ಪ್ರತಿಷ್ಠಿತ ಜೇಸಿಐ ಕಾರ್ಕಳ ರೂರಲಿನ ಅಧ್ಯಕ್ಷರಾಗಿ ಜೇಸಿ.ಆನಂದ ಮಾಳರವರು ಸರ್ವಾನುಮತದಿಂದ ಆಯ್ಕೆಯಾದರು. ಉಪಾಧ್ಯಕ್ಷ ರುಗಳಾಗಿ..ಜೇಸಿ ರಾಕೇಶ್ ಅಮೀನ್, ಜೇಸಿ ತಾರನಾಥ್ ಜಿ.ಕೋಟ್ಯಾನ್,ಅಭಿಷೇಕ್ ಸುವರ್ಣ, ಸದಾನಂದ ಸಾಲ್ಯಾನ್,ಸಂತೋಷ್ ಬಂಗೇರ, ಕಾರ್ಯದರ್ಶಿ ಯಾಗಿ ಜೇಸಿ.ಸುರೇಶ್ ಪೂಜಾರಿ, ಜತೆ ಕಾರ್ಯದರ್ಶಿ ಯಾಗಿ ಜೇಸಿ.ಸುಷ್ಮಾ ಶಾಜಿ, ಕೋಶಾಧಿಕಾರಿ ಯಾಗಿ ಜೇಸಿ.ಅರುಣ್ ಕುಮಾರ್, ಜೇಸಿರೆಟ್ ವಿಭಾಗದ ಅಧ್ಯಕ್ಷೆಯಾಗಿ ಜೇಸಿರೆಟ್.ಶ್ವೇತಾಅರುಣ್ ಕುಮಾರ್, ಜ್ಯೂನಿಯರ್ ಜೇಸಿ ವಿಭಾಗದ ಅಧ್ಯಕ್ಷರಾಗಿ ಜೇಜೇಸಿ.ಸೃಜನ್ ಸತೀಶ್, ಜೇಸಿರೆಟ್ ವಿಭಾಗದ ಸಂಯೋಜಕರಾಗಿ ಜೇಸಿ ಸದಾಶಿವ ನಕ್ರೆ, ಜ್ಯೂನಿಯರ್ ಜೇಸಿ ವಿಭಾಗದ ಸಂಯೋಜಕ ರಾಗಿ ಜೇಸಿ ಸುಚಿತ್ ಶೆಟ್ಟಿ , ಗೃಹ ಪತ್ರಿಕೆ "ಅಕ್ಷರ" ದ ಸಂಪಾದಕರಾಗಿ ಜೇಸಿ.ವೀಣಾರಾಜೇಶ್ಆಯ್ಕೆ ಯಾಗಿರುವರು.
ಆಯ್ಕೆ ಪ್ರಕ್ರಿಯೆ ಯನ್ನು ನಿಕಟಪೂರ್ವ ಅದ್ಯಕ್ಷ ರಾದ ಜೇಸಿ.ವೀಣಾರಾಜೇಶ್ ನೆರವೇರಿಸಿದರು.
ಹೋಟೇಲ್ ಕಟೀಲ್ ಇಂಟರ್ ನ್ಯಾಶನಲ್ ಸಭಾಂಗಣದಲ್ಲಿ ಮಾರ್ಚ್ 1 ರಂದು ನಡೆಯಲಿರುವ ಪದಗ್ರಹಣ ಸಮಾರಂಭದಲ್ಲಿ ವಲಯಾಧ್ಯಕ್ಷೆ ಜೇಸಿ ಸೌಜನ್ಯ ಹೆಗ್ಡೆ, ವಲಯ ಉಪಾಧ್ಯಕ್ಷರಾದ ಜೇಸಿ ಸತ್ಯ ನಾರಾಯಣ ಭಟ್ ಭಾಗವಹಿಸಲಿದ್ದಾರೆ.
ಜಾಹೀರಾತು
Post a comment