ಜೋಡುರಸ್ತೆ : ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಉದ್ಘಾಟನೆ-Times of karkala

ಕಾರ್ಕಳ : ಕಾರ್ಕಳ ಜೋಡುರಸ್ತೆ ಬ್ಯಾಂಕ್‌ ಆಫ್‌ ಬರೋಡ ಬಳಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರವು ಫೆ. 21ರಂದು ಉದ್ಘಾಟನೆಗೊಂಡಿತು. ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕ ಶಂಕರನಾರಾಯಣ ಭಟ್‌ ಮಳಿಗೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಆರೋಗ್ಯದ ಕುರಿತು ಪ್ರತಿಯೊಬ್ಬರು ಕಾಳಜಿ ವಹಿಸುವುದು ಅಗತ್ಯ. ಇದೀಗ ಕೇಂದ್ರ ಸರಕಾರ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಸ್ಥಾಪಿಸುವ ಮೂಲಕ ಎಲ್ಲರಿಗೂ ಕಡಿಮೆ ದರದಲ್ಲಿ ಔಷಧಿ ದೊರೆಯುವಂತಾಗಿದೆ. ಇಂತಹ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.


ಜಿ.ಪಂ. ಸದಸ್ಯ ಸುಮಿತ್‌ ಶೆಟ್ಟಿ ಕೌಡೂರು, ಕುಕ್ಕುಂದೂರು ಗ್ರಾ.ಪಂ. ಅಧ್ಯಕ್ಷೆ ಶಶಿಮಣಿ ನಕ್ರೆ, ತಾ.ಪಂ. ಸದಸ್ಯ ಅಶೋಕ್‌ ಶೆಟ್ಟಿ, ಗ್ರಾ.ಪಂ. ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಶರ್ಮಿಳಾ ಶೆಟ್ಟಿ, ಡಾ. ಕೃಷ್ಣ ಭಟ್‌, ಸಚ್ಚಿದಾನಂದ ರಾವ್‌, ಯೋಗೀಶ್‌ ಹೆಗ್ಡೆ, ಸಂದೀಪ್‌ ತುಳಸಿ ಮೊದಲಾದವರು ಉಪಸ್ಥಿತರಿದ್ದರು. 


ಜನೌಷಧಿ ಅಲೋಪತಿಕ್‌ ಮೆಡಿಸಿನ್ ಮಾತ್ರವಲ್ಲದೇ ಆಯುರ್ವೇದಿಕ್‌, ಕಾಸ್ಮೆಟಿಕ್‌, ಮಕ್ಕಳ ಹಾಗೂ ಹಿರಿಯರ ಡೈಪರ್‌, ಸರ್ಜಿಕಲ್‌, ಪ್ರೊಟೀನ್‌ ಪೌಡರ್‌ ಇನ್ನಿತರ ವೈದ್ಯಕೀಯ ಸಂಬಂಧಿತ ಸಾಮಗ್ರಿಗಳು ಲಭ್ಯವಿದೆ. ಬಿಪಿ, ಶುಗರ್‌, ಹಾರ್ಟ್‌ ಸಂಬಂಧಿತ ಸಮಸ್ಯೆಯವರು ಜನೌಷಧಿ ಪ್ರಯೋಜನವನ್ನು ಪಡೆದುಕೊಳ್ಳುವಂತೆ ವಿನಂತಿಸುತ್ತಿದ್ದೇವೆ ಎಂದು ಪಾಲುದಾರರಾದ ಸುಶಾಂತ್‌ ಹಾಗೂ ಸಂದೀಪ್‌ ಶರ್ಮಾ ತಿಳಿಸಿದ್ದಾರೆ.

Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget