ಸರಕಾರಿ ಕಾಮಗಾರಿಗಳ ಗುತ್ತಿಗೆದಾರರು ಜನಪ್ರತಿನಿಧಿಗಳಾಗಿರುವುದು ನಿಯಮ ಬಾಹಿರ:ಬೋಳ ಸದಾಶಿವ ಶೆಟ್ಟಿ-Times of karkala

ಕಾರ್ಕಳ: ಸರಕಾರದ ಕಾಮಗಾರಿಗಳನ್ನು ಗುತ್ತಿಗೆ ಪಡೆದ ಗುತ್ತಿಗೆದಾರರು ಜನಪ್ರತಿನಿಧಿಗಳಾದರೆ ಅವರಿಂದ ಜನಸಾಮಾನ್ಯರು ಯಾವುದೇ ನ್ಯಾಯವನ್ನು ನಿರೀಕ್ಷೆ ಮಾಡುವಂತಿಲ್ಲ, ಸರಕಾರದ ನಿಯಮಾವಳಿಯ ಪ್ರಕಾರ ಗುತ್ತಿಗೆದಾರ ಚುನಾವಣೆಗೆ ಸ್ಪರ್ಧಿಸುವಂತಿಲ್ಲ,ಆದರೆ ಪ್ರಸ್ತುತ ರಾಜಕಾರಣದಲ್ಲಿ ಗುತ್ತಿಗೆದಾರರೇ ತುಂಬಿದ್ದು ಈ ವ್ಯವಸ್ಥೆಯ ವಿರುದ್ದ ಹೋರಾಟ ನಡೆಸಲಾಗುತ್ತದೆ ಬಿಜೆಪಿ ಮುಖಂಡ ಹಾಗೂ ಶ್ರೀ ಸಾಯಿ ನಾಗರಿಕ ಸೇವಾ ಟ್ರಸ್ಟ್ನ ಗೌರವಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ ಹೇಳಿದ್ದಾರೆ.


ಅವರು ನಿಟ್ಟೆಯ ಖಾಸಗಿ ಹೊಟೇಲ್‌ನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಗುತ್ತಿಗೆದಾರನಾದವನು ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ಯಾವುದೇ ಲಾಭದಾಯಕ ಹುದ್ದೆ ಹೊಂದಿಲ್ಲ ಎನ್ನುವ ಘೋಷಣೆ ನೀಡಬೇಕು ಇದಲ್ಲದೇ ಗುತ್ತಿಗೆದಾರ ಜನಪ್ರತಿನಿಧಿಯಾಗಿ ತಾನು ಮಾಡಿದ ಕಾಮಗಾರಿಗಳ ಕಳಪೆ ಗುಣಮಟ್ಟ ಹಾಗೂ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವವರು ಯಾರು ಎನ್ನುವ ಪ್ರಶ್ನೆ ಮೂಡುತ್ತದೆ ಎಂದರು.ಗುತ್ತಿಗೆದಾರ ಯಾವುದೇ ರಾಜಕೀಯ ಪಕ್ಷದ ಪ್ರತಿನಿಧಿ ಆಗಿದ್ದರೂ ಆತ ತನ್ನ ಇತರೇ ಗುತ್ತಿಗೆದಾರರು ಕಳಪೆ ಕಾಮಗಾರಿ ನಡೆಸಿದರೆ ಅದನ್ನು ಪ್ರತಿಭಟಿಸದೇ ಆತನ ಬೆಂಬಲಕ್ಕೆ ನಿಲ್ಲುವ ಸಾಧ್ಯತೆಗಳಿವೆ, ಅಲ್ಲದೇ ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರನೇ ಜನಪ್ರತಿನಿಧಿಯಾಗಿದ್ದರೆ ಕಳ್ಳನಿಗೆ ದೂರು ಕೊಟ್ಟಂತೆ ಆಗುತ್ತದೆ, ಈ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳು ಗುತ್ತಿಗೆದಾರರನ್ನು ಹೊರಗಿಟ್ಟು ಸೇವಾ ಮನೋಭಾವನೆಯ ಗುಣವುಳ್ಳವರನ್ನೇ ಸೇರಿಸಿಕೊಳ್ಳಬೇಕೆಂದು ಆಗ್ರಹಿಸಿದರು.


ರಾಜಕೀಯ ಎನ್ನುವ ಕೇವಲ ಅಭಿವೃದ್ದಿ ಹಾಗೂ ಜನಸೇವೆಯ ಗುರಿಹೊಂದಬೇಕೇ ಹೊರತು ಅದನ್ನು ವ್ಯಾಪಾರ ,ಹಣ ಮಾಡುವ ದಂಧೆಯಾಗಿ ಬಳಸಿಕೊಳ್ಳಬಾರದು ಎಂದು ಸಲಹೆ ನೀಡಿದರು.


ಈ ಸಂದರ್ಭದಲ್ಲಿ ಸಾಯಿ ನಾಗರಿಕ ಸೇವಾಟ್ರಸ್ಟ್ ನ ಅಧ್ಯಕ್ಷ ಸೋಮಶೇಖರ್ ಶಟ್ಟಿ, ಕಾರ್ಯದರ್ಶಿ ಕಿಶೋರ್ ಕುಮಾರ್ ಮುಂತಾದವರಿದ್ದರು.

 

 ಜಾಹೀರಾತು 

 

 

 

 

 

 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget