ಮಿಯಾರು:ನಾಗದೋಷ,ಹುಡುಗಿಯ ದೋಷ ಮಾಟ ಮಂತ್ರದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಮೋಸ "ತಮ್ಮನ ಹೆಂಡತಿ ಮಾಟ ಮಾಡಿಸಿದ್ದಾಳೆ,ನಿನ್ನ ಹೆಂಡತಿಯನ್ನು ಕೊಂದುಬಿಡು" ಖತರ್ನಾಕ್ ಮಹಿಳೆಯ ಮಾತು ಕೇಳಿ ಲಕ್ಷಾಂತರ ರೂ ಕಳಕೊಂಡ! ಬೆಚ್ಚಿ ಬೀಳಿಸುತ್ತೆ ಈ ಸ್ಟೋರಿ-Times of karkala

ಮಿಯಾರು:ನಾಗದೋಷ,ಹುಡುಗಿಯ ದೋಷ ಮಾಟ ಮಂತ್ರದ ಹೆಸರಿನಲ್ಲಿ  ಲಕ್ಷಾಂತರ ರೂಪಾಯಿ  ಮೋಸ

"ತಮ್ಮನ ಹೆಂಡತಿ ಮಾಟ ಮಾಡಿಸಿದ್ದಾಳೆ,ನಿನ್ನ ಹೆಂಡತಿಯನ್ನು ಕೊಂದುಬಿಡು"

ಖತರ್ನಾಕ್ ಮಹಿಳೆಯ ಮಾತು ಕೇಳಿ ಲಕ್ಷಾಂತರ ರೂ ಕಳಕೊಂಡ!

ಬೆಚ್ಚಿ ಬೀಳಿಸುತ್ತೆ ಈ ಸ್ಟೋರಿ-Times of karkalaಮಿಯಾರು:ನಾಗದೋಷ, ಹುಡುಗಿಯ ದೋಷ ಮಾಟ ಮಂತ್ರದ ಹೆಸರಿನಲ್ಲಿ ವ್ಯಕ್ತಿಯೋರ್ವರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ಕಾರ್ಕಳ ತಾಲೂಕು ಮಿಯಾರಿನಲ್ಲಿ ನಡೆದಿದೆ.


ಕಾರ್ಕಳ ತಾಲೂಕು ಮಿಯ್ಯಾರು ಗ್ರಾಮ ಮಂಜಡ್ಕ ಮನೆ ನಿವಾಸಿ ಲೋಯ್‌ ಮಚಾದೋ (36), ವಂಚನೆಗೆ ಒಳಗಾದವರು.ಸುನೀತಾ ಮೆಂಡೋನ್ಸ ಪಂಗನಾಮ ಹಾಕಿದ ಮಹಿಳೆ.

ಲೋಯ್‌ ಮಚಾದೋರವರಿಗೆ  2014 ರಲ್ಲಿ ತನ್ನ ತಮ್ಮ ಜೋಯ್‌ಮಚಾದೋರವರ ಮುಖೇನ ಸುನೀತಾ ಮೆಂಡೋನ್ಸ  ರ  ಪರಿಚಯವಾಗುತ್ತದೆ.ಕಾಯಿಲೆಯಿಂದ ಬಳಲುತ್ತಿದ್ದ ಸುನೀತಾ ರವರನ್ನು ಮಾನವೀಯತೆಯ ದೃಷ್ಟಿಯಿಂದ ತನ್ನ ಮನೆಗೆ ಕರೆದುಕೊಡು ಬಂದಿದ್ದರು.ಕೆಲ ಸಮಯದ ಬಳಿಕ ಸುನೀತಾಳ ಗಂಡ ವಿದೇಶಕ್ಕೆ ಕರೆದುಕೊಂಡು ಹೋಗಿದ್ದು ಬಳಿಕ ಅಲ್ಲಿ ಕೆಲಸ ಸರಿಯಿಲ್ಲವೆಂದು ಇಬ್ಬರೂ ಊರಿಗೆ ಮರಳಿದ್ದರು.


ಬಳಿಕ ತಮ್ಮನ ಮದುವೆಗೆಂದು ಮಚಾದೋ ಊರಿಗೆ ಮರಳಿದ್ದರು.ಆಗ ಇವರನ್ನು ಸುನೀತಾ ತನ್ನ ಮನೆಗೆ ಭೋಜನಕ್ಕೆ  ಕರೆದಿದ್ದಳು.ಆಗ ಸುನೀತಾ ನನ್ನ ಖಾಯಿಲೆ ವಾಸಿಯಾಗಿದೆ ಗುರುಗಳೊಬ್ಬರು ರೂ.25,000 ಹಣವನ್ನು ಪಡೆದು ಖಾಯಿಲೆ ವಾಸಿ ಮಾಡಿದ್ದಾರೆ ಎಂದು ನಂಬಿಸಿದ್ದಳು.ಅಲ್ಲದೆ ನಿನ್ನ ಮನೆಗೆ ಯಾರೋ ಮಾಟ ಮಾಡಿಸಿದ್ದಾರೆ, ಇದನ್ನು ಗುರುಗಳ ಬಳಿ ಹೇಳಿ ಸರಿ ಮಾಡಿಸುತ್ತೇನೆ ಎಂದು ನಂಬಿಸಿದ್ದಳು.

ಅಲ್ಲದೆ ಗುರುಗಳ ಬಗ್ಗೆ ಕೇಳಿದಾಗ ಅವರ ಸಂಪರ್ಕ ಮಾಡಲು ಆಗುವುದಿಲ್ಲ ಹಾಗೆ ಆದಲ್ಲಿ ನಿನಗೆ ಹೆಚ್ಚು ತೊಂದರೆ ಆಗುತ್ತದೆ ಪ್ರಾರ್ಥನೆ ಫಲಿಸುವುದಿಲ್ಲ ಎಂದು ತಿಳಿಸಿದಳು. 


ಸುನೀತಾರ ಮಾತನ್ನು ನಂಬಿದ ಮಚಾದೋ ಗುರುಗಳಿಗೆ ಹಣವನ್ನು ಕೊಡಲು ಸುನೀತಾರಿಗೆ ಹಂತ ಹಂತವಾಗಿ ಹಣವನ್ನು ನೀಡಿದ್ದಾರೆ.ಇಷ್ಟು ಮಾತ್ರವಲ್ಲದೆ  "ನಿನಗೆ ಒಳ್ಳೆಯ ಜೀವನ ಸಂಗಾತಿ ಸಿಗಬೇಕಾದರೆ  ಗುರುಗಳಿಂದ ಪ್ರಾರ್ಥನೆ ಮಾಡಿಸಬೇಕು ತುಂಬಾ ಹಣ ಖರ್ಚು ಆಗುತ್ತದೆ ಹಣ ಕೊಡದಿದ್ದರೆ ನಿನ್ನ ಮದುವೆಯು ಖಂಡಿತ  ಆಗುವುದಿಲ್ಲ  ಎಂದು ಹೇಳಿ ಹಣವನ್ನು ಪಡೆದುಕಕೊಂಡಿದ್ದಾರೆ.

ಮಚಾದೋರವರಿಗೆ 2015 ರಲ್ಲಿ ಮದುವೆಯಾಗಿದ್ದು  ಮದುವೆಯ ಮರುದಿನ ಸುನೀತಾ ಪೋನ್‌ಮಾಡಿ ನಿನ್ನ ತಮ್ಮನ ಹೆಂಡತಿ ಮಾಟ ಮಂತ್ರ ಮಾಡಿ ಮದ್ದು ಹಾಕಿದ್ದಾರೆ ನಮ್ಮಿಬ್ಬರ ಜೀವ ಅಪಾಯದಲ್ಲಿದೆ, ನಿನ್ನ ಮನೆಯವರು ಸಾಯುತ್ತಾರೆ ನಿನ್ನ ಕುಟುಂಬ ಸರ್ವ ಸಾಶವಾಗುತ್ತದೆ. ಪ್ರಾರ್ಥನೆ ಮಾಡಲು ಗುರುಗಳಿಗೆ ಹಣ ಕೊಡಬೇಕು ಎಂದು ಹೇಳಿ ಹಣವನ್ನು ಪಡೆದಿರುತ್ತಾಳೆ.  


ಹಣ ಕೊಡಲು ಇನ್ನು ಹಣ ಕೊಡಲು ಇಲ್ಲ ಎಂದು ತಿಳಿಸಿದಾಗ "ನಿನಗೆ ನಿನ್ನ ಹೆಂಡತಿಯಿಂದಲೇ ಸಮಸ್ಯೆ ಉಲ್ಬಣಗೊಂಡದ್ದು ಅವಳನ್ನು ಕೊಂದು ಬಿಡು, ಹಣ ಮಾಡಿ ಕೊಡು"ಎಂದು ಹಣ ಹೇಳಿದ್ದಾರೆ. ಬೇರೆ ದಾರಿ ಕಾಣದೇ ಮಾಂಗಲ್ಯ ಸರ ಸೇರಿ ಎಲ್ಲವನ್ನು ಮಾರಿ ಸುಮಾರು ಹತ್ತು ಲಕ್ಷ ಹಣವನ್ನು ಹಂತಹಂತವಾಗಿ ಸುನೀತಾರಿಗೆ ನೀಡಿದ್ದಾರೆ. 


ತದನಂತರ ಸುನೀತಾ  ಹಣದ ಬೇಡಿಕೆ ಇಟ್ಟಾಗ ಮಚಾದೋ ತನ್ನ ಹೆಂಡತಿಯ ತಂದೆಯಿಂದ,ಸ್ನೇಹಿತರಿಂದ,ಅಣ್ಣನಿಂದ ಹಣವನ್ನು ಪಡೆದು ಅಲ್ಲದೆ ಮಾಂಗಲ್ಯ ಸರವನ್ನೂ ಅಡವಿಟ್ಟು ಸುನೀತಾರವರಿಗೆ ನೀಡಿದ್ದಾರೆ.ಆದರೆ ಸುನೀತಾರವರು  ನಂಬಿಕೆ ದ್ರೋಹ ಮಾಡಿ ವಂಚಿಸಿದ್ದಾರೆ ಎಂದು ಲೋಯ್‌ ಮಚಾದೋ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

 ಜಾಹೀರಾತು 

 

 

 

 

 

 


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget