ಕಾರ್ಕಳ:"2023ರಲ್ಲಿ ಕಾರ್ಕಳದಲ್ಲಿ ಕಾಂಗ್ರೆಸ್ ಗೆಲುವು ಶತಸಿದ್ದ.ಕಾರ್ಯಕರ್ತರ ಸರ್ವಸಮ್ಮತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗುವುದು" "ರೈತರ ಕಡೆಗಣನೆ ಮೋದಿಯವರ ದುರಂಹಕಾರದ ಪರಮಾವಧಿ" "ಕಾಂಗ್ರೆಸ್ ನ ಎಲ್ಲಾ ಯುವಕರು ಗೋಪಾಲ ಭಂಡಾರಿಯವರ ಆದರ್ಶ,ಸರಳತೆ ರೂಪಿಸಿಕೊಳ್ಳಬೇಕು"--ಎಂ.ವೀರಪ್ಪ ಮೊಯಿಲಿ "ಕಾಂಗ್ರೆಸ್ ಪಕ್ಷ ಇಂದು ಅಧಿಕಾರದಲ್ಲಿ ಇರದಿದ್ದರೂ ಜನರೊಂದಿಗೆ ಸದಾ ಇದೆ"-ಮಾಜಿ ಸಚಿವ ವಿನಯಕುಮಾರ್ ಸೊರಕೆ ಅಭಿನಂದನಾ ಸಭೆಯ ಸಂಪೂರ್ಣ ವರದಿ -ಟೈಮ್ಸ್ ಆಫ್ ಕಾರ್ಕಳ

ಕಾರ್ಕಳ:"2023ರಲ್ಲಿ ಕಾರ್ಕಳದಲ್ಲಿ ಕಾಂಗ್ರೆಸ್ ಗೆಲುವು ಶತಸಿದ್ದ.ಕಾರ್ಯಕರ್ತರ ಸರ್ವಸಮ್ಮತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗುವುದು" 

"ರೈತರ ಕಡೆಗಣನೆ ಮೋದಿಯವರ ದುರಂಹಕಾರದ ಪರಮಾವಧಿ"

"ಕಾಂಗ್ರೆಸ್ ನ ಎಲ್ಲಾ ಯುವಕರು ಗೋಪಾಲ ಭಂಡಾರಿಯವರ ಆದರ್ಶ,ಸರಳತೆ ರೂಪಿಸಿಕೊಳ್ಳಬೇಕು"--ಎಂ.ವೀರಪ್ಪ ಮೊಯಿಲಿ

"ಕಾಂಗ್ರೆಸ್ ಪಕ್ಷ ಇಂದು ಅಧಿಕಾರದಲ್ಲಿ ಇರದಿದ್ದರೂ ಜನರೊಂದಿಗೆ ಸದಾ ಇದೆ"-ಮಾಜಿ ಸಚಿವ ವಿನಯಕುಮಾರ್ ಸೊರಕೆ

ಅಭಿನಂದನಾ ಸಭೆಯ ಸಂಪೂರ್ಣ ವರದಿ 

-ಟೈಮ್ಸ್ ಆಫ್ ಕಾರ್ಕಳ 

ಕಾರ್ಕಳ:ಕಾಂಗ್ರೆಸ್ ನ ಎಲ್ಲಾ ಯುವಕರು ಗೋಪಾಲ ಭಂಡಾರಿಯವರ ಆದರ್ಶ,ಸರಳತೆ ರೂಪಿಸಿಕೊಳ್ಳಬೇಕು. ಅಧಿಕಾರದಲ್ಲಿ ಇಲ್ಲದಿದ್ದಾಗ ಕಾಂಗ್ರೆಸ್ ಗಟ್ಟಿಗೊಳಿಸುವ ಕೆಲಸ ನಿಜವಾದ ಸವಾಲಿನ ಕೆಲಸವಾಗಿದೆ. ಎಲ್ಲಿಯವರೆಗೆ ಬಡವರು ಕಷ್ಟಪಡುತ್ತಾರೆಯೇ ಅಲ್ಲಿ ತನಕ ಕಾಂಗ್ರೆಸ್ ಕೂಡ ಕಷ್ಟ ಎದುರಿಸಬೇಕಾಗುತ್ತದೆ,ಅಧಿಕಾರ ಇಲ್ಲದಿದ್ದರೂ ಬಡವರ ಕಷ್ಟಗಳಿಗೆ ಧ್ವನಿಯಾಗಬೇಕು ಎನ್ನುವುದೇ ಕಾಂಗ್ರೆಸ್ ಗುರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ಹಿರಿಯ ಮುಖಂಡ ಎಂ.ವೀರಪ್ಪ ಮೊಯ್ಲಿ ಹೇಳಿದರು.

ಅವರು ಕಾರ್ಕಳ ಮಂಜುನಾಥ ಪೈ ಸಾಂಸ್ಕೃತಿಕ ಸಭಾಂಗಣದಲ್ಲಿ ನಡೆದ ಅಭಿನಂದನಾ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಸ್ತೆ, ಶಾಲೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ,ಸೇತುವೆಗಳು ಹೀಗೆ ಹತ್ತಾರು ಅಭಿವೃದ್ಧಿ ಕೆಲಸಗಳಿಗೆ ಮುನ್ನುಡಿ ಬರೆದಿರುವ ಕಾಂಗ್ರೆಸ್ ಪಕ್ಷಕ್ಕೆ ಸ್ವಲ್ಪಮಟ್ಟಿಗೆ ಹಿನ್ನಡೆಯಾದರೂ ಮುಂದಿನ‌ ದಿನಗಳಲ್ಲಿ ನಮ್ಮ‌ ಪಕ್ಷದ ಸಾಧನೆಗಳಿಗೆ ಜನ ಹಿಡಿಯಲಿದ್ದಾರೆ ಎಂದು ಮೊಯ್ಲಿ ವಿಶ್ವಾಸ ವ್ಯಕ್ತಪಡಿಸಿದರು.ಸ್ವಾತಂತ್ರ್ಯದ ಆರಂಭದಲ್ಲಿ ಶೇ 14 ರಷ್ಟಿದ್ದ ಸಾಕ್ಷರತೆ ಇಂದು 80% ಕ್ಕೆ ಏರಿದೆ, ಕೈಗಾರಿಕೀಕರಣ,ಕೃಷಿ ಅಭಿವೃದ್ಧಿ ಮಾಡಿದೆ ಇದು ಕಾಂಗ್ರೆಸ್ ಸಾಧನೆಯಾಗಿದೆ ಎಂದರು.

ಜಿಲ್ಲಾ ಯುವ ಕಾಂಗ್ರೆಸ್ ನೂತನ ಅಧ್ಯಕ್ಷ ದೀಪಕ್ ಕೋಟ್ಯಾನ್,ಕಾರ್ಕಳ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ನಯನ್ ಇನ್ನಾ,ಹೆಬ್ರಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಶೆಟ್ಟಿ ಯವರಿಗೆ ಸನ್ಮಾನ

ಕಳೆದ 6 ವರ್ಷದಿಂದ ತೈಲ ಬೆಲೆ ಇಳಿದಿದ್ದರೂ ಜನರಿಂದ 22ಲಕ್ಷ ಕೋಟಿ ರೂಪಾಯಿ ಹಣವನ್ನು ವಸೂಲಿ ಮಾಡುತ್ತಿದ್ದಾರೆ, ಅಂದು ತೈಲ ಕಂಪನಿಗಳಿಂದ ನಷ್ಟ ವಸೂಲಿ ಮಾಡಲಾಗುತ್ತಿತ್ತು, ಆದರೆ ಪ್ರಸ್ತುತ ತೈಲ ಕಂಪನಿಗಳ ಪರವಾಗಿ ಮೋದಿ ಸರಕಾರ  ಕೆಲಸ ಮಾಡುತ್ತಿದ್ದು, ಜನರು ಬೆಲೆಯೇರಿಕೆಯಿಂದ ಕಂಗಾಲಾಗಿದ್ದಾರೆ.ಮೋದಿ ಸರಕಾರದ ತಪ್ಪು ನಿಲುವಿನಿಂದ ದೇಶದಲ್ಲಿ ಉದ್ಯೋಗ ಕಡಿತವಾಗುತ್ತಿದೆ, ಯುವಕರು ನಿರುದ್ಯೋಗಿಗಳಾಗಿ ತಿರುಗಾಡುತ್ತಿದ್ದಾರೆ.


ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಜನರ ಆದಾಯ ಶೇ 3ರಿಂದ 6 ಕ್ಕೆ ಏರಿದೆ ಆದರೆ ಪ್ರಸ್ತುತ ಅದು ಶೂನ್ಯಕ್ಕೆ ಇಳಿದಿದೆ.ದೇಶದ ಲಕ್ಷಾಂತರ ರೈತರು ರೈತ ವಿರೊಧಿ ಕಾಯಿದೆ ವಿರೋಧಿಸಿ ಬೀದಿಯಲ್ಲಿ ಮಲಗಿದ್ದರೂ ಪ್ರಧಾನಿ ಮೋದಿ ಒಂದೇ ದಿನವೂ ರೈತರ ಬಳಿ ಬಂದಿಲ್ಲ ಇದು ಮೋದಿಯವರ ದುರಂಹಕಾರದ ಪರಮಾವಧಿಯಾಗಿದೆ ಎಂದರು.

2023ರಲ್ಲಿ ಕಾರ್ಕಳದಲ್ಲಿ ಕಾಂಗ್ರೆಸ್ ಗೆಲುವು ಶತಸಿದ್ದ. ಕಾರ್ಯಕರ್ತರ ಸರ್ವಸಮ್ಮತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗುವುದುಹಳ್ಳಿ ಹಳ್ಳಿಯಲ್ಲಿ ಕಾಂಗ್ರೆಸ್ ಗಟ್ಟಿಯಾಗಬೇಕು , ಪಂಚ ರಾಜ್ಯಗಳ ಚುನಾವಣೆಯ ಬಳಿಕ ತಾನು ಕಾರ್ಕಳದಲ್ಲಿ ಪಕ್ಷ ಬಲವರ್ಧನೆಗೆ ನಿರಂತರವಾಗಿ ತೊಡಗಿಸಿಕೊಳ್ಳುವುದಾಗಿ ಮೊಯ್ಲಿಯವರು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕಾಂಗ್ರೆಸ್ ಪಕ್ಷದಲ್ಲಿ ಯುವಕರ, ವಿದ್ಯಾರ್ಥಿಗಳ ಕೊರತೆಯಿದೆ.ಅದನ್ನು ನೀಗಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಯುವ ಕಾಂಗ್ರೆಸ್ ಘಟಕಗಳನ್ನು ಬಲಪಡಿಸಲಾಗುತ್ತಿದೆ.ದೇಶಕ್ಕೆ ಸ್ವಾತಂತ್ರ್ಯ,ಸಂವಿಧಾನವನ್ನು ರೂಪಿಸಿದ ಪಕ್ಷ ಕಾಂಗ್ರೆಸ್ ಪಕ್ಷ , ದೇಶದಲ್ಲಿ ಪ್ರತಿಯೊಬ್ಬ ನಾಗರಿಕರನಿಗೂ ನೆಮ್ಮದಿಯ ಬದುಕು ಕೊಟ್ಟ ಕಾಂಗ್ರೆಸ್ ಪಕ್ಷ ಇಂದು ಅಧಿಕಾರದಲ್ಲಿ ಇರದಿದ್ದರೂ ಜನರೊಂದಿಗೆ ಸದಾ ಇದೆ ಎಂದರು.

ಕಾರ್ಕಳ ಕ್ಷೇತ್ರ ಇಂದಿರಾ ಗಾಂಧಿಯವರನ್ನು ಗೆಲ್ಲಿಸಿದ ಕ್ಷೇತ್ರ, ಈ ಕ್ಷೇತ್ರದ ಜನರ ಋಣ ತೀರಿಸಲು ಕಾಂಗ್ರೆಸ್ ಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಮೊಯ್ಲಿಯವರ ಸಿಇಟಿ ಜಾರಿಗೊಳಿಸಿದ ಪರಿಣಾಮ ಬಡವರ ಮನೆಯ ಮಕ್ಕಳು  ಡಾಕ್ಟರ್, ಇಂಜಿನಿಯರ್ ಆಗುವಂತಾಯಿತು. ಕಾಂಗ್ರೆಸ್ ಮಾಡಿದ ಹತ್ತುಹಲವು ಅಭಿವೃದ್ಧಿ ಕಾಮಗಾರಿಗಳನ್ನು ಜನರ ಮನಸ್ಸಿನಲ್ಲಿದೆ ಎಂದರು.

ತೈಲ ಬೆಲೆಯೇರಿಕೆ, ರೈತವಿರೋಧಿ ಕಾಯಿದೆಯ ಮೂಲಕ ಬಿಜೆಪಿ ಸರಕಾರ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಮುಂದಾಗಿದೆ, ದೇಶದ ಜಾತ್ಯಾತೀತತೆ, ಪ್ರಜಾಪ್ರಭುತ್ವವನ್ನು ಉಳಿಸುವ ಅನಿವಾರ್ಯತೆ ಎದುರಾಗಿದೆ, ಜನವಿರೋಧಿ ನೀತಿಯ ವಿರುದ್ಧ ತಾಲೂಕಿನಲ್ಲಿ ಬೃಹತ್ ಪಾದಯಾತ್ರೆ ಮಾಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಕಾಂಗ್ರೆಸ್ ಮುಖಂಡ ಬಿಪಿನ್ ಚಂದ್ರ ಪಾಲ್ ,  ಬೆಲೆಯೇರಿಕೆ, ತೈಲ ಬೆಲೆ ಹೆಚ್ಚಳದಿಂದ ಜನಸಾಮಾನ್ಯರು ಬಿಜೆಪಿಯ ವಿರುದ್ಧ ಹಿಡಿಶಾಪ ಹಾಕುತ್ತಿದ್ದು, ಮುಂದಿನ ದಿನಗಳಲ್ಲಿ ಬಿಜೆಪಿ ಸರಕಾರದ ಪತನ ನಿಶ್ಚಿತ ಎಂದು ಭವಿಷ್ಯ ‌ನುಡಿದರು. ಕಾಂಗ್ರೆಸ್ ಪಕ್ಷವು ಗ್ರಾಮ ಮಟ್ಟದಿಂದ ಸದೃಢವಾಗುತ್ತಿದ್ದು,ಬಿಜೆಪಿ ಸರಕಾರದ ಬೆಲೆಯೇರಿಕೆ, ದಬ್ಬಾಳಿಕೆಯೇ ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ,ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ, ಜಿಲ್ಲಾ ಯುವ ಕಾಂಗ್ರೆಸ್ ನೂತನ ಅಧ್ಯಕ್ಷ ದೀಪಕ್ ಕೋಟ್ಯಾನ್, ರವಿಶಂಕರ್ ಶೇರಿಗಾರ್, ಹೆಬ್ರಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ ದೇವಾಡಿಗ, ತಾ.ಪಂ‌ ಸದಸ್ಯ ಸುಧಾಕರ ಶೆಟ್ಟಿ, ಕಾರ್ಕಳ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ನಯನ್ ಇನ್ನಾ, ಹೆಬ್ರಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಶೆಟ್ಟಿ ,ನಗರ ಕಾಂಗ್ರೆಸ್ ಅಧ್ಯಕ್ಷ ಮಧುರಾಜ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕಾಂತಿ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.


 

 ಜಾಹೀರಾತು 


 

 

 

 

 

 

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget