"ಗೋಶಾಲೆ ದ್ವಂಸದ ಕುರಿತು ಶಾಸಕ ಸುನೀಲ್ ಕುಮಾರ್ ಮೌನ ಸಾಕಷ್ಟು ಸಂಶಯಕ್ಕೆ ಕಾರಣವಾಗಿದೆ"-ಕೃಷ್ಣ ಶೆಟ್ಟಿ ಬಜಗೋಳಿ-Times of karkala

ಕಾರ್ಕಳ:"ಪ್ರಪಂಚದ ಯಾವ ಭಾಗದಲ್ಲಿ ಏನೇ ಸಣ್ಣಪುಟ್ಟ ಘಟನೆಗಳು ನಡೆದರೂ ತಕ್ಷಣ ಅದಕ್ಕೆ ಮಾಧ್ಯಮದ ಮೂಲಕ ಪ್ರತಿಕ್ರಿಯೆ ನೀಡುವ ಕಾರ್ಕಳದ ಶಾಸಕ ಸುನೀಲ್ ಕುಮಾರ್ ಅವರು ಬಜಪೆ ಕೆಂಜಾರಿನ ಕಪಿಲಾ ಗೋಶಾಲೆ ಧ್ವಂಸದ ಬಗ್ಗೆ ಒಂದೇ ಒಂದು ಹೇಳಿಕೆ ಕೊಡದೇ ಇರುವುದು ಪರಮಾಶ್ಚರ್ಯ" ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಶೆಟ್ಟಿ ಬಜಗೋಳಿ ಆಶ್ಚರ್ಯವ್ಯಕ್ತಪಡಿಸಿದ್ದಾರೆ.  


"ಹಿಂದುತ್ವ, ಗೋಮಾತೆ ಎನ್ನುತ್ತಾ ರಾಜಕೀಯ ನೆಲೆಕಂಡುಕೊಂಡು ಕಾರ್ಕಳ ಶಾಸಕರಾದ ಸುನೀಲ್ ಕುಮಾರ್ ಅವರು ಕಪಿಲ ಗೋಶಾಲೆಯ ಧ್ವಂಸದ ಬಗ್ಗೆ ಮಾತನಾಡದೇ ಇರುವುದು,‌ ಗೋಶಾಲೆ ಧ್ವಂಸದ ಬಗ್ಗೆ ಮಾನ್ಯ ಶಾಸಕರ ಮೌನವು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ.ಇದು ಗೋ ಶಾಲೆಯ ತೆರವನ್ನು ಸಮರ್ಥಿಸುವಂತಿದ್ದು, ಇದರ ಹಿಂದೆ ಮೂಡುಬಿದಿರೆ ಶಾಸಕರ ಕರಾಳ ಕಮಿಷನ್ ದಂಧೆಯ ಬಗ್ಗೆ ಸಾರ್ವಜನಿಕರ ಆರೋಪಕ್ಕೆ ಪುಷ್ಟಿ ನೀಡುವಂತಿದೆ."

"ಹಿಂದುತ್ವ, ಗೋಮಾತೆಯ ವಿಚಾರ ಬಂದಾಗ ಮಾಧ್ಯಮಗಳಲ್ಲಿ ಸಿಡಿದೇಳುವ ಸುನೀಲ್ ಕುಮಾರ್ ಅವರು ಬಜಪೆ ಕಪಿಲ ಗೋಶಾಲೆಯ ದ್ವಂಸಕ್ಕೆ ಮಾತನಾಡದೇ ಮೌನವಹಿಸಿರುವುದು, ಆಡಳಿತ ಪಕ್ಷವೂ ನಿಮ್ಮದೇ ಆಗಿರುವುದರಿಂದ ಗೋಶಾಲೆ ದ್ವಂಸ ಪ್ರಕರಣವು ಹಲವಾರು ಸಂಶಯಗಳಿಗೆ ಕಾರಣವಾಗುತ್ತಿದೆ."

ಅವರದೇ ಪಕ್ಷದ ಕೆಲವು ಕಾರ್ಯಕರ್ತರು ಗೋಶಾಲೆ ಧ್ವಂಸದ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ ಈ ಪ್ರಕರಣದ ಕುರಿತು ಸುನೀಲ್ ಕುಮಾರ್ ಅವರು ಒಂದೇ ಒಂದು ಶಬ್ದ ಮಾತನಾಡದೇ ಇರುವುದು ಶಾಸಕರೂ ಗೋಶಾಲೆ ದ್ವಂಸದಲ್ಲಿ ಕೈ ಜೋಡಿಸಿದ್ದಾರೆಯೇ ಎನ್ನುವ ಬಗ್ಗೆ ಅನುಮಾನಗಳು ಮೂಡುತ್ತಿವೆ.ಈ ಬಗ್ಗೆ ಶಾಸಕರು ಕಾರ್ಕಳದ ಜನತೆಯ ಬಳಿ ಸ್ಪಷ್ಟೀಕರಣ ನೀಡಬೇಕು ಎಂದು  ಕೃಷ್ಣ ಶೆಟ್ಟಿ ಬಜಗೋಳಿ ಒತ್ತಾಯಿಸಿದ್ದಾರೆ.

 ಜಾಹೀರಾತು

 

  

 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget