ಹಿರ್ಗಾನ:ಕರ್ನಾಟಕ ಯುವ ಸಾಹಿತ್ಯ ಸಮ್ಮೆಳನ,ಅಧ್ಯಕ್ಷರಾಗಿ ಮಂಜುನಾಥ ಕಾಮತ್-Times of karkala

ಅಜೆಕಾರು: ಆದಿಗ್ರಾಮೋತ್ಸವ ಸಮಿತಿಯು, ಆಖಿಲ ಕನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಮತ್ತು ಲಯನ್ಸ್ ಕ್ಲಬ್ ಮುನಿಯಾಲು ಸಹಯೋಗದೊಂದಿಗೆ ಹಿರ್ಗಾನ ಬಿ.ಎಂ ಶಾಲೆಯಲ್ಲಿ ಫೆಬ್ರವರಿ 28 ರಂದು ಆಯೋಜಿಸಿರುವ ಕರ್ನಾಟಕ ಯುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬೊರ್ಗಲ್‌ಗುಡ್ಡೆ ಮಂಜುನಾಥ ಕಾಮತ್ ಆಯ್ಕೆಯಾಗಿದ್ದಾರೆ ಎಂದು ಪ್ರಧಾನ ಸಂಘಟಕ ಡಾ. ಶೇಖರ ಅಜೆಕಾರು ತಿಳಿಸಿದ್ದಾರೆ. 

ಸೃಜನಶೀಲ ಬರಹಗಳಿಂದ ಮತ್ತು ಕೃತಿಗಳನ್ನು ಜನ ಸಾಮಾನ್ಯರಿಗೂ ಪರಿಚಯಿಸುವ ವಿಶಿಷ್ಟತೆ ಹೊಂದಿರುವ ಮಂಜುನಾಥ ಅವರು ಪಂಡಿತಾ, ದಾರಿ ತಪ್ಪಿಸು ದೇವರೇ, ನಾನು ಸನ್ಯಾಸಿಯಾಲು ಹೊರಟದ್ದು ಮತ್ತು ಚಂದದ ಹಲ್ಲಿನ ಹುಡುಗಿ ಮತ್ತು 18 ಅವಳುಗಳ ಕಥೆ ಇವು ಅವರ ಬಹುಚರ್ಚಿತ ಕೃತಿಗಳಾಗಿವೆ. ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು ಆಗಿರುವ ಅವರು ಕರ್ನಾಟಕ ಕೊಂಕಣಿ ಅಕಾಡೆಮಿಯ 1 ಲಕ್ಷ ರೂಪಾಯಿಯ ಫೆಲೋಶಿಫ್ ಪಡೆದಿದ್ದಾರೆ.

ಯುವಕರೇ ವೇದಿಕೆ ಹಂಚಿಕೊಳ್ಳುವ ವಿನೂತನ ಕಲ್ಪನೆಯ ಸಮ್ಮೇಳನದಲ್ಲಿ ಮಧ್ಯಾಹ್ನ ಹಿರಿಯರಿಂದ ಕಿರಿಯರಿಗೆ ಮಾರ್ಗದರ್ಶನ ಮತ್ತು ಅವರ ಯಶಸ್ಸಿನ ಕಥೆ ಹೇಳುವ ಕಾರ್ಯಕ್ರಮ ಅನುಭಾವ ಗೋಷ್ಠಿ, ಸಮ್ಮೇಳನದ ವಿಶೇಷತೆಯಾಗಿದೆ. ಕವಿಗೋಷ್ಠಿ, ಕನ್ನಡ ಗಾಯನ, ಭರತನಾಟ್ಯ, 6 ವರ್ಷ ಕೆಳಗಿನ ಮಕ್ಕಳ “ಪುಟಾಣಿ ವಂಡರ್ ಶೋ”, ರೂಪಾ ವಸುಂಧರಾ ಆಚಾರ್ಯ ಅವರ “ ಪುಷ್ಪಾಂಜಲಿ ಕಲಾ ಪ್ರದರ್ಶನವಿದೆ.

ಅನುಭಾವ ಗೋಷ್ಠಿಯಲ್ಲಿ ಅನುಭವ ಹಂಚಿಕೊಳ್ಳುವ ಮತ್ತು ಭಾರತ ಸಾಧನಾ ಗೌರವಕ್ಕೆ ಪಾತ್ರವಾಗುವ ಗಣ್ಯರು: 

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ,ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಮುಂಬಯಿ ಉದ್ಯಮಿ-ಸಂಘಟಕ ದೇವಸ್ಯ ಶಿವರಾಮ ಶೆಟ್ಟಿ,ಆಧುನಿಕ ಕಂಬಳಗಳ ರೂವಾರಿ ಗುಣಪಾಲ ಕಡಂಬ,ಬೆಳ್ಳಿಪಾಡಿ ಮಣಿಪಾಲ,ಉದ್ಯಮಿ ಮತ್ತು ಸಂಘಟಕ ಹರಿಪ್ರಸಾದ್ ರೈ,ಸಾಹಿತಿ ರಾಮಚಂದರ್ ಬೈಕಂಪಾಡಿ,ಜನಪ್ರತಿನಿಧಿ ಶೀಲಾ.ಕೆ, ಶೆಟ್ಟಿ,ದೈಹಿಕ ಶಿಕ್ಷಣ ಶಿಕ್ಷಕ ಮತ್ತು ಸಂಘಟಕ ಆರೂರು ತಿಮ್ಮಪ್ಪ ಶೆಟ್ಟಿ,ಹಿರಿಯ ಸಹಕಾರ ದುರೀಣ ಶಿರಿಯಣ್ಣ ಶೆಟ್ಟಿ,ಕಂಬಳ ಕ್ಷೇತ್ರದ ಸಾಧಕ ತಿರುವೈಲುಗುತ್ತು ನವೀನ್‌ಚಂದ್ರ ಆಳ್ವ, ಸಣ್ಣ ಉಳಿತಾಯ ಮತ್ತು ಮಹಿಳಾ ಸಾಧಕಿ ಕೆ.ಪಿ.ಪದ್ಮಾವತಿ, ಸಾಹಿತಿ, ಚಿತ್ರ ನಟ ಅಶೋಕ್ ಕುಮಾರ್ ಕಾಸರಗೋಡು,ಹಿರಿಯ ಪ್ರಗತಿ ಪರ ಕೃಷಿಕ ರಾಜವರ್ಮ ಬೈಲಂಗಡಿ,ಹಿರಿಯ ಉದ್ಯಮಿ ಬೋಳ ಪ್ರಭಾಕರ ಕಾಮತ್,ಐ.ವಿ.ಸೋನ್ಸ್ ಬನ್ನಡ್ಕ ಮೂಡುಬಿದಿರೆ, ಕೃಷಿ ಸಾಧಕರು ,ನಿವೃತ್ತ ಪ್ರಾಂಶುಪಾಲರು- ಸಂಘಟಕಿ ಮಿತ್ರಪ್ರಭ ಹೆಗ್ಡೆ, ಕಾರ್ಕಳ,ಸಮಾಜ ಸೇವಕರು ಕೆ.ಮಹಾಬಲೇಶ್ವರ ಆಚಾರ್ಯ ಉಡುಪಿ,ಹಿರಿಯ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರೀ ಬೆಳ್ತಂಗಡಿ, ಉದ್ಯಮಿ ಮತ್ತು ಸಮಾಜಸೇವಕ ಭಾಸ್ಕರ ಜೋಯಿಸ್ ಹೆಬ್ರಿ,ಜವಳಿ ವರ್ತಕರ ಸಂಘದ ಉಭಯ ಜಿಲ್ಲಾಧ್ಯಕ್ಷ ಯೋಗೀಶ್ ಭಟ್ ಹೆಬ್ರಿ, ಸಂಘಟಕ ಭುವನ ಪ್ರಸಾದ್ ಹೆಗ್ಡೆ ಮಣಿಪಾಲ, ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್,ಹಿರಿಯ ಪತ್ರಕರ್ತ ಕೆ.ಪದ್ಮಾಕರ ಭಟ್, ನಿತ್ಯಾನಂದ ಪೈ, ಕಾರ್ಕಳ,ಶಿಕ್ಷಣ ತಜ್ಞ ಎ.ನರಸಿಂಹ ಬೊಮ್ಮರಬೆಟ್ಟು, ನಿವೃತ್ತ ಜಿಲ್ಲಾ ಯುವಜನ ಅಧಿಕಾರಿ ಕೆ.ಕರುಣಾಚಂದ್ರ,ಸಾಹಿತ್ಯ ಪರಿಚಾರಿಕೆ ನರಸಿಂಹ ಮೂರ್ತಿ ರಾವ್, ಉಡುಪಿ, ಮುದ್ರಣ ಕ್ಷೇತ್ರ ನಾರಾಯಣ ಶೆಟ್ಟಿ ಮುಂಬಯಿ, ಯಕ್ಷಗಾನ ಕಲಾವಿದ ಸದಾನಂದ ನಾಯಕ್ ಮುಂಬಯಿ

 ಜಾಹೀರಾತು  

 

 

 

 

 

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget