March 2021

ವಿಪರೀತ ಕುಡಿತದ ಚಟ ಹೊಂದಿದ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಚ್ಚೂರು ಗ್ರಾಮದ ಮಂಡಗದ್ದೆಯಲ್ಲಿ ದಿನಾಂಕ ಮಾ.26 ರಂದು ಸಂಭವಿಸಿದೆ.ಕುಚ್ಚೂರು ಗ್ರಾಮದ ಮಂಡಗದ್ದೆ ನಿವಾಸಿ ಪ್ರಶಾಂತ  ಆಚಾರಿ (36) ಆತ್ಮಹತ್ಯೆ ಮಾಡಿಕೊಂಡವರು.


ಪ್ರಶಾಂತ  ಆಚಾರಿ ವಿಪರೀತ ಮದ್ಯಪಾನ ಮಾಡುವ ಚಟವನ್ನು ಹೊಂದಿದ್ದು ವಿಪರೀತ ಮದ್ಯಪಾನ ಮಾಡಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದವರನ್ನು ಕುಡಿತದ ಚಟವನ್ನು ಬಿಡಿಸಲು ಉಡುಪಿ ಜಿಲ್ಲಾ ಆಸ್ಪತ್ರೆ ಹಾಗೂ ಉಡುಪಿ ಬಾಳಿಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಕೂಡಾ ಕುಡಿತವನ್ನು ಬಿಟ್ಟಿರಲಿಲ್ಲ, ಹಾಗೂ ಈ ಹಿಂದೆ  2- 3 ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು.

ಇದೇ ವಿಚಾರದಲ್ಲಿ ಮನನೊಂದು ಮಾನಸಿಕ ಖಿನ್ನತೆಯಿಂದ ದಿನಾಂಕ ಮಾ.26 ರಂದು ರಂದು  ಬೆಳಿಗ್ಗೆ 11:00  ಗಂಟೆಯಿಂದ ಮಧ್ಯಾಹ್ನ 12:30  ಗಂಟೆಯ ಮಧ್ಯಾವಧಿಯಲ್ಲಿ ಕುಚ್ಚೂರು ಗ್ರಾಮದ ಮಂಡಗದ್ದೆ ಎಂಬಲ್ಲಿರುವ ತನ್ನ ವಾಸದ ಮನೆಯ ಮಾಡಿನ ಜಂತಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹೆಬ್ರಿ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಜಾಹೀರಾತು  
 

 

ಕಾರ್ಕಳ ವಿಧಾನಸಭಾ ವ್ಯಾಪ್ತಿಯಲ್ಲಿರುವ ಕಾರ್ಕಳ ಪುರಸಭೆಯು ನಿಮ್ಮ ಅಧಿಕಾರ ವ್ಯಾಪ್ತಿಗೆ ಒಳಪಡುತ್ತದೋ ಇಲ್ಲವೋ ಎಂಬ ಸಂಶಯ ಸಾರ್ವಜನಿಕರಿಗೆ ಮತ್ತು ಪುರಸಭೆಯ ಜನಪ್ರತಿನಿಧಿಗಳಾದ ನಮಗೆ ಕಾಡುತ್ತಿದೆ.ಯಾಕೆಂದರೆ ಸಮಸ್ಯೆಗಳ ಆಗರವಾಗಿರುವ ಪುರಸಭೆ ಆಡಳಿತದ ಬಗ್ಗೆ ತಾವು ಯಾವುದೇ ಕಾಳಜಿ ವಹಿಸದೆ ನಿರ್ಲಕ್ಷ ವಹಿಸಿರುವುದು ಈ ಸಂಶಯಕ್ಕೆ ಕಾರಣವಾಗಿದೆ. ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯ ಸಂದರ್ಭದಲ್ಲಿ ಸಂಸದರ ಜೊತೆಗೂಡಿ ಅಧಿಕಾರಕ್ಕಾಗಿ‌ ಬಂದು ಮತ ಚಲಾಯಿಸಿದ ನಂತರ ಯಾವತ್ತೂ ಪುರಸಭೆಯ ಆಡಳಿತದ ಬಗ್ಗೆ ಯಾವುದೇ ರೀತಿಯ ಮಾರ್ಗದರ್ಶನವಾಗಲಿ ಅಥವಾ ಚುನಾಯಿತ ಸರ್ವ ಸದಸ್ಯರ ಸಭೆಯನ್ನಾಗಲಿ ಮಾಡಿ ಸಲಹೆಗಳನ್ನು ನೀಡಿದ ಉದಾಹರಣೆಗಳೇ ಇಲ್ಲ.

 ಪ್ರಾಧಿಕಾರದ ಸಮಸ್ಯೆಯಿಂದಾಗಿ ಐನೂರಕ್ಕೂ ಹೆಚ್ಚು ಕಡತಗಳು ವಿಲೇವಾರಿಯಾಗದೆ ಉಳಿದುಕೊಂಡಿದೆ ಇದರ ಪರಿಣಾಮವಾಗಿ ಸ್ವಂತ ಮನೆಯ ಕನಸು ಕಂಡಿದ್ದ ಸಾರ್ವಜನಿಕರು ಕಣ್ಣೀರು ಹಾಕುತ್ತಿದ್ದಾರೆ.ಕಸ ವಿಲೇವಾರಿಯಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ ಪುರಸಭೆಯಲ್ಲಿ ಕಸ ವಿಲೇವಾರಿಯಾಗದೆ ಸಾರ್ವಜನಿಕರು ಹಿಂಸೆಯನ್ನು ಅನುಭವಿಸುತ್ತಿದ್ದು ಹಿಡಿಶಾಪ ಹಾಕುತ್ತಿದ್ದಾರೆ, ರಸ್ತೆ ಅಗಲೀಕರಣದ ಬಗ್ಗೆ ತಾವು ಯಾವದೇ ಶ್ರಮವಹಿಸದ  ಕಾರಣ ಆ ಕೆಲಸ ಅರ್ಧಕ್ಕೆ ನಿಂತು ಅಭಿವೃದ್ಧಿಗೆ ಹಿನ್ನಡೆಯಾಗಿದೆ. 


ಸಾರ್ವಜನಿಕರು ಸಣ್ಣ ಪುಟ್ಟ ಕೆಲಸಮಾಡಿಸಿಕೊಳ್ಳಲು ಅಧಿಕಾರಿಯೊಬ್ಬರಿಗೆ ಲಂಚ ನೀಡುಬೇಕಾದ ಪದ್ದತಿ ಪುರಸಭೆಯಲ್ಲಿ ಪ್ರಾರಂಭವಾಗಿದ್ದು ಅವರ ಹಣದ ದಾಹಕ್ಕೆ ಜನಸಾಮಾನ್ಯರು ಬಲಿಯಾಗುತ್ತಿದ್ದಾರೆ. ಈ ಬಗ್ಗೆ ತಮಗೆ ಅನೇಕ ದೂರುಗಳು ಬಂದರೂ ತಾವೂ ಯಾವ ಕಾರಣಕ್ಕೆ ಮೌನವಾಗಿದ್ದೀರಿ ಎನ್ನುವುದು ಪ್ರಶ್ನೆಯಾಗಿ ಉಳಿದಿದೆ ಪುರಸಭೆಯಲ್ಲಿ ನಿಮ್ಮ ಪಕ್ಷ‌ದ ಆಡಳಿತದ ಬಗ್ಗೆ ಭರವಸೆ ಇಟ್ಟವರು ನಿರಾಶರಾಗಿದ್ದಾರೆ. 


ಕೇಂದ್ರದಲ್ಲಿ, ರಾಜ್ಯದಲ್ಲಿ‌ ಮತ್ತು ಪುರಸಭೆಯಲ್ಲಿ ನಿಮ್ಮದೇ ಸರಕಾರವಿದೆ ತಾವು‌‌ ಸ್ವಲ್ಪ ಬಿಡುವು ಮಾಡಿಕೊಂಡು ಎಲ್ಲಾ ಸದಸ್ಯರ‌ ಜೊತೆ  ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಿದರೆ ತಮಗೆ ಸಂಪೂರ್ಣ ಸಹಕಾರ ಮತ್ತು ಸಲಹೆ ನೀಡಲು‌ ನಾವು ಸಿದ್ಧರಿದ್ದೇವೆ. ಪ್ರವಾಸೋದ್ಯಮದ ಕೇಂದ್ರವಾಗಿರುವ ಕಾರ್ಕಳ ಪುರಸಭೆಯ ಅಭಿವೃದ್ಧಿಗಾಗಿ ಮತ್ತು ಸಾರ್ವಜನಿಕರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ತಾವು ಗಮನಹರಿಸುವಂತೆ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇನೆ.

ಶುಭದ ರಾವ್ 

ಪುರಸಭಾ ಸದಸ್ಯರು

ಕಾರ್ಕಳ

 ಜಾಹೀರಾತು  
 

 

ಕಾರ್ಕಳ:ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಪದವಿ ಪರೀಕ್ಷೆಯಲ್ಲಿ ಮಂಜುನಾಥ ಪೈ ಸ್ಮಾರಕ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿನಿ ಸಹನಾ ಭಟ್ ಬಿಕಾಂ ವಿಭಾಗದಲ್ಲಿ 95.06% ಅಂಕಗಳೊಂದಿಗೆ ದ್ವಿತೀಯ ರ‌್ಯಾಂಕ್ ಗಳಿಸಿದ್ದಾರೆ.ಬಿಬಿಎ ವಿಭಾಗದಲ್ಲಿ ಸುಶ್ಮಿತಾ 89.14 ಅಂಕಗಳೊಂದಿಗೆ 9 ನೇ ರ‌್ಯಾಂಕ್ ಗಳಿಸಿದ್ದಾರೆ.


ಈ ಮೂಲಕ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮೊಟ್ಟಮೊದಲ ಬಾರಿಗೆ ಬಿಕಾಂ ವಿಭಾಗದಲ್ಲಿಯೂ ಸರಕಾರಿ ಕಾಲೇಜೊಂದು ರ‌್ಯಾಂಕ್ ಪಡೆದಂತಾಗಿದೆ.ಬಿಬಿಎ ವಿಭಾಗದಲ್ಲಿ ಎಂಪಿಎಂ ಕಾಲೇಜು ಇದುವರೆಗೆ ಒಟ್ಟು 21 ರ‌್ಯಾಂಕ್ ಗಳಿಸಿದೆ.

 ಜಾಹೀರಾತು  
 

 


ಹೆಬ್ರಿ:ಚಾರ ಪಂಚಾಯಿತಿ ವ್ಯಾಪ್ತಿಯ ಹಂದಿ ಕಲ್ಲು ಎಂಬಲ್ಲಿ ರೈತರೇ ಮರಳಿನ ಕಟ್ಟಾವನ್ನು ನಿರ್ಮಿಸಿ ಪರಿಸರದ ಸುಮಾರು 50 ಏಕರೆ ಕೃಷಿಗೆ ನೀರು ಸಂಗ್ರಹಿಸುವ ಕಾರ್ಯವನ್ನು ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಡ್ಯಾಮ್‌ ನಿರ್ಮಾಣ ಮಾಡಲು ಕಳೆದ ಹಲವು ವರ್ಷಗಳಿಂದ ಸರ್ಕಾರ ಮತ್ತು ಜನಪ್ರತಿನಿಧಿಗಳಿಗೆ ದಂಬಾಲು ಬಿದ್ದರೂ ಈ ತನಕ ಡ್ಯಾಮ್‌ ಆಗಿಲ್ಲ. 

 

ಕಳೆದ ಹಲವು ವರ್ಷಗಳಿಂದ 50 ಎಕರೆ ಭೂಮಿಯಲ್ಲಿ ನೀರು ನಿಲ್ಲುವಂತಹ ಮಣ್ಣಿನ ಕಟ್ಟವನ್ನು  ರೈತರಾದ ನಾವೇ ನಿರ್ಮಾಣ ಮಾಡುತ್ತಿದ್ದೇವೆ. ಎರಡು ದಿನದಲ್ಲಿ 50ರಿಂದ 60 ಜನರ ಪರಿಶ್ರಮದಿಂದ ಬೇಸಿಗೆ ಪೂರ್ತಿ ನೀರು ಭೂಮಿಗೆ, ಹಾಗೂ ಅಲ್ಲಿನ ಪ್ರಾಣಿ-ಪಕ್ಷಿಗಳಿಗೆ, ಮತ್ತು ಅಂತರ್ಜಲ ವೃದ್ಧಿಯಾಗಲು ಸಾಧ್ಯವಾಗುತ್ತದೆ. ನಮ್ಮ ತಂಡದ ಸಾಧನೆ ಎಲ್ಲ ಯುವಕರಿಗೆ ಸ್ಪೂರ್ತಿಯಾಗಲಿ ಎಂಬುದು ನಮ್ಮ ಉದ್ದೇಶ ಎಂದು ಪ್ರಗತಿಪರ ಯುವ ಕೃಷಿಕ ಮಿಥುನ್‌ ಶೆಟ್ಟಿ ಚಾರ ತಿಳಿಸಿದರು. 

 ಜಾಹೀರಾತು  
 

 


 ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇದರ ಸಹಭಾಗಿತ್ವದಲ್ಲಿ ಶ್ರೀ ಭುವನೇಂದ್ರ ಪ್ರೌಢಶಾಲೆ, ಕಾರ್ಕಳ ಇಲ್ಲಿ ನೂತನ ಇಂಟರಾಕ್ಟ್ ಕ್ಲಬ್ಬಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು  ನಡೆಯಿತು. ಪದಗ್ರಹಣ ಅಧಿಕಾರಿಯಾಗಿ ಅಸಿಸ್ಟೆಂಟ್ ಗವರ್ನರ್ ರೊ.ನವೀನ್ ಅಮೀನ್ ರವರು ಉಪಸ್ಥಿತರಿದ್ದರು. ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ನಿತ್ಯಾನಂದ ಪೈಯವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ರೊ. ಪ್ರಶಾಂತ ಬೆಳಿರಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.


ಇಂಟರಾಕ್ಟ್ ಕ್ಲಬ್ಬಿನ ಅಧ್ಯಕ್ಷರಾಗಿ ಕು.ಆಕಾಶ್ ಭಟ್ ಹಾಗೂ ಕಾರ್ಯದರ್ಶಿಯಾಗಿ ಕು. ರಂಗನಾಥ್ ಅಧಿಕಾರ ವಹಿಸಿಕೊಂಡರು.ರೊ.ನವೀನ್ ಅಮೀನ್ ಇಂಟರಾಕ್ಟ್ ಕ್ಲಬ್ಬಿನ ಧ್ಯೇಯೋದ್ದೇಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ವೃಂದಾ ಶೆಣೈಯವರು  ಅತಿಥಿಗಳನ್ನು ಸ್ವಾಗತಿಸಿದರು.ಇಂಟರಾಕ್ಟ್  ಕ್ಲಬ್ಬಿನ ಶಿಕ್ಷಕ ಸಂಯೋಜಕರಾದ ಶ್ರೀ ಸಂಜಯ್ ಕುಮಾರ್ ಧನ್ಯವಾದಗಳನ್ನಿತ್ತರು.ಕಾರ್ಯಕ್ರಮದಲ್ಲಿ ರೊ.ಸುರೇಂದ್ರ ನಾಯಕ್,ರೊ.ಪ್ರಕಾಶ್ ಪೈ ,ರೊ. ಅಬ್ದುಲ್ ರೆಹಮಾನ್,ರೊ. ಗೀತಾ ರಾವ್, ಸಹಶಿಕ್ಷಕರಾದ ಶ್ರೀ ಗಣೇಶ್ ಜಾಲ್ಸೂರು, ಶ್ರೀಮತಿ ಇಂದಿರಾ ಉಪಸ್ಥಿತರಿದ್ದರು.ಕು.ಪ್ರಿಯಾ ಪೈ ಕಾರ್ಯಕ್ರಮ ನಿರ್ವಹಿಸಿದರು.

 ಜಾಹೀರಾತು  
 

 

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget