ಕಾರ್ಕಳ:ಬೆಂಗಳೂರಿನಿಂದ ಕಾರ್ಕಳಕ್ಕೆ ಬಂದು ಕೇವಲ 5 ಸೆಂಟ್ಸ್ ಜಾಗದಲ್ಲಿ ಬಗೆಬಗೆಯ ಕೃಷಿ:ಲಾಕ್ ಡೌನ್ ಸಂದರ್ಭದಲ್ಲಿ ಬಡವರಿಗೆ ಉಚಿತವಾಗಿ ಹಂಚಿದ ಬಂಗ್ಲಗುಡ್ಡೆಯ ಜಯಂತಿ ನಾಯಕ್-Times of karkala ಬರಹ:ಚೇತನ್ ಪ್ರಭು

 

ಕಾರ್ಕಳ:ಬೆಂಗಳೂರಿನಿಂದ ಕಾರ್ಕಳಕ್ಕೆ ಬಂದು ಕೇವಲ 5 ಸೆಂಟ್ಸ್ ಜಾಗದಲ್ಲಿ ಬಗೆಬಗೆಯ ಕೃಷಿ:ಲಾಕ್ ಡೌನ್ ಸಂದರ್ಭದಲ್ಲಿ ಸ್ಥಳೀಯರಿಗೆ ಮತ್ತು ಬಡಕುಟುಂಬಕ್ಕೆ  ಉಚಿತವಾಗಿ ಹಂಚಿದ ಬಂಗ್ಲಗುಡ್ಡೆಯ  ಜಯಂತಿ ನಾಯಕ್

ಯುವಜನತೆ ಕೃಷಿ ಚಟುವಟಿಕೆಗಳಿಂದ ದೂರಸರಿದು, ಆಧುನಿಕ ಕಾಲದ ನಗರ ಸಂಸ್ಕೃತಿಗೆ ಮನಸೋಲುತ್ತಿರುವ ಈ ಸಂಧರ್ಭದಲ್ಲಿ ಇಲ್ಲೋರ್ವ ಮಹಿಳೆ ಕೇವಲ 5 ಸೆಂಟ್ಸ್ ಜಾಗದಲ್ಲಿ ಬಗೆಬಗೆಯ ತರಕಾರಿ-ಹಣ್ಣುಗಳನ್ನು ಬೆಳೆದು ಮಾದರಿಯಾಗಿದ್ದಾರೆ.

ಕಾರ್ಕಳ ಬಂಗ್ಲೆಗುಡ್ಡೆಯ  ನಿವಾಸಿ ಶ್ರೀಮತಿ ಜಯಂತಿ ನಾಯಕ್ ಹಂಚಿಕಟ್ಟೆ ಕೇವಲ 5 ಸೆಂಟ್ಸ್  ಜಾಗದಲ್ಲಿ ನೂರಾರು ಕೆಜಿಯಷ್ಟು ಬೇರೆ-ಬೇರೆ ರೀತಿಯ ತರಕಾರಿ-ಹಣ್ಣುಗಳನ್ನು ಬೆಳೆದುದಲ್ಲದೆ  ಲಾಕ್ ಡೌನ್ ಸಂದರ್ಭದಲ್ಲಿಸ್ಥಳೀಯರಿಗೆ ಮತ್ತು ಬಡಕುಟುಂಬಕ್ಕೆ  ಉಚಿತವಾಗಿ ನೀಡಿ ಪರೋಪಕಾರವನ್ನೂ  ಮೆರೆದಿದ್ದಾರೆ.  .

ಇವರು ತನ್ನ ಮಗನ ಉದ್ಯೋಗದ ಸಲುವಾಗಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಲಾಕ್ ಡೌನ್ ಸಂಧರ್ಭದಲ್ಲಿ  ವಾಪಸ್ಸು ಕಾರ್ಕಳಕ್ಕೆ ಮರಳಿದ್ದರು.ತಮ್ಮ ಮನೆಯ ಪಕ್ಕದಲ್ಲೆ ಪಾಳುಬಿದ್ದ 5 ಸೆನ್ಸ್ ಜಾಗದಲ್ಲಿ ವಿವಿಧ ತರಹದ  ತರಕಾರಿ, ಹಣ್ಣುಗಳು, ಹೂವುಗಳನ್ನು ಬೆಳೆದಿದ್ದಾರೆ.

ಹವಾಮಾನ ವೈಪರೀತ್ಯ,ಕಿಟ-ಇಲಿಗಳ ಉಪದ್ರದ ನಡುವೆಯು ಚಿಕ್ಕ ಜಾಗದಲ್ಲಿ 30-40 ರೀತಿಯ ಗಿಡಗಳನ್ನು ಬೆಳೆದದ್ದು ಎಲ್ಲಾರಿಗು ಆಶ್ಚರ್ಯ ಚಕಿತರಾಗುವಂತೆ ಮಾಡಿದೆ. ಅಷ್ಟೇ ಅಲ್ಲದೇ ಬೆಳೆದ ಎಲ್ಲಾ ತರಕಾರಿಯನ್ನು ಸ್ಥಳೀಯರಿಗೆ ಮತ್ತು ಕೆಲ ಬಡ ಕುಟುಂಬದವರಿಗೆ ಉಚಿತವಾಗಿ ಸಹ ನೀಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ನಗರದ ಬಣ್ಣ ಬಣ್ಣದ ಬದುಕಿನ ಕನಸುಕಾಣುವವರಿಗೆ ನಗರದಿಂದ ಹಳ್ಳಿಗೆ ಮರಳಿ ಕೃಷಿಯಲ್ಲಿ ಸಂತೋಷವನ್ನು ಕಂಡುಕೊಂಡಿದ್ದಾರೆ ಜಯಂತಿ ನಾಯಕ್ ನವರು.ಎಕರೆಗಟ್ಟಲೇ ಜಮಿನಿದ್ದು ಖಾಲಿಬಿಟ್ಟವರ ಮಧ್ಯೆ ಶ್ರೀಮತಿ ಜಯಂತಿ ನಾಯಕ್ ನವರು ವಿಭಿನ್ನವಾಗಿ  ಕಾಣಿಸುತ್ತಾರೆ.

ಬರಹ:ಚೇತನ್ ಪ್ರಭು 

 ಜಾಹೀರಾತು

 
 

 


Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget