ಆಸ್ಟ್ರೇಲಿಯಾದ ಪ್ರಧಾನಿ ಸ್ಕೋಟ್ ಮೋರಿಸನ್ ಅವರ ನೇತೃತ್ವದ ಲಿಬರಲ್ ಪಾರ್ಟಿಗೆ ವಿಕ್ಟೋರಿಯ ರಾಜ್ಯ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಶಿಲ್ಪಾ ಹೆಗ್ಡೆ ಆಯ್ಕೆಯಾಗಿರುತ್ತಾರೆ.
ಇವರು ಮೂಲತಃ ಉಡುಪಿ ಜಿಲ್ಲೆಯ ನಿವಾಸಿ. ಪೆರ್ಡೂರಿನ ಮೋಹ ಮೋಹನ್ ದಾಸ್ ಹೆಗ್ಡೆ ಮತ್ತು ಶಶಿಕಲಾ ಹೆಗ್ಡೆ ದಂಪತಿಯ ಪುತ್ರಿಯಾಗಿರುವ ಇವರು ನಿಟ್ಟೆಯಲ್ಲಿ ಇಂಜಿನಿಯರಿಂಗ್ ಮುಗಿಸಿ 2001ರಿಂದ ಆಸ್ಟ್ರೇಲಿಯಾದಲ್ಲಿ ಸಾಫ್ಟ್ವೇರ್ ಕನ್ಸಲ್ಟೆನ್ಸಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ನನ್ನ ಜೀವನದ ಮಹತ್ತರ ಘಟ್ಟ ಗಳಲ್ಲಿ ಒಂದಾಗಿದೆ. ಸುಮಾರು ಇಪ್ಪತ್ತು ವರ್ಷಗಳಿಂದ ಆಸ್ಟ್ರೇಲಿಯದಲ್ಲಿ ನೆಲೆಸಿದ್ದೇನೆ. ಆಸ್ಟ್ರೇಲಿಯಾ ಒಂದು ರೀತಿಯಲ್ಲಿ ಅವಕಾಶಗಳ ಸಾಗರ, ಭಾರತೀಯ ಆಸ್ಟ್ರೇಲಿಯಾ ವಲಸೆ ಯವರು ಎಂಬ ತಾರತಮ್ಯವಿಲ್ಲದೆ ಇಲ್ಲಿ ಎಲ್ಲರಿಗೂ ಸಮಾನ ಅವಕಾಶ ದೊರೆಯುತ್ತದೆ. ವ್ಯವಸ್ಥೆಗಳು ಅತ್ಯಂತ ಪಾರದರ್ಶಕವಾಗಿ ರುವುದರಿಂದ ಮೊದಲನೇ ಭಾರತೀಯ ಮಹಿಳೆಯಾಗಿ ಆಯ್ಕೆಯಾಗಿರುವುದಕ್ಕೆ ತುಂಬಾ ಹೆಮ್ಮೆ ಅನಿಸುತ್ತಿದೆ.
ಶಿಲ್ಪಾ ಹೆಗ್ಡೆ.
ಜಾಹೀರಾತು
Post a comment