ಕಾರ್ಕಳ:ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇದರ ವತಿಯಿಂದ ರೋಟರಿ ಜಿಲ್ಲೆಯ ಯೋಜನೆ 'ಜ್ಞಾನ ದೀವಿಗೆ' ಅನ್ವಯ ಸರಕಾರಿ ಪ್ರೌಢಶಾಲೆ, ರೆಂಜಾಳ, ಕಾರ್ಕಳ ತಾಲೂಕು ಇಲ್ಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಉಚಿತ 'ಪ್ರಿಲೋಡೆಡ್ ಟ್ಯಾಬ್ 'ವಿತರಿಸಲಾಯಿತು.
ದಾನಿಗಳು ಹಾಗೂ ವಿದ್ಯಾಭಿಮಾನಿಗಳಾದ ಶ್ರೀಮತಿ ಜಯಮಾಲಾ ಸತೀಶ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ಬಿನ ಮಾರ್ಗದರ್ಶಕರಾದ ರೊ.ಪಿಡಿಜಿ. ಡಾ.ಭರತೇಶ್ ಆದಿರಾಜ್ , ಅಧ್ಯಕ್ಷರಾದ ರೊ. ಪ್ರಶಾಂತ್ ಬೆಳಿರಾಯ, ಟ್ಯಾಬ್ ವಿತರಣೆಗೆ ಸಂಬಂಧಿಸಿದಂತೆ ರೋಟರಿ ಜಿಲ್ಲಾ ಸಂಯೋಜಕರಾದ ರೊ.ಪ್ರಶಾಂತ್ ಹೆಗ್ಡೆ, ಪೂರ್ವಾಧ್ಯಕ್ಷರಾದ ರೊ.ಸುರೇಂದ್ರ ನಾಯಕ್,ರೊ.ರಮೇಶ್ ಶೆಟ್ಟಿ, ದಾನಿಗಳು ಹಾಗೂ ಶಿಕ್ಷಣ ತಜ್ಞರಾದ ಶ್ರೀ ಜಗದೀಶ್ ಹೆಗ್ಡೆ, ಸಂಸ್ಥೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಮಹಾವೀರ ಹೆಗ್ಡೆ, ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಸಂದೇಶಗಳನ್ನು ನೀಡಿ, ಟ್ಯಾಬ್ ಗಳನ್ನು ವಿತರಿಸಿದರು.
ನಿಯೋಜಿತ ಅಧ್ಯಕ್ಷರಾದ ರೊ.ಪ್ರಕಾಶ್ ಪೈ, ಕಾರ್ಯದರ್ಶಿ ರೊ. ಗಣೇಶ್ ಬರ್ಲಾಯ, ರೊ.ಗೀತಾ ರಾವ್, ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸ್ವರ್ಣಲತಾ, ಶಿಕ್ಷಕ ವೃಂದದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಜಾಹೀರಾತು
Post a comment