"ಕಾಂಗ್ರೆಸ್ ಆಳ್ವಿಕೆಯು ಪ್ರಜಾ ಸುಖಂ: ರಾಜ ಸುಖಂ: ಸರಕಾರವಾಗಿತ್ತು,ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಆಳ್ವಿಕೆಯ ಸರಕಾರವು ಪ್ರಜಾ ದುಖಂ: ರಾಜಾ ಸುಖಂ: ಸರಕಾರವಾಗಿದೆ ಸುಶಾಂತ್ ಸುಧಾಕರ್
"ಕೊರೋನಾ ನಿರ್ವಹಣೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ವಿಫಲ" ಸುಧೀರ್ ಕುಮಾರ್ ಮರೊಳ್ಳಿ
ಅಜೆಕಾರು:ಕೇಂದ್ರ ಸರಕಾರದ ಬೆಲೆ ಏರಿಕೆ ಜನವಿರೋಧಿ ನೀತಿಗಳ ವಿರುದ್ಧ ಪ್ರತಿಭಟನಾ ಸಭೆ ನಡೆಯಿತು.ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾರ್ಕಳ ಸೇವಾದಳದ ಅಧ್ಯಕ್ಷ ಸುಶಾಂತ್ ಸುಧಾಕರ್ ಅವರು ಮಹಾತ್ಮ ಗಾಂಧಿಯವರು ದಂಡಿ ಯಾತ್ರೆಯನ್ನು ಆರಂಭಿಸಿದ ಶುಭದಿನದಂದು ಜನರನ್ನು ಜಾಗೃತಿಗೊಳಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ.
ಕಾಂಗ್ರೆಸ್ ಆಳ್ವಿಕೆಯು ಪ್ರಜಾ ಸುಖಂ: ರಾಜ ಸುಖಂ: ಸರಕಾರವಾಗಿತ್ತು.ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಆಳ್ವಿಕೆಯ ಸರಕಾರವು ಪ್ರಜಾ ದುಖಂ: ರಾಜಾ ಸುಋಂ: ಸರಕಾರವಾಗಿದೆ.ರೈತರ ಸಾಲ ಮನ್ನಾ ಮಾಡದೆ ಅಂಬಾನಿ ಅದಾನಿ ಗಳಂತ ಉದ್ಯಮಿಗಳ ಸಾಲ ಮನ್ನಾ ಮಾಡಿದೆ.ಇದು ಬಡಜನರ ಸರಕಾರ ಅಲ್ಲ ಉದ್ಯಮಿಗಳ ಪರವಾಗಿರುವ ಸರಕಾರ ಗ್ಯಾಸ್ ಪೆಟ್ರೋಲ್ ಡೀಸೆಲ್ ಬೆಲೆಗಳು ದಿನೇದಿನೇ ಹೆಚ್ಚುತ್ತಿದೆ ಬಡವರು ಕೂಲಿ ಕಾರ್ಮಿಕರಿಗೆ ಜೀವನ ಸಾಗಿಸುವುದೇ ಕಷ್ಟವಾಗಿದೆ ಎಂದರು.
ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಪೂಜಾರಿ ಮಾತನಾಡಿ ಜನಪರ ಆಡಳಿತ ಕೊಡಲು ಆಗದ ಬಿಜೆಪಿ ಸರಕಾರ ವೈಫಲ್ಯಗಳನ್ನು ಮರೆಮಾಚಲು ಸಿಡಿ ಹಿಂದೆ ಬಿದ್ದಿದೆ.ಕೇವಲ ಒಂದು ರೂಪಾಯಿ ಹೆಚ್ಚಳವಾದರೆ ಮಾರ್ಗದಲ್ಲಿ ಕುಳಿತು ಅಡುಗೆ ಮಾಡುತ್ತಿದ್ದ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಇನ್ನಿತರ ಬಿಜೆಪಿ ನಾಯಕರು ಈಗ ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು.ಕೆಪಿಸಿಸಿ ವಕ್ತಾರ ಸುದೀರ್ ಕುಮಾರ್ ಮುರೊಳ್ಳಿರವರು ಮಾತನಾಡಿ ಕೊರೋನಾ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ಕೊರೋನ ನಿರ್ವಹಣೆ ಮಾಡುವಲ್ಲಿ ಎಡವಿದ್ದಾರೆ ಮತ್ತು ಆ ಸಮಯದಲ್ಲಿ ಕಾರ್ಕಳದ ಶಾಸಕರು ಕಿಟ್ ಹಗರಣ ಸಿಮೆಂಟ್ ಹಗರಣ ಮಾಡುವಲ್ಲಿ ನಿರತರಾಗಿದ್ದರು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ರವರು ಮಾತನಾಡಿ ಭ್ರಷ್ಟ ಬಿಜೆಪಿ ಸರಕಾರವು ಬೀಡಿ ಕಾರ್ಮಿಕರ ಬದುಕನ್ನು ಕಸಿಯಲು ಹೊರಟಿದೆ.ಬಿಡಿಯೇ ನಂಬಿಕೊಂಡು ಬಂದ ಬಡವರಿಗೆ ಬಹಳ ತೊಂದರೆಯಾಗಿದೆ ಎಂದರು.
ಪ್ರತಿಭಟನಾ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ್ ಪೂಜಾರಿ ಅಜೆಕಾರು ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಾಮಕೃಷ್ಣ ಶೆಟ್ಟಿ ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೊಳ್ಳಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ದೀಪಕ್ ಕೋಟ್ಯಾನ್,ಜಿಲ್ಲಾ ಕಿಸಾನ್ ಕಾಂಗ್ರೆಸ್ಸಿನ ಪ್ರಕಾಶ್ ಪೂಜಾರಿ, ಸೇವಾದಳದ ಅಧ್ಯಕ್ಷರಾದ ಸುಶಾಂತ್ ಸುಧಾಕರ್,ಹೆಬ್ರಿ ಯುವ ಕಾಂಗ್ರೆಸ್ ನ ಉಪಾಧ್ಯಕ್ಷರಾದ ಆಸ್ಟಿನ್ ಪ್ರಸನ್ನ, ಪ್ರದೀಪ್ ಮುದ್ರಾಡಿ. ಅಬ್ದುಲ್ ಗಫೂರ್, ಎಣ್ಣೆಹೋಳೆ ಹಾಜಿ ಸಾಹೇಬ್, ಯಶೋಧಾ ಶೆಟ್ಟಿ ಸುನೀತಾ ಶೆಟ್ಟಿ, ಸತೀಶ್ ಅಂಬ್ಳೇಕರ್ ಬ್ಲಾಕ್ ಕಾಂಗ್ರೆಸ್ ಕಾರ್ಕಳ ಐ.ಟಿ ಸೆಲ್ ಅಧ್ಯಕ್ಷರಾದ ಸತೀಶ್ ಕಾರ್ಕಳ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಜಾಹೀರಾತು
Post a comment