ಕಾರ್ಕಳಕೆಲಸ ಕೊಡಿಸುವ ನೆಪದಲ್ಲಿ ಕಾರ್ಕಳದ ನಿವೃತ್ತ ಕಿರಿಯ ಆರೋಗ್ಯ ಸಹಾಯಕಿಯೊಬ್ಬರಿಗೆ ಲಕ್ಷಾಂತರ ರೂ ವಂಚಿಸಿದ ಘಟನೆ ನಡೆದಿದೆ.ಮಾಳಚೌಕಿ ನಿವಾಸಿ ಶ್ರೀಮತಿ ಜಯಮ್ಮ (64) ಮೋಸಹೋದವರು.ಕೊಟೆಕ್ಯಾರ್ ವಾಸಿ ಆರೋಪಿತ ಅಬ್ದುಲ್ ಖಾದರ್ ವಂಚನೆ ಮಾಡಿದ ಆರೋಪಿಯಾಗಿದ್ದಾನೆ.
2019 ನೇ ರಲ್ಲಿ ಬೆಳ್ತಂಗಡಿ ಮದುವೆ ಬ್ರೋಕರ್ ಲಕ್ಷ್ಮಿ ಹೊಳ್ಳ ರವರ ಮೂಲಕ ಮಂಗಳೂರು ಕೊಟೆಕ್ಯಾರ್ ವಾಸಿ ಆರೋಪಿತ ಅಬ್ದುಲ್ ಖಾದರ್ ಎಂಬಾತನ ಪರಿಚಯವಾಗಿದೆ.ಈತ ಶ್ರೀಮತಿ ಜಯಮ್ಮ ರವರ ಇಬ್ಬರು ಮಕ್ಕಳಿಗೆ ಸರಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 9,60,000/- ರೂಪಾಯಿ ಹಣವನ್ನು ಬ್ಯಾಂಕ್ ಖಾತೆಗೆ ಹಾಗೂ 5,00,000/- ರೂಪಾಯಿ ಹಣವನ್ನು ನಗದನ್ನು ಪಡೆದುಕೊಂಡಿದ್ದಾನೆ.
ಇದೀಗ ಹಣವನ್ನೂ ವಾಪಸ್ಸು ಕೊಡದೆ ಉದ್ಯೋಗವನ್ನೂ ಕೊಡಿಸದೆ ಮೋಸಮಾಡಿದಾನೆ ಎಂದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಶ್ರೀಮತಿ ಜಯಮ್ಮರವರು ಪ್ರಕರಣ ದಾಖಲಿಸಿದ್ದಾರೆ.
ಜಾಹೀರಾತು
Post a comment