ಕಾರ್ಕಳ:ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ಆತ್ಮಹತ್ಯೆ-Times of karkala

 

ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕು ಇರ್ವತ್ತೂರು ಗ್ರಾಮದಲ್ಲಿ ನಡೆದಿದೆ.ದಾಕಯ್ಯ ಅಂಚನ್ (55) ಆತ್ಮಹತ್ಯೆ ಮಾಡಿಕೊಂಡವರು.

ಇರ್ವತ್ತೂರು  ಗ್ರಾಮದ ಬೋರ್ ದಡ್ಡು ಆಶ್ರಯ  ನಿವಾಸದಲ್ಲಿ ಕುಟುಂಬದೊಂದಿಗೆ ವಾಸ ಮಾಡಿಕೊಂಡಿದ್ದ ಇವರು ಸುಮಾರು 30 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು.

ಇದೇ ಕಾರಣದಿಂದ ಮನನೊಂದು  ದಿನಾಂಕ 12/02/2021 ರಂದು ಬೆಳಿಗ್ಗೆ 08:00 ಗಂಟೆಯಿಂದ ದಿನಾಂಕ 13/02/2021 ಬೆಳಿಗ್ಗೆ 09:30 ಗಂಟೆಯ ನಡುವಿನ ಅವಧಿಯಲ್ಲಿ ಇರ್ವತ್ತೂರು ಗ್ರಾಮದ ಅರಂತಬೆಟ್ಟು ಎಂಬ ಹಾಡಿಯಲ್ಲಿ ಸೊಂಟಕ್ಕೆ ಸುತ್ತಿಕೊಂಡಿರುವ ಕೇಸರಿ ಬಣ್ಣದ ಪಂಚೆಯಿಂದ ಯಾವುದೋ ಮರದ ಕೊಂಬೆಗೆ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಕುರಿತು ಅವರ ಪುತ್ರ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಿದ್ದಾರೆ


ಪೊಲೀಸ್ ವರದಿ:

ಕಾರ್ಕಳ: ಪಿರ್ಯಾದಿದಾರರಾದ ಮಹೇಶ್ ಸುವರ್ಣ (30) ತಂದೆ: ದಾಕಯ್ಯ ಅಂಚನ್ ವಾಸ: ಬೋರ್ ದಡ್ಡು ಆಶ್ರಯ ನಿವಾಸ ಇರ್ವತ್ತೂರು ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು ಉಡುಪಿ ಇವರ ತಂದೆ ದಾಕಯ್ಯ ಅಂಚನ್ (55) ಇವರು ಕಾರ್ಕಳ ತಾಲೂಕು ಇರ್ವತ್ತೂರು  ಗ್ರಾಮದ ಬೋರ್ ದಡ್ಡು ಆಶ್ರಯ  ನಿವಾಸದಲ್ಲಿ ಕುಟುಂಬದೊಂದಿಗೆ ವಾಸ ಮಾಡಿಕೊಂಡಿದ್ದು, ಸುಮಾರು 30 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು,  ಇದೇ ಕಾರಣದಿಂದ ಮನನೊಂದು  ದಿನಾಂಕ 12/02/2021 ರಂದು ಬೆಳಿಗ್ಗೆ 08:00 ಗಂಟೆಯಿಂದ ದಿನಾಂಕ 13/02/2021 ಬೆಳಿಗ್ಗೆ 09:30 ಗಂಟೆಯ ನಡುವಿನ ಅವಧಿಯಲ್ಲಿ ಇರ್ವತ್ತೂರು ಗ್ರಾಮದ ಅರಂತಬೆಟ್ಟು ಎಂಬ ಹಾಡಿಯಲ್ಲಿ ಸೊಂಟಕ್ಕೆ ಸುತ್ತಿಕೊಂಡಿರುವ ಕೇಸರಿ ಬಣ್ಣದ ಪಂಚೆಯಿಂದ ಯಾವುದೋ ಮರದ ಕೊಂಬೆಗೆ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್‌ ಕ್ರಮಾಂಕ 03/2021, ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.







ಜಾಹೀರಾತು 












Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget