ಕಾರ್ಕಳ:ರೋಟರಿ ಬಾಲ ಭವನ ದಲ್ಲಿ ಕ್ಯಾನ್ಸರ್ ಪೀಡಿತರ ಮುಖದಲ್ಲಿ ಭರವಸೆಯ ನಗು ತರುವ ಉದ್ದೇಶದಿಂದ ರೋಟರಿ ಆನ್ಸ್ ಕ್ಲಬ್ ಕಾರ್ಕಳ, ಯುವವಾಹಿನಿ ಘಟಕ(ರಿ ) ಕಾರ್ಕಳ ಮತ್ತು ಮಹಿಳಾ ಸೌಂದರ್ಯ ಸಂಘ ಕಾರ್ಕಳ & ಉಡುಪಿ ಇವರ ಜಂಟಿ ಆಶ್ರಯದಲ್ಲಿ ಸೀಡ್ಸ್ ಆಫ್ ಹೋಪ್ ಮುಳಿಯ ಫಾಂಡೇಷನ್ ಪುತ್ತೂರು ಇವರ ಮಾರ್ಗದರ್ಶನದಲ್ಲಿ ಕೇಶದಾನ ಕಾರ್ಯಕ್ರಮ ನಡೆಯಿತು.
ಡಾ. ಜ್ಞಾನೇಶ್ ಕಾಮತ್ ದಂಪತಿಗಳು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಜನರಿಗೆ ಕೇಶ ದಾನದ ಬಗ್ಗೆ ಅರಿವು ಮೂಡಿಸಿವ ಈ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಳಿಯ ಫೌಂಡೇಶನ್ ಇವರ ವತಿಯಿಂದ ಕ್ಯಾನ್ಸರ್ ಪೀಡಿತ ಮಹಿಳೆಗೆ ಉಚಿತ ವಾದ ವಿಗ್ ಅನ್ನು ವಿತರಿಸಲಾಯಿತು. ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ವಹಿಸಿ ಕೊಂಡಿದ್ದ ಶ್ರೀಮತಿ ಕೃಷ್ಣ ವೇಣಿ ಪ್ರಸಾದ್ ಮುಳಿಯ ಇವರು ದಾನ ಮಾಡುವಾಗ ನನಗೆ ಉಳಿಸಿ ಪರರಿಗೆ ದಾನ ವನ್ನು ಮಾಡುದಕ್ಕೂ, ನನಗೆ ಇಲ್ಲದಿದ್ದರೂ ಪರವಾಗಿಲ್ಲ ಉಳಿದವರಿಗೆ ಉಪಕಾರವಾಗಲಿ ಹೇಳಿ ನಮ್ಮಲ್ಲಿ ಇದ್ದದನ್ನು ದಾನ ಮಾಡುವುದು ದೇವರು ಮೆಚ್ಚುವಂತದ್ದು ಎಂದು ತಿಳಿಸಿದರು.
ತನ್ನ ಶಿಕ್ಷಕಿ ಕ್ಯಾನ್ಸರ್ ಗೆ ಒಳಗಾಗಿ ಅನುಭಹಿಸಿದ ನೋವನ್ನು ಮನಗಂಡು ತನ್ನ ಸೇಹಿತರೊಂದಿಗೆ ಸೇರಿ ಈ ವಿಷಯದ ಬಗ್ಗೆ ಚರ್ಚಿಸಿದರು.ಒಂದು ವ್ಯಕ್ತಿಗೆ ವಿಗ್ ಮಾಡಲು 5 ಜನರ ಕೇಶವು ಬೇಕಾಗಿರುತದೆ, ಆದುದರಿಂದ ಇಂತಹ ಕೇಶ ದಾನ ಕಾರ್ಯಕ್ರಮ ಮಾಡಿದಲ್ಲಿ ಉಚಿತವಾಗಿ ಬಡ ಮಕ್ಕಳಿಗೆ, ಬಡ ಕುಟುಂಬದ ಕ್ಯಾನ್ಸರ್ ಪೀಡಿತರಿಗೆ ವಿಗ್ ನ್ನು ನೀಡಬಹುದು ಎಂದು ಮನಗಂಡು ಒಟ್ಟು 9 ಜನರು ಸೇರಿ ಮಾಡಿದ ತಂಡ ಎಂದು ಸೀಡ್ಸ್ ಆಫ್ ಹೋಪ್ ತಂಡದ ಸದಸ್ಯೆ ಕು. ಆದ್ಯ ಸುಲೋಚನಾ ತಿಳಿಸಿದರು. ಕು.ಹಿತ ಕಜೆ ಮತ್ತು ಸ್ನೇಹ ಭಟ್ ಅವರು ಭಾಗವಸಿದ್ದರು.
ಕ್ಯಾನ್ಸರ್ ದಿನದಂದು ಸ್ವತ ನನ್ನ ಕೇಶದಾನ ವನ್ನು ದಾನ ಮಾಡಿ ಜನರಲ್ಲಿ ಈ ಕಾರ್ಯಕ್ರಮದ ಬಗ್ಗೆ ಅರಿವನ್ನು ಮೂಡಿಸುವ ಪ್ರಯತ್ನ ವನ್ನು ಮಾಡಿದ್ದೇನೆ. ಒಟ್ಟು 56 ಜನರು ಸ್ವಯಂ ಪ್ರೇರಿತರಾಗಿ ತಮ್ಮ ಕೇಶದನಮಾಡಿರುತ್ತಾರೆ. 6 ವರ್ಷ ದ ಕು. ಅಮೃತ ಕಾಮತ್ ಮತ್ತು 68 ವರ್ಷ ದ ಪ್ರಾಯದ ಶ್ರೀಮತಿ ವೀಣಾ ಶ್ಯಾನುಭೋಗ್ ಕೇಶ ವನ್ನು ದಾನ ಮಾಡಿರೋದು ಕಾರ್ಯಕ್ರಮ ದ ಆಕರ್ಷಣೆ ಆಗಿತ್ತು -ರೋಟರಿ ಆನ್ಸ್ ಕ್ಲಬ್ ಅಧ್ಯಕ್ಷೆ ರೋ. ರಮಿತಾ ಶೈಲೆಂದ್ರ ರಾವ್
ಮಹಿಳಾ ಸೌಂದರ್ಯ ಸಂಘ ಕಾರ್ಕಳ ಮತ್ತು ಉಡುಪಿಯ ಪೈಲ್ವಾನೋ, ಮರೀನಾ ಅವರು ವೇದಿಕೆ ಯಲ್ಲಿ ಉಪಸಿತರಿದ್ದರು.
ಯುವವಾಹಿನಿ ಘಟಕ ಕಾರ್ಕಳ ಸಂಘದ ಅಧ್ಯಕ್ಷ ಗಣೇಶ್ ಸಾಲ್ಯಾನ್ ಅವರು ಸ್ವಾಗತಿಸಿದರು, ಕಾರ್ಯದರ್ಶಿ ತಾರಾನಾಥ್ ವಂದಿಸಿದರು. ಆನ್ ಸುಮನಾಯಕ್ ಕಾರ್ಯಕ್ರಮ ವನ್ನು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ರೋ. ಅರುಣ್ ಮಾಂಜಾ, ಯುವವಾಹಿನಿ ಸಂಘದ ಸದಸ್ಯರು, ಆನ್ಸ್ ಕ್ಲಬ್ ಸದಸ್ಯರು ಕೇಶ ದಾನಿಗಳು ಮತ್ತು ಸಾರ್ವಜನಿಕರು ಉಪಸ್ಥಿರಿದ್ದರು.
ಜಾಹೀರಾತು
Post a comment