ಕಾರ್ಕಳ:ಹೊಟ್ಟೆಗೆ ಟೇಬಲ್ ತಾಗಿ ವ್ಯಕ್ತಿ ಸಾವು-Times of karkala

ಕಾರ್ಕಳ:ಹೊಟ್ಟೆಗೆ ಟೇಬಲ್ ತಾಗಿ ವ್ಯಕ್ತಿಯೋರ್ವರು ಸಾವನ್ನಪ್ಪಿದ್ದ ಘಟನೆ ನಡೆದಿದೆ.ಬೈಲೂರು ಕೌಡೂರು ಗ್ರಾಮದ ನಿವಾಸಿ  ರಮೆಶ್‌ ಆಚಾರ್ಯ(42) ಮೃತಪಟ್ಟವರು.

ರಮೇಶ್ ಆಚಾರ್ಯ ದಿನಾಂಕ 30/01/2021 ರಂದು ಬೈಲೂರಿನಲ್ಲಿ ಕೆಲಸ ಮಾಡುತ್ತಿರುವಾಗ ಹೊಟ್ಟೆಗೆ ಟೇಬಲ್‌ ತಾಗಿದ್ದು ಆ ದಿನ ರಾತ್ರಿ ಹೊಟ್ಟೆ ನೋವು ಆದ ಕಾರಣ ಮದ್ದಿಗೆ ಹೋಗಿ ಬಂದಿದ್ದು ನಂತರ ದಿನಾಂಕ 31/01/2021 ರಂದು ನಿಟ್ಟೆ ಗಾಜ್ರೀಯಾ ಆಸ್ಪತ್ರೆ ಮತ್ತು ಕಾರ್ಕಳ ಅಮರ ಜ್ಯೋತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ಅಲ್ಲೂ ಗುಣವಾಗದ ಕಾರಣ  ದಿನಾಂಕ 01/02/2021 ರಂದು ಬೈಲೂರು ಆರೂರು ನರ್ಸಿಂಗ್‌ಹೋಂಗೆ ಚಿಕಿತ್ಸೆಗೆ  ಹೋದಾಗ ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕಾರ್ಕಳಕ್ಕೆ  ಹೋಗಲು ತಿಳಿಸಿದ್ದಾರೆ.

ಮಧ್ಯಾಹ್ನ 3:20 ಗಂಟೆಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಬಂದಾಗ ರಮೇಶ್‌ರವರು ಮೃತಪಟ್ಟಿರುವುದಾಗಿ ಪರೀಕ್ಷಿಸಿದ ವೈದ್ಯರು ತಿಳಿಸಿದ್ದಾರೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಜಾಹೀರಾತು 
 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget