ಹೆಬ್ರಿ:ದನಗಳನ್ನು ಹುಡುಕಲು ಹೊರಟ ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ಹೆಬ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೆಬ್ರಿ ತಾಲೂಕು ಶಿವಪುರ ಗ್ರಾಮ ನಿವಾಸಿ ಪ್ರಸಾದ (36) ಎಂಬುವವರು ಮೃತಪಟ್ಟವರು.
ಇವರು ದಿನಾಂಕ 02/02/2021 ರಂದು ಮನೆಯಲ್ಲಿ ದನಗಳು ಕಾಣದ ಕಾರಣ ರಾತ್ರಿ 09:00 ಗಂಟೆಗೆ ನೋಡಿ ಬರುವುದಾಗಿ ತಿಳಿಸಿ ಮನೆಯಿಂದ ಹೋಗಿದ್ದಾರೆ.
ಬಳಿಕ ಮನೆಯ ಹತ್ತಿರದ ರಾಜ್ ಕುಮಾರರವರು ಬಂದು ಶಿವಪುರ ಗ್ರಾಮದ ಎಲಿಪಾದೆ ಬಂಡೆಯ ಬಳಿ ಪ್ರಸಾದ ರವರು ಬಂಡೆಯಿಂದ ಕೆಳಗೆ ಬಿದ್ದು ಅವರ ತಲೆಗೆ ರಕ್ತ ಗಾಯವಾಗಿರುತ್ತದೆ ಎಂದು ಮನೆಯವರಿಗೆ ತಿಳಿಸಿದ್ದಾರೆ.
ಕೂಡಲೇ ಅಲ್ಲಿಗೇ ಹೋಗಿ ನೋಡಿದಾಗ ತಲೆಗೆ ಗಾಯವಾದ ಸ್ಥಿತಿಯಲ್ಲಿದ್ದರು.ಕೂಡಲೇ ಅವರನ್ನು ಉಪಚರಿಸಿ ನೋಡಿದಾಗ ಅವರು ಉಸಿರಾಡುತ್ತಿದ್ದುದರಿಂದ ರಾತ್ರಿ 10:30 ಗಂಟೆಗೆ ಹೆಬ್ರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ವೈದ್ಯರಲ್ಲಿ ತೋರಿಸಿದಾಗ ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ.
ವಿಪರೀತ ಕುಡಿತದ ಚಟ ಹೊಂದಿದ್ದರು ಎನ್ನಲಾಗಿದೆ.ಮೃತರ ಮರಣದಲ್ಲಿ ಸಂಶಯವಿರುವುದಾಗಿ ಮೃತ ಪ್ರಸಾದ್ ನ ತಂದೆ ನರಸ ನಾಯ್ಕ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಜಾಹೀರಾತು
Post a comment