ಮಾಳ:ಬಟ್ಟೆ ಒಗೆಯುವ ಕಲ್ಲಿನ ವಿಚಾರಕ್ಕೆ ಸಂಭಂದಿಕರ ನಡುವೆಯೇ ಹಲ್ಲೆ-Times of karkala

ಸಾಂಧರ್ಭಿಕ ಚಿತ್ರ 


ಮಾಳ:ಬಟ್ಟೆ ಒಗೆಯುವ ಕಲ್ಲಿನ ವಿಚಾರವಾಗಿ ಸಂಬಂಧಿಕರೇ ಪರಸ್ಪರ ಹಲ್ಲೆ ಮಾಡಿಕೊಂಡ ಘಟನೆ ಮಾಳ ಚೌಕಿ ಬಳಿ ನಡೆದಿದೆ.

ಈ ಬಗ್ಗೆ ಪರಸ್ಪರ ದೂರು ದಾಖಲಾಗಿದೆ. ಈ ಕುರಿತು  ಧೀರಜ್ ಜೈನ್ (45) ಎಂಬುವವರು ಶೀತಲ್ ಕುಮಾರ ಎಂ.ಜೈನ್ (40),  ಎಂಬುವರ ಮೇಲೆ ದೂರು ಪ್ರತಿದೂರು ದಾಖಲಾಗಿದೆ. ಈರ್ವರೂ ಸರ್ಕಾರೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸ್ ವರದಿ:


ಕಾರ್ಕಳ: ಪಿರ್ಯಾದಿದಾರರಾದ ಧೀರಜ್ ಜೈನ್ (45), ತಂದೆ: ದಿ.ಯುವರಾಜ್ ಜೈನ್, ವಾಸ: ಸೌಟಬೆಟ್ಟು  ಮನೆ ಮಾಳ ಚೌಕಿ ಮಾಳ ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇವರ ಮನೆಯಲ್ಲಿ ಕುಟುಂಬಸ್ಥರ ಭೂತದ ಗುಡಿ ನವೀಕರಣ ಮಾಡುತ್ತಿದ್ದು,  ದಿನಾಂಕ 30/01/2021 ರಂದು ಮಧ್ಯಾಹ್ನ 14:00 ಗಂಟೆಗೆ  ಪಿರ್ಯಾದಿದಾರರ ಮಾವನ ಮಗನಾದ ಶೀತಲ್ ಜೈನ್ ಗುಡಿಯ ಬಳಿ ಇರುವ ಬಟ್ಟೆ ತೊಳೆಯುವ ಕಲ್ಲು ತೆಗೆಯುವ ವಿಚಾರವಾಗಿ ಪಿರ್ಯಾದಿದಾರರ ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರ ಕುತ್ತಿಗೆಯನ್ನು ಹಿಡಿದು ಕೈಯಿಂದ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ದೂಡಿದ್ದು ಅಲ್ಲದೇ ಜೀವ ಬೆದರಿಕೆ ಹಾಕಿರುವುದಾಗಿದೆ. ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆ ಗೆ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 15/2021 ಕಲಂ: 448, 323,504 ,506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಾರ್ಕಳ: ಪಿರ್ಯಾದಿದಾರರಾದ ಶೀತಲ್ ಕುಮಾರ ಎಂ   ಜೈನ್ (40), ತಂದೆ: ಭುಜಬಲ ಹೆಗ್ಡೆ, ವಾಸ: ಚಂದ್ರ ನಿಲಯ ಹೌಸ್ ಮಾಳ ಚೌಕಿ ಮಾಳ ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇವರು ಕಾರ್ಕಳ ತಾಲೂಕು ಮಾಳ ಗ್ರಾಮದ ಮಾಳ ಚೌಕಿ ಸೌಟಬೆಟ್ಟು ಮನೆಯಲ್ಲಿ ಕುಟುಂಬಸ್ಥರ ಭೂತದ ಗುಡಿ ನವೀಕರಣ ಕಾಮಗಾರಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಈ ಬಗ್ಗೆ ದಿನಾಂಕ 30/01/2021 ರಂದು ಮಧ್ಯಾಹ್ನ 14:00 ಗಂಟೆಗೆ  ಪಿರ್ಯಾದಿದಾರರು ಸ್ಥಳಕ್ಕೆ ಹೋದಾಗ ಗುಡಿಯ ಬಳಿ ಇರುವ ಬಟ್ಟೆ ತೊಳೆಯುವ ಕಲ್ಲು ತೆಗೆಯುವ ವಿಚಾರವಾಗಿ  ಅವರ  ಅತ್ತೆಯೊಂದಿಗೆ ಮಾತುಕತೆ ನಡೆದಿದ್ದು, ನಂತರ ಪಿರ್ಯಾದಿದಾರರು ವಾಪಸು ಬರುತ್ತಿದ್ದಾಗ ಅತ್ತೆ  ಮಗನಾದ ಧೀರಜ್ ಜೈನ್  ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ  ಮಾಡಿ ಜೀವ ಬೆದರಿಕೆ ಹಾಕಿರುವುದಾಗಿದೆ. ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆ ಗೆ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 16/2021 ಕಲಂ: 341, 323,504 ,506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಜಾಹೀರಾತು 












Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget