀ ಚಂದ್ರೇಶ್ ಶರ್ಮ ಬೆಂಗಳೂರು ಸನ್ಮಾನ ಪತ್ರ ಓದಿದರು. ಇದೆ ಸಂದರ್ಭದಲ್ಲಿ ವಿದ್ಯಾಪೀಠದ ವತಿಯಿಂದ ಆರ್ಥಿಕ ನೆರವಿಗೆ ಮನವಿ ಸಲ್ಲಿಸಲಾಯಿತು.
ಶ್ರೀ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿಯವರು ತ್ಯಾಗದಿಂದ ಬದುಕು ಸಾರ್ಥಕವಾಗುವುದೆಂದು ಹೇಳಿದರು. ಶ್ರೀ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿಯವರು ತನ್ನ ಆಶೀರ್ವಚನದಲ್ಲಿ ಪ್ರಭಾಕರ ಆಚಾರ್ಯರು ಸಮಾಜದ ಶಕ್ತಿಯಾಗಿದ್ದರು. ವಿದ್ಯಾಪೀಠವು ಸಮಾಜದ ಘನತೆ ಗೌರವಗಳ ಪ್ರತೀಕವೆಂದು ಶ್ರೀಗಳವರು ಹೇಳಿದರು.
ಶ್ರೀ ಶ್ರೀ ಶಂಕರಾತ್ಮಾನಂದ ಸರಸ್ವತಿಯವರು ತಾನು ವಿದ್ಯಾಪೀಠದಲ್ಲಿ ಕಳೆದ ಪೂರ್ವಾಶ್ರಮದ ವಿದ್ಯಾರ್ಥಿ ಜೀವನವನ್ನು ನೆನಪಿಸಿಕೊಂಡರು.
ಇದೇ ಸಂದರ್ಭದಲ್ಲಿ ವಿದ್ಯಾಪೀಠದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀಶ ಅಲೆವೂರು ಇವರಿಗೆ ಅಲೆವೂರು ಯೋಗೀಶ ಆಚಾರ್ಯರು ಅಧಿಕಾರ ಹಸ್ತಾಂತರ ಮಾಡಿ ಶುಭ ಹಾರೈಸಿದರು. ನೂತನ ಪದಾಧಿಕಾರಿಯವರನ್ನು ಹೂ ನೀಡಿ ಗೌರವಿಸಲಾಯಿತು. ವಿದ್ಯಾಪೀಠದ ಪ್ರಾಕ್ತನ ವಿದ್ಯಾರ್ಥಿ ವೃಂದದ ನೂತನ ಪದಾಧಿಕಾರಿಗಳನ್ನು ಸಭೆಗೆ ಪರಿಚಯಿಸಲಾಯಿತು.
ಅಧ್ಯಕ್ಷ ಸ್ಥಾನದಿಂದ ಶ್ರೀಮತಿ ಶಶಿಕಲಾ ಪಿ ಆಚಾರ್ಯರು ವಿದ್ಯಾಪೀಠದ ನಿರ್ವಹಣೆಗೆ ಸಹಕರಿಸುತ್ತಿರುವ ಎಲ್ಲರನ್ನು ಅಭಿನಂದಿಸಿದರು. ವಿದ್ಯಾಪೀಠದ ಕಟ್ಟಡಗಳನ್ನು ಸುಮಾರು ರೂ. ನಾಲ್ಕು ಲಕ್ಷ ವೆಚ್ಚದಲ್ಲಿ ರಿಪೇರಿ ಮಾಡಿಕೊಟ್ಟ ಪ್ರಾಕ್ತನ ವಿದ್ಯಾರ್ಥಿ ವೃಂದದವರಿಗೆ ಕೃತಜ್ಞತೆ ಹೇಳಿದರು.
ಕೊನೆಯಲ್ಲಿ ಪ್ರಾಂಶುಪಾಲ ಶ್ರೀಧರ ಭಟ್ ವಂದಿಸಿದರು. ನೇಜಾರು ವಾದಿರಾಜ ರಾವ್ , ನಾಗರಾಜ ಆಚಾರ್ಯ, ಅಲೆವೂರು ಪ್ರಸನ್ನ ಆಚಾರ್ಯ, ಮಿಥುನ್ ಜೆ.ಕೆ., ಸುರೇಶ್ ರಾವ್ ನೇಜಾರು, ಮೋಹನ್ ಎಂ.ಪಿ., ಸದಾಶಿವ ಆಚಾರ್ಯ ಪಡುಕುತ್ಯಾರ್, ವಿಶ್ವಕರ್ಮ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಮುರಳೀಧರ್ , ಕಾಪು ವಿಧಾನ ಸಭಾ ಕ್ಷೇತ್ರದ ವಿಶ್ವಬ್ರಾಹ್ಮಣ ಯುವ ಸಂಘಟನೆಯ ಸದಸ್ಯರು, ಉಡುಪಿ ಗಾಯತ್ರಿ ಮಹಿಳಾ ಮಂಡಳಿಯ ಸದಸ್ಯರು, ಉಡುಪಿ ಆರ್.ವಿ.ಎಸ್. ಸಂಘದ ಸದಸ್ಯರು, ವಿದ್ಯಾಪೀಠದ ಅಧ್ಯಾಪಕರು, ಪ್ರಾಕ್ತನ ವಿದ್ಯಾರ್ಥಿ ವೃಂದದ ಸದಸ್ಯರು ಮತ್ತು ವಿದ್ಯಾಪೀಠದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮ ನಿರ್ವಹಣೆಯನ್ನು ಶ್ರೀ. ಜಯರಾಮ ಆಚಾರ್ಯ ಸಾಲಿಗ್ರಾಮ ನಿರ್ವಹಿಸಿದರು.
ಜಾಹೀರಾತು
Post a comment