ಬೆಳ್ಮಣ್:ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ಮಣ್ ನಲ್ಲಿ ನಡೆದಿದೆ.ಮೈಕಲ್ ಹೆನ್ರಿ ಫೆರ್ನಾಂಡೀಸ್ (50) ಆತ್ಮಹತ್ಯೆ ಮಾಡಿಕೊಂಡವರು.
ಬೆಳ್ಮಣ್ ಗ್ರಾಮದ ಪುನಾರು ಮನೆ ಎಂಬಲ್ಲಿರುವ ಇವರು ಮನೆಯಲ್ಲಿ ಓರ್ವರೇ ವಾಸವಾಗಿದ್ದು ಇದ್ದು ಹೆಂಡತಿ ಮತ್ತು ಮಗಳು ವಿದೇಶದಲ್ಲಿ ನೆಲಸಿದ್ದಾರೆ.ಅಲ್ಲದೆ ಇವರು ವಿಪರೀತ ಮದ್ಯಪಾನ ಸೇವಿಸುವ ಚಟವುಳ್ಳವನಾಗಿದ್ದು,ಇದೇ ಕಾರಣದಿಂದ ಮನನೊಂದು ತನ್ನ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 15/02/2021 ರಂದು ರಾತ್ರಿ 11:00 ಗಂಟೆಯಿಂದ 16/02/2021 ರಂದು ಬೆಳಿಗ್ಗೆ 12:೦೦ ಗಂಟೆಯ ಮಧ್ಯಾವಧಿಯಲ್ಲಿ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಜಾಹೀರಾತು
Post a comment