ಜೀವ ಇದ್ದಾಗಲೇ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಹೇಳಿದ ವೈದ್ಯರು-Times of karkala

ಜೀವ ಇರುವಾಗಲೇ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಹೇಳಿ ವೈದರು ಎಡವಟ್ಟು ಮಾಡಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಕೊಪ್ಪಳದ ಕೆ ಎಸ್ ಆಸ್ಪತ್ರೆಯ ವೈದ್ಯರ ಈ ಎಡವಟ್ಟನ್ನ ಮಾಡಿಕೊಂಡಿದ್ದಾರೆ. ಕೊಪ್ಪಳ ತಾಲೂಕಿನ ಲಾಚನಕೇರಿ ಬಳಿ ಜ.3 ರಂದು ಅಪಘಾತ ಸಂಭವಿಸಿತ್ತು. ಅಪಘಾತಕ್ಕೆ ತುತ್ತಾಗಿದ್ದ ಪಕೀರಪ್ಪ ದೊಡಮನಿಯನ್ನು ರಾತ್ರಿ 9 ಘಂಟೆಗೆ ಕೊಪ್ಪಳದ ಕೆ ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮರುದಿನ ದಿನ ಆ ವ್ಯಕ್ತಿಗೆ ಜೀವ ಇದ್ದರೂ ಡಿಸ್ಚಾರ್ಜ್ ಸಮ್ಮರಿಯಲ್ಲಿ ಡೆತ್ ಎಂದು ಬರೆದಿದ್ದನ್ನ ನೋಡಿ ಬಾಡಿ ಕೊಡಿ ಎಂದು ಕೇಳಿದಾಗ ಜೀವ ಇರುವುದು ಬೆಳಕಿಗೆ ಬಂದಿದೆ.

ಕುಟುಂಬಸ್ಥರು ಆಸ್ಪತ್ರೆಯ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೆ ಆ ರೋಗಿಯನ್ನ ಜಿಲ್ಲಾ ಆಸ್ಪತ್ರೆಗೆ ಕರದೊಯ್ದರು ಅಲ್ಲಿ ಎರಡು ಗಂಟೆಗೆಗಳ ಕಾಲ ಚಿಕ್ಸಿತೆ ನೀಡಿದ್ದಾರೆ. ತೀವ್ರ ಉಸಿರಾಟದ ನಂತರ ಈಗ ಆ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಜಿಲ್ಲಾಸ್ಪತ್ರೆಯ ವೈದ್ಯರು ತಿಳಿಸಿದರು. ನಂತರ ಕೆಎಸ್ ಆಸ್ಪತ್ರೆಗೆ ವಿರುದ್ಧ ರೋಗಿಯ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ವೈದ್ಯರು ಬರುವಂತೆ ಒತ್ತಾಯ ಮಾಡಿದ್ದಾರೆ.

ಜಾಹೀರಾತು 
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget